ಇದೀಗ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ವೀಡಿಯೋ ವೈರಲ್ ಆಗಿದೆ. ಇದರಿಂದ ಸಾಕಷ್ಟು ಅನುಮಾನಗಳು ಹುಟ್ಟುತ್ತಿವೆ. ಗಣಿಧಣಿ ಚುನಾವಣೆ ಸ್ಪರ್ಧೆ ವಿಚಾರವು ರಾಜಕೀಯ ವಲಯದಲ್ಲಿ ಸದ್ದಾಗುತ್ತಿದೆ.
ಚಿತ್ರದುರ್ಗ (ಮಾ.03): ಬಳ್ಳಾರಿಯ ಗಣಿದೊರೆ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭವಿಷ್ಯದ ರಾಜಕಾರಣಕ್ಕೆ ಹಿರಿಯೂರು ಕ್ಷೇತ್ರವನ್ನು ಭೂಮಿಕೆಯನ್ನಾಗಿಸಿಕೊಳ್ತಾರಾ? ಎರಡು ದಿನಗಳ ಹಿಂದೆ ವಾಣಿವಿಲಾಸಪುರದ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಸ್ನೇಹಿತರ ತೋಟದ ಮನೆಯಲ್ಲಿ ಕೆಲಕಾಲ ಜನಾರ್ದನ ರೆಡ್ಡಿ ತಂಗಿರುವುದೇ ಸಾರ್ವಜನಿಕ ವಲಯದಲ್ಲಿ ಇಂಥಹದ್ದೊಂದು ಪ್ರಶ್ನೆ ಹರಿದಾಡಲು ಕಾರಣವಾಗಿದೆ.
ಜೊತೆಗೆ ತೋಟದ ಮನೆಯಲ್ಲಿ ಗೌಪ್ಯ ಸಭೆ ನಡೆಸಿರುವ ವೀಡಿಯೋ ವೈರಲ್ ಆಗಿರುವುದೂ ಈ ಅನುಮಾನಗಳು ಬಲವಾಗಲು ಕಾರಣವಾಗಿದ್ದು ಮುಂದಿನ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಇಲ್ಲವೇ ಅವರ ಪತ್ನಿ ಹಿರಿಯೂರಿನಲ್ಲಿ ನಿಲ್ಲುವುದು ಖಚಿತ ಎಂದೇ ಹೇಳಲಾಗುತ್ತಿದೆ.
undefined
ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾಗೆ ಬಿಗ್ ರಿಲೀಫ್ ...
ಈ ಹಿಂದೆ ಬೆಂಗಳೂರಿನಲ್ಲಿ ಕಾರ್ಪೋರೇಟರ್ ಆಗಿದ್ದ ಪೂರ್ಣಿಮಾ ಶ್ರೀನಿವಾಸ್ ಕಳೆದ ಬಾರಿ ಇಲ್ಲಿಂದ ಸ್ಪರ್ಧಿಸಿ ಗೆದ್ದರು. ಮಾಜಿ ಸಚಿವ ಡಿ.ಸುಧಾಕರ್ 2 ಬಾರಿ ಇದೇ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯ ಸಾಧಿಸಿದ್ದರು. ಇಂತಹ ಪ್ರಯತ್ನ ತಾವೇಕೆ ಮಾಡಬಾರದು ಎಂಬ ಇಂಗಿತ ಕೂಡಾ ಜನಾರ್ದನ ರೆಡ್ಡಿ ಅವರದ್ದಾಗಿ ಎನ್ನಲಾಗುತ್ತಿದೆ. ಏತನ್ಮಧ್ಯೆ ಗಾಲಿ ಜನಾರ್ದನ ರೆಡ್ಡಿ ಹಿರಿಯೂರು ಕಡೆ ಕಣ್ಣಾಯಿಸಲು ಶಾಸಕ ತಿಪ್ಪಾರೆಡ್ಡಿ ಸಲಹೆ ನೀಡಿರಬಹುದು ಎಂಬ ಗುಮಾನಿಗಳು ಹರಿದಾಡುತ್ತಿವೆ.