ಮಂಗಳೂರಲ್ಲಿ ಶಾಂತಿ ಕದಡಿದ್ದೇ ಐವನ್ ಡಿಸೋಜ: ನಳಿನ್

By Suvarna News  |  First Published Jan 7, 2020, 10:26 AM IST

ಮಂಗಳೂರಿನಲ್ಲಿ ಶಾಂತಿ ಕದಡಿದ್ದೇ ಐವನ್ ಡಿಸೋಜ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಅಮಿತ್ ಶಾ ಮಂಗಳೂರಿಗೆ ಬಂದ್ರೆ ಶಾಂತಿ ಕದಡುತ್ತೆ ಎಂದಿದ್ದ ಐವನ್‌ ಡಿಸೋಜ ಮಾತಿಗೆ ತಿರುಗೇಟು ನೀಡಿದ್ದಾರೆ.


ಮಂಗಳೂರು(ಜ.07): ಮಂಗಳೂರಿನಲ್ಲಿ ಶಾಂತಿ ಕದಡಿದ್ದೇ ಐವನ್ ಡಿಸೋಜ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಅಮಿತ್ ಶಾ ಮಂಗಳೂರಿಗೆ ಬಂದ್ರೆ ಶಾಂತಿ ಕದಡುತ್ತೆ ಎಂದಿದ್ದ ಐವನ್‌ ಡಿಸೋಜ ಮಾತಿಗೆ ತಿರುಗೇಟು ನೀಡಿದ್ದಾರೆ.

"

Tap to resize

Latest Videos

undefined

ಮಂಗಳೂರಿಗೆ ಅಮಿತ್ ಶಾ ಆಗಮಿಸಿದ್ರೆ ಶಾಂತಿ ಕದಡೋದಾಗಿ ಐವನ್ ಡಿಸೋಜಾ ಹೇಳಿಕೆ ನೀಡಿದ್ದರು. ಐವನ್ ಹೇಳಿಕೆಗೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ‌ನಳಿನ್ ಕುಮಾರ್ ಕಟೀಲ್ ಪ್ರತ್ಯುತ್ತರ ನೀಡಿದ್ದು, ಈ ಜಿಲ್ಲೆಯಲ್ಲಿ ಶಾಂತಿ ‌ಕದಡಿರುವುದೇ ಐವನ್ ಡಿಸೋಜ. ಹೀಗಾಗಿ ಅವರನ್ನ ‌ಇಲ್ಲಿಂದ ಗಡಿಪಾರು ಮಾಡಲು ನಾವು ಉಪವಾಸ ಕೂರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಅಮಿತ್ ಶಾ ಬಂದ್ರೆ ಶಾಂತಿ ಕದಡ್ತಾರೆ, ಭೇಟಿಗೆ ಅವಕಾಶ ಬೇಡ: ಕಾಂಗ್ರೆಸ್ ಒತ್ತಾಯ

ಅಮಿತ್ ಶಾ ಮಂಗಳೂರು ಭೇಟಿ ಕಾರ್ಯ‌ಕ್ರಮ ಇನ್ನೂ ನಿಗದಿಯಾಗಿಲ್ಲ. ಮಂಗಳೂರು, ಬೆಂಗಳೂರು ‌ಮತ್ತು ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಇರಲಿದೆ. ಸಿಂಧನೂರು ಭಾಗದಲ್ಲಿ ಬಾಂಗ್ಲಾ ಮತ್ತು ಪಾಕ್ ನಿರಾಶ್ರಿತರು ಇರೋ ಕಾರಣ ಅಲ್ಲೊಂದು ಕಾರ್ಯಕ್ರಮವಿದೆ. ಆದ್ರೆ ಯಾರ್ಯಾರು ಎಲ್ಲಿಗೆ ಬರಬೇಕು ಎನ್ನೋದು ಇನ್ನೂ ನಿಗದಿಯಾಗಿಲ್ಲ ಎಂದು ಹೇಳಿದ್ದಾರೆ.

ಮಂಗಳೂರಲ್ಲಿ ಮೋದಿ ಕುರಿತ ಯಕ್ಷಗಾನ ಪ್ರದರ್ಶನ : ಏನಿತ್ತು ಕಥೆಯಲ್ಲಿ?

click me!