ಮಳೆಗಾಲದಲ್ಲಿ ಹಾನಿ ಮಾಡೋ ರಾಜಕಾಲುವೆಗಳ ಪಟ್ಟಿ ಮಾಡಿದ BBMP

By Suvarna News  |  First Published May 29, 2022, 4:23 PM IST

ಬಿಬಿಎಂಪಿಯಿಂದ ಮಳೆಗಾಲದ ಅವಾಂತರ ತಡೆಯಲು ಕ್ರಮ ಕೈಗೊಳ್ಳಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ರಾಜಕಾಲುವೆಗಳ ಲಿಸ್ಟ್ ರೆಡಿ ಮಾಡಿದೆ.


ವರದಿ: ವಿಕ್ರಮ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್  

ಬೆಂಗಳೂರು (ಮೇ.29): ನಗರದಲ್ಲಿ ಕಳೆದ ಒಂದು ತಿಂಗಳಿನಿಂದ ಸುರಿದ ಅಕಾಲಿಕ ಮಳೆಗೆ (Rain) ಜನ ಜೀವನವೇ ಅಸ್ತವ್ಯಸ್ತಗೊಂಡಿದ್ದು, ಅದೆಷ್ಟೋ ಜನರು ಬಿಬಿಎಂಪಿ (BBMP) ಸರಿಯಾಗಿ ಅವರ ಕೆಲಸ ಮಾಡಿದ್ರೆ ಈ ರೀತಿ ಆಗ್ತಿರ್ಲಿಲ್ಲ ಅಂತ ಹಿಡಿ ಶಾಪ ಹಾಕಿ, ನೂರಾರು ದೂರುಗಳನ್ನು ನೀಡಿದ್ರು. ಇದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಇದೀಗ ಮಳೆಗಾಲಕ್ಕೂ ಮುನ್ನವೇ ಯಾವ್ಯಾವ ರಾಜಕಾಲುವೆಯಿಂದ ಅತೀ ಹೆಚ್ಚು ಸಮಸ್ಯೆ ಉಂಟಾಗ್ತಿದೆ ಅನ್ನೋದರ ಲಿಸ್ಟ್ ರೆಡಿ ಮಾಡಿದೆ.

Latest Videos

undefined

ಕಳೆದ ಒಂದು ತಿಂಗಳ ಅವಧಿಯಲ್ಲಿ ಸುರಿದ ಮಳೆಯಿಂದಾಗಿ ಅದೆಷ್ಟೋ ಮನೆಗಳಿಗೆ ನೀರು ನುಗ್ಗಿ ನೂರಾರು ಸಂಸಾರಗಳು ಬೀದಿಗೆ ಬಂದಿದ್ವು. ಇದಕ್ಕೆಲ್ಲ ವರುಣರಾಯನೇ ಕಾರಣ ಅಂತ ಹೇಳಿದ್ರೆ ತಪ್ಪಾಗುತ್ತೆ, ಇದಕ್ಕೆ ಬಹುಮುಖ್ಯ ಕಾರಣ ಅಂದ್ರೆ ನಿರ್ವಹಣೇಯೇ ಇಲ್ಲದಿರೋ ರಾಜಕಾಲುವೆ (Rajakaluve). 

ಬೆಂಗಳೂರಿನದ್ಯಂತ ಹಬ್ಬಿರುವ ರಾಜಕಾಲುವೆಯಿಂದಲೇ ಸಾಕಷ್ಟು ಅವಾಂತರ ಸೃಷ್ಟಿ ಆಗಿತ್ತು. ಈ ಹಿನ್ನೆಲೆ ಮುಂಬರುವ ಮಳೆಗಾಲಕ್ಕೂ ಮುಂಚಿತವಾಗಿ ರಾಜಕಾಲುವೆ ನಿರ್ವಹಣೆ ಮಾಡಬೇಕು ಎಂಬ ಖಡಕ್ ಸೂಚನೆಯನ್ನ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ (BBMP Commissioner Tushar Girinath) ಅಧಿಕಾರಿಗಳಿಗೆ ನೀಡಿದ್ದು, ಅದರ ಬೆನ್ನಲ್ಲೇ ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಸಮಸ್ಯೆ ಆಗುವ ರಾಜಕಾಲುವೆಯ ಲಿಸ್ಟನ್ನ ರೆಡಿ ಮಾಡಲಾಗಿದೆ.

CET 2022ಗೆ ಅರ್ಜಿ ಸಲ್ಲಿಸಲು ಕೊನೆ ಅವಕಾಶ, 2 ದಿನ ವಿಂಡೋ ರೀ ಓಪನ್

ಬಿಬಿಎಂಪಿ ( Bruhat Bengaluru Mahanagara Palike) ಲಿಸ್ಟ್ ನಲ್ಲಿ ಒಟ್ಟು 72 ರಾಜಕಾಲುವೆ ಡೇಂಜರ್ ಝೋನ್ ನಲ್ಲಿದೆ ಎಂದು ಪಟ್ಟಿ ಮಾಡಲಾಗಿದ್ದು, ಈ ಪೈಕಿ 27 ರಾಜಕಾಲುವೆ ಸಾಮಾನ್ಯ ಮಳೆಗೂ ಉಕ್ಕಿ ಹರಿಯುವಂತಹ ಪರಿಸ್ಥಿತಿಯಲ್ಲಿದೆ. ಇದರ ಹೊರತಾಗಿ 45 ಕಡೆಗಳಲ್ಲಿ ವಿಪರೀತ ಮಳೆಯಾದರೆ ಡೇಂಜರ್ ಎಂದು ಬಿಬಿಎಂಪಿ ಪಟ್ಟಿ ಮಾಡಿದೆ.

ಬಿಬಿಎಂಪಿ ಪಟ್ಟಿ ಮಾಡಿರುವ ವಲಯವಾರು ಅತಿ ಸೂಕ್ಷ್ಮ ಮತ್ತು ಸೂಕ್ಷ್ಮ ಪ್ರದೇಶ ಎಷ್ಟು ಅನ್ನೋದನ್ನ ನೋಡೋದಾದ್ರೆ: 
ಪೂರ್ವ ವಲಯ : 05 - 05
ಪಶ್ಚಿಮ ವಲಯ : 03 - 08
ದಕ್ಷಿಣ ವಲಯ : 03 - 02 
ಯಲಹಂಕ ವಲಯ : 04 - 00
ಮಹಾದೇವಪುರ ವಲಯ : 04 - 10
ಬೊಮ್ಮನಹಳ್ಳಿ ವಲಯ : 05 - 03
ಆರ್‌ಆರ್ ನಗರ ವಲಯ : 03 - 07
ದಾಸರಹಳ್ಳಿ ವಲಯ : 00 - 10

ಇನ್ನು ಬಿಬಿಎಂಪಿ ಲಿಸ್ಟನಲ್ಲಿರುವ 
ಹತ್ತು ಪ್ರಮುಖ ಅತಿ ಸೂಕ್ಷ್ಮ ಜಾಗಗಳು ಇಂತಿವೆ: 
1. ಗಾಳಿ ಆಂಜನೇಯ ದೇವಸ್ಥಾನ, ಮೈಸೂರು ರಸ್ತೆ
2. ನಾಯಂಡಹಳ್ಳಿ ಜಂಕ್ಷನ್ ಮೈಸೂರು ರಸ್ತೆ
3. ಎಲ್ ಬಿ ಎಸ್ ನಗರ, ಯಲಹಂಕ
4. ಸೋಮೇಶ್ವರ ಲೇಔಟ್, ಅರೆಕೆರೆ
5. ವಾರ್ಡ್ 160, BEML 5ನೇ ಹಂತ, ಆರ್ ಆರ್ ನಗರ
6. ಡಿಯಾಟ್ ಕಾಲೇಜು, ಆರ್ ಆರ್ ನಗರ
7. ಮಹಾವೀರ ಅಪಾರ್ಟ್ಮೆಂಟ್, ಚಿಕ್ಕಸಂದ್ರ
8. ಗಾರ್ಡನ್ ಲೇಔಟ್, HSR ಲೇಔಟ್
9. ವಾರ್ಡ್ 191, ಕಂಟ್ರಿ ಕ್ಲಬ್ ರಸ್ತೆ, ಸಿಂಗಸಂಧ್ರ 
10. ಮೀನಾಕ್ಷಿ ಕಾಲೇಜು ಹಿಂಭಾಗ, ಯಲಹಂಕ ಕೆರೆ, ಯಲಹಂಕ

NEET 2022; ಡಿಎಂಕೆ ವಿರೋಧದ ನಡುವೆಯೂ Tamil Nadu ಟಾಪ್ 3!

ಪೂರ್ವ ಸಿದ್ಧತೆ ಕ್ರಮವಾಗಿ ಬಿಬಿಎಂಪಿಯಿಂದ ಮಳೆಗಾಲದ ಅವಾಂತರ ತಡೆಯಲು ಕ್ರಮ ಕೈಗೊಳ್ಳಲು ಮುಂದಾಗಿದ್ದು, ಸಾಧ್ಯವಾದಷ್ಟು ಮಳೆಗಾಲಕ್ಕೂ ಮುನ್ನ ಹೂಳು ಎತ್ತುವ ಕಾರ್ಯ ಮಾಡುವಂತೆ ಹಾಗೂ ಪ್ರತಿ ಅತಿಸೂಕ್ಷ್ಮ ಹಾಗೂ ಸೂಕ್ಷ್ಮ ಪ್ರದೇಶದಲ್ಲಿ  ಮರಳು ಮೂಟೆ (Sand Bag) ಸಿದ್ಧ ಪಡಿಸಲು ನಿರ್ಧಾರ ಮಾಡಿದೆ. ಅಷ್ಟೇ ಅಲ್ಲದೆ ನೀರು ನುಗ್ಗಿ ಅವಾಂತರ ಆಗುವ ಮನೆಗಳಲ್ಲಿ ಪಂಪ್ ಸೆಟ್ ಇಡಲು ಪಾಲಿಕೆ ತೀರ್ಮಾನ ಮಾಡಿದೆ.

ಒಟ್ನಲ್ಲಿ ಮಳೆಗಾಲಕ್ಕೂ ಮುನ್ನ ಒಂದಿಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಬಿಬಿಎಂಪಿ ತೀರ್ಮಾನಿಸಿದ್ದು, ಇವೆಲ್ಲ ಕೆಲಸಗಳು ಕಾರ್ಯರೂಪಕ್ಕೆ ಬರಲಿದ್ಯೋ ಅಥವಾ ಕೇವಲ ಹೇಳಿಕೆಗೆ ಸೀಮಿತ ಆಗುತ್ತಾ ಅಂತ ಕಾದು ನೋಡಬೇಕಿದೆ.

click me!