ರಾಜಕೀಯ ತಿರುವು ಪಡೆದ, Koppalaದ ದೇವಸ್ಥಾನ ಜಿರ್ಣೋದ್ಧಾರ ವಿವಾದ

By Suvarna NewsFirst Published May 29, 2022, 5:24 PM IST
Highlights

ಕೊಪ್ಪಳದಲ್ಲಿ ಜೀರ್ಣೋದ್ಧಾರ ನೆಪದಲ್ಲಿ ದೇವಿಯೊಂದರ ಮೂರ್ತಿಯನ್ನು ಕಿತ್ತು ಹಾಕಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಅದೀಗ ರಾಜಕೀಯ ತಿರುವು ಪಡೆದುಕೊಂಡಿದೆ.

ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಮೇ.29): ಅದು ಪೌರಾಣಿಕವಾಗಿ ಬಹಳಷ್ಟು ಪ್ರಾಮುಖ್ಯತೆ ಪಡೆದಿದ್ದ ಕ್ಷೇತ್ರ. ಆ ಕ್ಷೇತ್ರದಲ್ಲಿ ಜಿರ್ಣೋದ್ಧಾರದ ನೆಪದಲ್ಲಿ ನಡೆದ ದೇವಸ್ಥಾನಗಳಿಗೆ ಧಕ್ಕೆ ಉಂಟಾದ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.‌  

Latest Videos

ಯಾವ ಕಾರಣಕ್ಕಾಗಿ ಪಾಲಿಟಿಕ್ಸ್: ಕೊಪ್ಪಳದಲ್ಲಿ (Koppal)  ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ಆನೆಗೊಂದಿಯಲ್ಲಿರುವ ಪಂಪಾಸರೋವರ ಹಾಗೂ ಅದರ ಸುತ್ತಮುತ್ತಲಿನ ದೇವಸ್ಥಾನಗಳ (Temple) ಜೀರ್ಣೋದ್ಧಾರ ಕೆಲಸ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.‌ ಸಾರಿಗೆ ಸಚಿವ ಬಿ ಶ್ರೀರಾಮುಲು ಪಂಪಾ ಸರೋವರ ಹಾಗೂ ಜಯಲಕ್ಷ್ಮೀ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುತ್ತಿದ್ದು ಕಳೆದ ನಾಲ್ಕು ದಿನಗಳ ಹಿಂದೆ ಜಯಲಕ್ಷ್ಮೀ ದೇವಿಯ ಮೂರ್ತಿ ಹಾಗೂ ಶ್ರೀಚಕ್ರವನ್ನು ಮೂಲ ಸ್ಥಾನದಿಂದ ಕಿತ್ತಲಾಗಿದೆ. 

ಮಳೆಗಾಲದಲ್ಲಿ ಹಾನಿ ಮಾಡೋ ರಾಜಕಾಲುವೆಗಳ ಪಟ್ಟಿ ಮಾಡಿದ BBMP

ಇದು ಸಹಜವಾಗಿಯೇ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಈ ವಿಷಯ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಇಂದು ಪಂಪಾಸರೋವರಕ್ಕೆ ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ನಿಯೋಗ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದು, ಪರಿಶೀಲನೆ ನಡೆಸಿದರು. 

ಕಾಂಗ್ರೆಸ್ ನಾಯಕರ ಭೇಟಿಗೆ ಎಚ್ಚೆತ್ತ ಶಾಸಕ ಮುನವಳ್ಳಿ: ಇನ್ನು ಸಚಿವ ಶ್ರೀರಾಮುಲು ಪಂಪಾಸರೋವರವನ್ನು ಜೀರ್ಣೋದ್ಧಾರ ಕೈಗೊಂಡ ಆರಂಭದಲ್ಲಿಯೇ ವಿರೋಧ ವ್ಯಕ್ತವಾಗಿತ್ತು.ಬಳಿಕ ಅದು ತಣ್ಣಗಾಗಿತ್ತು, ಆದರೆ ಇದೀಗ ಮತ್ತೇ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಈ ವಿಷಯವನ್ನಿ ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿರುವುದು ಬಿಜೆಪಿಯವರಿಗೆ ಸಹಜವಾಗಿಯೇ ನುಂಗಲಾರದ ತುತ್ತಾಗಿದೆ.

Ramanagaraದಲ್ಲಿ ಬಾಣಂತಿ-ಋತುಮತಿಯರಿಗೆ 30ದಿನ ಊರಹೊರಗೆ ವಾಸ್ತವ್ಯ!

ಇನ್ನು ಕಾಂಗ್ರೆಸ್ ನಾಯಕರು ಪಂಪಾಸರೋವರಕ್ಕೆ ಭೇಟಿ ನೀಡಿದ ವಿಷಯ ತಿಳಿಯುತ್ತಲೇ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ, ವಾಲ್ಮೀಕಿ ನಾಯಕ ಸಮುದಾಯದ ಮುಖಂಡರೊಂದಿಗೆ ಪಂಪಾಸರೋವರಕ್ಕೆ ಭೇಟಿ‌ ನೀಡಿದರು.‌ ಈ ವೇಳೆ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ  ,ಶ್ರೀರಾಮುಲು ಮೇಲೆ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪ ನಿರಾಧಾರವಾಗಿದ್ದು, ಸೂಕ್ತವಾದ ಆಧಾರ ನೀಡಲಿ ಎಂದು ಒತ್ತಾಯಿಸಿದರು.

ಮೂರ್ತಿಗಳಿಗೆ ಧಕ್ಕೆಯಿಂದ ಸ್ಥಳೀಯರ ಆತಂಕ: ಇನ್ನು ಪಂಪಾಸರೋವರ ಪ್ರದೇಶದಲ್ಲಿನ ಜಯಲಕ್ಷ್ಮೀ ದೇವಸ್ಥಾನ ಹಾಗೂ ಶ್ರೀಚಕ್ರಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ. ಇಲ್ಲಿ ಏನಾದರೂ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾದರೆ ಪೂಜೆ ಮಾಡಬೇಕಾಗುತ್ತದೆ. ಆದರೆ ಇದೀಗ ಜಿರ್ಣೋದ್ಧಾರದ ನೆಪದಲ್ಲಿ ಇವೆರಡಕ್ಕೆ ಧಕ್ಕೆಯಾಗಿರುವುದು ಸಹಜವಾಗಿಯೇ ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದು, ಏನಾದರೂ ಕೆಡಕಾಗಬಹುದು ಎಂದು ಸ್ಥಳೀಯರು ಭಯಪಡುತ್ತಿದ್ದಾರೆ.

Udupi; ಕಡಲಿನ ಒಡಲಿಂದ ಬರುತ್ತಿದೆ ಜಿಡ್ಡು,ಮತ್ಸ್ಯ ಸಂತತಿ ನಾಶದ ಭೀತಿ

ಇನ್ನು ಆರಂಭದಲ್ಲಿ ಕೇವಲ ಹಿಂದೂ ಪರ ಸಂಘಟನೆಗಳ ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದ ಪಂಪಾಸರೋವರದ ಜಿರ್ಣೋದ್ಧಾರದ ಕೆಲಸ ಇದೀಗ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಒಟ್ಟಿನಲ್ಲಿ ಪಂಪಾಸರೋವರದ ಜಿರ್ಣೋದ್ಧಾರದದ ಹೆಸರಿನಲ್ಲಿ ದೇವಸ್ಥಾನಗಳಿಗೆ ಧಕ್ಕೆಯಾಗಿರುವ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ.

ಸ್ಥಳೀಯರ ಆಕ್ರೋಶಕ್ಕೆ ಕಾರಣವೇನು?
ಇನ್ನು ಸಚಿವ ಬಿ ಶ್ರೀರಾಮುಲು ಮೈಸೂರಿನಲ್ಲಿರುವ ರಾಜ್ಯ ಪುರಾತತ್ವ ಇಲಾಖೆ (karnataka archaeological department) ಕಮೀಷನರ್ ಅವರಿಂದ  ಪಂಪಾಸರೋವರ ಜೀರ್ಣೋದ್ಧಾರಕ್ಕೆ ಪರವಾನಿಗೆ ಪಡೆದಿದ್ದಾರೆ. ಪರವಾನಿಗೆ ಪಡೆಯುವ ವೇಳೆಯಲ್ಲಿ ಜೀರ್ಣೋದ್ಧಾರ ಮಾಡಲು ದೇವಸ್ಥಾನಗಳು ಸೇರಿದಂತೆ ಯಾವುದೇ ಕಟ್ಟಡಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಷರತ್ತಿನ ಅನ್ವಯ  ಪರವಾನಿಗೆ ಪಡೆದಿದ್ದಾರೆ .ಆದರೆ ಇದೀಗ  ಜಯಲಕ್ಷ್ಮೀ ದೇಗುಲದ ಗರ್ಭ ಗುಡಿ ಕಿತ್ತು ಶ್ರೀಚಕ್ರ ಹಾಗೂ ದೇವತೆ ಮೂರ್ತಿ ಬೇರೆಡೆ ಇಟ್ಟಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಅಭಿವೃದ್ಧಿ ಹೆಸರಿ‌ನಲ್ಲಿ ನಿಧಿ ತೆಗೆಯವ ಶಂಕೆ
 ಇನ್ನು ಪೌರಾಣಿಕ ಹಿನ್ನೆಲೆಯುಳ್ಳ ಪಂಪಾಸರೋವರದ ಜಯಲಕ್ಷ್ಮೀ ದೇವಸ್ಥಾನ ವಿಜಯನಗರ ಸಾಮ್ರಾಜ್ಯದ ಕಾಲದ ದೇವಾಲಯವಾಗಿದೆ. ಹೀಗಾಗಿ  ದೇಗುಲದ ಗರ್ಭಗುಡಿ ದೇವತೆಯ ಮೂರ್ತಿ ತೆಗೆದು ಪಾಣಿ ಬಟ್ಲು ಬದಿಗೆ ಸರಿಸಿರುವುದು ಇತಿಹಾಸಕ್ಕೆ ಮಾಡಿದ ಅಪಚಾರವಾಗಿದೆ ಎನ್ನಲಾಗಿದೆ. ಜೊತೆಗೆ ನಿಧಿ ಆಸೆಗಾಗಿಯೂ ಜಯಲಕ್ಷ್ಮೀ ವಿಗ್ರಹವನ್ನು ಕಿತ್ತಿದ್ದಾರೆ ಎನ್ನುವ ಆರೋಪಗಳನ್ನು ಸಹ  ಕೇಳಿಬಂದಿವೆ.‌ 

ಮಧ್ಯ ರಾತ್ರಿ ಮೂಲ ವಿಗೃಹ ತೆರವು ಮಾಡಿದ್ದೇಕೆ ಎಂದು ಸಾರ್ವಜನಿಕರ ಪ್ರಶ್ನೆ ಮಾಡುತ್ತಿದ್ದು, ಸಮಗ್ರ ತನಿಖೆಗೆ ಮಾಡಬೇಕೆಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಹಂಪಿ ಪ್ರಾಧಿಕಾರ, ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

click me!