ಯಡಿಯೂರಪ್ಪ ಬಗ್ಗೆ ಬಾಲ ಆಚಾರ್ಯ ಸಿದ್ಧಸೇನ ಮುನಿ ಭವಿಷ್ಯ

Kannadaprabha News   | Asianet News
Published : Apr 07, 2021, 09:35 AM IST
ಯಡಿಯೂರಪ್ಪ ಬಗ್ಗೆ ಬಾಲ ಆಚಾರ್ಯ  ಸಿದ್ಧಸೇನ ಮುನಿ ಭವಿಷ್ಯ

ಸಾರಾಂಶ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಜೀವನದ ಬಗ್ಗೆ ಮುನಿಗಳೊಬ್ಬರು ಭವಿಷ್ಯ ನುಡಿದಿದ್ದಾರೆ. ಯಡಿಯೂರಪ್ಪ ಅವರ ಭವಿಷ್ಯ ರಾಜಕೀಯ ಉತ್ತಂಗದ ಬಗ್ಗೆ  ಇದೆ ಎಂದು ಅವರು ಹೇಳಿದ್ದಾರೆ. 

ಬೆಳಗಾವಿ (ಏ.07): ಮುಂದಿನ ಎರಡೂ ವರ್ಷಗಳ ಕಾಲ ನೀವೆ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತೀರಿ. ಇಲ್ಲವೆ ಉಪರಾಷ್ಟ್ರಪರಿ, ರಾಷ್ಟ್ರಪತಿಯೂ ಆಗುತ್ತೀರು ಎಂದು ಜೈನಮುನಿಗಳಾದ ಬಾಲ ಆಚಾರ್ಯ  ಸಿದ್ಧಸೇನ ಮುನಿ ಭವಿಷ್ಯ ನುಡಿದಿದ್ದಾರೆ. 

ಮುನಿಗಳ ಆಶೀರ್ವಾದ ಪಡೆದ ಸಿಎಂ ಯಡಿಯೂರಪ್ಪ ಅವರಿಗೆ ಜೈನಮುನಿಗಳು ಈ ರೀತಿ ಭವಿಷ್ಯ ಹೇಳಿದ್ದಾರೆ. ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆಯೇ ಎಂದು ಸಿಎಂ ಪ್ರಶ್ನಿಸಿದಾಗ ಸುಮಾರು 40 ಸಾವಿರ ಅಂತರದಿಂದ  ಮಂಗಲ ಅಂಗಡಿ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. 

ಯಡಿಯೂರಪ್ಪ ಬಿಜೆಪಿಯ ಮಾಲೀಕರಲ್ಲ: ಸಿ.ಟಿ. ರವಿ ...

ಕೆಲ ದಿನಗಳ ಹಿಂದಷ್ಟೇ ಸಿದ್ಧಸೇನಾ ಮುನಿಗಳನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಆಗ ಜೈನಮುನಿಗಳು ರಾಜ್ಯದ ಸಿಎಂ ಆಗುತ್ತೀರಿ ಎಂದಿದ್ದರು. 

PREV
click me!

Recommended Stories

ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!