ಶಬರಿಮಲೆಗೆ ತೆರಳಿದ್ದ ವೇಳೆ ಮಾಲಾಧಾರಿ ನಿಧನ

By Kannadaprabha News  |  First Published Jan 7, 2020, 10:09 AM IST

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಯ್ಯಪ್ಪ ಮಾಲಾಧಾರಿ ಓರ್ವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದೇವರ ದರ್ಶನಕ್ಕೆ ತೆರಳಿದ್ದ ವೇಳೆಯೇ ಸಾವಿಗೀಡಾಗಿದ್ದಾರೆ


ಚಿಕ್ಕಮಗಳೂರು [ಜ.07]: ಶಬರಿಮಲೆ ಅಯ್ಯಪ್ಪ ಮಾಲಾಧಾರಿ ಓರ್ವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದ ಗಿರೀಶ್ ಶಬರಿಮಲೆಗೆ ತೆರಳಿದ್ದ ವೇಳೆ ಇಲ್ಲಿನ ಅಪ್ಪಚ್ಚಿ ಬೆಟ್ಟದಲ್ಲಿ ಹೃದಯಾಘಾತಕ್ಕೆ ಈಡಾಗಿದ್ದಾರೆ. 

ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ತೆರಳಿದ್ದ ಗಿರೀಶ್ ಅವರಿಗೆ ಏಕಾ ಏಕಿ ಹೃದಯಾಘಾತವಾಗಿದೆ. ಆದರೆ ಅವರ ಮೃತದೇಹವನ್ನು ಅಲ್ಲಿಂದ ಸ್ವಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ. ಮಾಲಾಧಾರಿಯಾಗಿ ದೇವರ ದರ್ಶನ ಪಡೆಯಲು ತೆರಳಿದ್ದ ವೇಳೆ ಗಿರೀಶ್ ಹಠಾತ್ ಹೃದಯಾಘಾತಕ್ಕೆ ಈಡಾಗಿ ಕೊನೆಯುಸಿರೆಳೆದಿದ್ದಾರೆ.

ಶಬರಿಮಲೆ ಆದಾಯ ಈ ವರ್ಷವಿಷ್ಟು..

Latest Videos

ಪವಿತ್ರ ಕ್ಷೇತ್ರದವಾದ ಶಬರಿ ಮಲೆ ಅಯ್ಯಪ್ಪ ದೇಗುಲಕ್ಕೆ ಈ ಮಾಸದಲ್ಲಿ ಲಕ್ಷಾಂತರ ಭಕ್ತರು ಶಬರಿಮಲೆ ದೇಗುಲಕ್ಕೆ ಭೇಟಿ ನೀಡುತ್ತಾರೆ. ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ.

click me!