'ಪ್ರಧಾನಿ ಮೋದಿ ವಿಶ್ವವೇ ಮೆಚ್ಚಿದ ಜನನಾಯಕ'

Kannadaprabha News   | Asianet News
Published : Mar 03, 2021, 10:59 AM ISTUpdated : Mar 03, 2021, 11:01 AM IST
'ಪ್ರಧಾನಿ ಮೋದಿ ವಿಶ್ವವೇ ಮೆಚ್ಚಿದ ಜನನಾಯಕ'

ಸಾರಾಂಶ

ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾದ ಕೇಂದ್ರ ಹಾಗೂ ರಾಜ್ಯ ಸರ್ಕಾರ| ಪ್ರಧಾನಿ ಮೋದಿ ರೈತಪರ ಕಾಳಜಿ ಇಟ್ಟುಕೊಂಡು ಕೃಷಿ ಸಮ್ಮಾನ ಯೋಜನೆಗೆ 6 ಸಾವಿರ ನೀಡಿದರೆ ಇತ್ತ ಯಡಿಯೂರಪ್ಪ ಯೋಜನೆಗೆ 4 ಸಾವಿರ ಸೇರಿದಂತೆ ರೈತರ ಕೃಷಿ ಚಟುವಟಿಕೆಗಳಿಗಾಗಿ ವರ್ಷಕ್ಕೆ 10 ಸಾವಿರ ನೀಡುತ್ತಿರುವುದು ರೈತರ ಪಾಲಿಗೆ ಆಶಾಕಿರಣ: ಹಾಲಪ್ಪ ಆಚಾರ್‌| 

ಯಲಬುರ್ಗಾ(ಮಾ.03): ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸುಭದ್ರ ಆಡಳಿತ ನಡೆಸುವ ಮೂಲಕ ಇಡೀ ವಿಶ್ವವೇ ಮೆಚ್ಚುವ ಜನನಾಯಕರಾಗಿದ್ದಾರೆ ಎಂದು ಶಾಸಕ ಹಾಲಪ್ಪ ಆಚಾರ್‌ ಹೇಳಿದ್ದಾರೆ.

ತಾಲೂಕಿನ ಗುನ್ನಾಳ ಹಾಗೂ ಹುಣಿಸಿಹಾಳ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಅನುದಾನ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. 

ಕುಡಿಯುವ ನೀರು, ರಸ್ತೆ ಡಾಂಬರೀಕರಣ, ಸಿಮೆಂಟ್‌ ರಸ್ತೆ, ವಸತಿ ನಿರ್ಮಾಣ, ಕೆರೆ, ಚೆಕ್‌ಡ್ಯಾಂ, ಗ್ರಾಮೀಣ ಭಾಗದ ಮಹಿಳೆಯರಿಗಾಗಿ ಉದ್ಯೋಗ ಕಲ್ಪಿಸಲು ನರೇಗಾ ಯೋಜನೆ, ಸಾರಿಗೆ ವ್ಯವಸ್ಥೆ, ವೃದ್ಧಾಪ್ಯವೇತನ ಹಾಗೂ ರೈತರ ಯೋಜನೆಗಲಾದ ಕೃಷಿ ಸಮ್ಮಾನ ಯೋಜನೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿವೆ. ಇವುಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

ಕೊಪ್ಪಳ: ವೈದ್ಯರ ನಿರ್ಲಕ್ಷ್ಯದಿಂದ ಆಸ್ಪತ್ರೆ ಬಾಗಿಲಲ್ಲೇ ಮಹಿಳೆಯ ಹೆರಿಗೆ..!

ಪ್ರಧಾನಿ ನರೇಂದ್ರ ಮೋದಿಯವರು ರೈತಪರ ಕಾಳಜಿಯನ್ನು ಇಟ್ಟುಕೊಂಡು ಕೃಷಿ ಸಮ್ಮಾನ ಯೋಜನೆಗೆ 6 ಸಾವಿರ ನೀಡಿದರೆ ಇತ್ತ ರಾಜ್ಯದ ಸಿಎಂ ಯಡಿಯೂರಪ್ಪನವರು ಯೋಜನೆಗೆ 4 ಸಾವಿರ ಸೇರಿದಂತೆ ರೈತರ ಕೃಷಿ ಚಟುವಟಿಕೆಗಳಿಗಾಗಿ ವರ್ಷಕ್ಕೆ 10 ಸಾವಿರ ನೀಡುತ್ತಿರುವುದು ರೈತರ ಪಾಲಿಗೆ ಆಶಾಕಿರಣವಾಗಿದೆ. ಪ್ರತಿವರ್ಷ ರೈತರ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವೀರಣ್ಣ ಹುಬ್ಬಳ್ಳಿ, ರತನ್‌ ದೇಸಾಯಿ, ಅಯ್ಯನಗೌಡ ಕೆಂಚಮ್ಮನವರ್‌, ತಾಪಂ ಅಧ್ಯಕ್ಷೆ ಲಕ್ಷ್ಮೀ ಗೌಡ್ರ, ಶರಣಪ್ಪ ಇಳಗೇರ, ಸಿದ್ದರಾಮೇಶ ಬೇಲೇರಿ, ರಾಚಪ್ಪ ಹುಳ್ಳಿ, ಗ್ರಾಪಂ ಅಧ್ಯಕ್ಷ ಸಂಗನಗೌಡ ಕೆಂಚಮ್ಮನವರ್‌, ಉಪಾಧ್ಯಕ್ಷೆ ಶಾಂತಮ್ಮ ಕಂಬಳಿ, ಶರಣಪ್ಪ ಇಂಗಳದಾಳ, ಅಮರೇಶ ಅಮರಾವತಿ, ಹನುಮಂತಪ್ಪ ತಳವಾರ, ಯಂಕಣ್ಣ ತಳವಾರ, ಶಿವಪ್ಪ ಕಟ್ಟಿಮನಿ, ನಿಂಗಪ್ಪ ನಿಡಶೇಷಿ, ಸುರೇಶ ಹೊಸಳ್ಳಿ, ಅಧಿಕಾರಿಗಳಾದ ಡಾ. ಜಯರಾಮ ಚವ್ಹಾಣ, ಓಂಕಾರಮೂರ್ತಿ, ಹೇಮಂತರಾಜ್‌ ಸಿಪಿಐ ಎಂ. ನಾಗರಡ್ಡಿ, ಗುತ್ತಿಗೆದಾರ ಎಸ್‌. ಹರ್ತಿ ಮತ್ತಿತರರು ಇದ್ದರು.
 

PREV
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ