ಮಂಡ್ಯ: ಮರಗಳನ್ನು ಕಡಿಯಲ್ಲ, ಎತ್ತಿ ಬೇರೆಡೆ ಇಡ್ತಾರೆ..!

By Suvarna News  |  First Published Jan 7, 2020, 10:03 AM IST

ಏನೋ ಕಟ್ಟಡ ಕಟ್ಟಬೇಕು, ರಸ್ತೆ ನಿಮರ್ಮಿಸಬೇಕು ಎಂದಾಗ ಹಿಂದೆ ಮುಂದೆ ನೋಡದೆ ಮರಗಳನ್ನು ಕಡಿಯುವ ಜನರ ಮಧ್ಯೆ ಮರಗಳನ್ನು ಶಿಫ್ಟ್ ಮಾಡುವ ಕಾರ್ಯದ ಮೂಲಕ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಾದರಿಯಾಗಿದೆ. ಮರವನ್ನು ಸ್ವಸ್ಥಾನದಿಂದ ಎತ್ತಿ ಬೇರೆಡೆ ಇಡೋದಂದ್ರೆ ಸುಲಭದ ಮಾತಾ..? ಹಾಗಿರುವಾಗ ನೂರಾರು ಮಠಗಳ ರಕ್ಷಣೆಗೆ ಮುಂದಾಗಿದೆ ಆದಿಚುಂಚನಗಿರಿ ಮಠ.


ಮಂಡ್ಯ(ಜ.07): ಮರಗಳನ್ನು ಶಿಫ್ಟ್ ಮಾಡುವ ಕಾರ್ಯದ ಮೂಲಕ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಾದರಿಯಾಗಿದೆ. ಮರವನ್ನು ಸ್ವಸ್ಥಾನದಿಂದ ಎತ್ತಿ ಬೇರೆಡೆ ಇಡೋದಂದ್ರೆ ಸುಲಭದ ಮಾತಾ..? ಹಾಗಿರುವಾಗ ನೂರಾರು ಮಠಗಳ ರಕ್ಷಣೆಗೆ ಮುಂದಾಗಿದೆ ಆದಿಚುಂಚನಗಿರಿ ಮಠ.

ಮನೆ ಆಯ್ತು ಮಂಡ್ಯದಲ್ಲೀಗ ಮರಗಳ ಶಿಫ್ಟಿಂಗ್ ಕಾರ್ಯ ಆರಂಭವಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಮಾದರಿ ಕೆಲಸ ಕೈಗೆತ್ತಿಕೊಂಡಿದ್ದು, ಅಭಿವೃದ್ಧಿ ಹೆಸರಲ್ಲಿ ಪ್ರಕೃತಿ ನಾಶ ಮಾಡದೆ ಉಳಿಸಿಕೊಳ್ಳಲು ಶ್ರೀ ಮಠ ಮುಂದಾಗಿದೆ.

Tap to resize

Latest Videos

ಬೇಬಿ ಬೆಟ್ಟದಲ್ಲಿ ಇಂದಿನಿಂದಲೇ ಗಣಿಗಾರಿಕೆ ನಿಷೇಧ: ಆದೇಶ

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿಮರ್ಮಿಸಲು ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಮರಗಳನ್ನು ಬೇರೆಡೆಗೆ ಸ್ಥಳಾಂತರಕ್ಕೆ ಮಠ ಮುಂದಾಗಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಜತೆಗೆ ನೂರಾರು ಮರಗಳ ರಕ್ಷಣೆಗೂ ಮಠ ಮುಂದಾಗಿರುವ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ.

ಲಕ್ಷಾಂತರ ರೂ. ಖರ್ಚು ಮಾಡಿ 250ಕ್ಕೂ ಹೆಚ್ಚು ಮರಗಳ ರಕ್ಷಣೆಗೆ ಮುಂದಾದ ಶ್ರೀ ಮಠ, ನಿರ್ಮಲಾನಂದನಾಥ ಶ್ರೀಗಳು ಪರಿಸರ ಕಾಳಜಿ ಮೆರೆಯುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. BGS ವೈದ್ಯಕೀಯ ಮಹಾವಿದ್ಯಾಲಯದ ಕ್ಯಾಂಪಸ್ ನಲ್ಲಿ ಮಲ್ಟಿ ಸ್ಷೆಷಾಲಿಟಿ ಆಸ್ಪತ್ರೆಗೆ ಚಿಂತನೆ ಹಿನ್ನೆಲೆ ಈ ರೀತಿ ಕ್ರಮ ಕೈಗೊಳ್ಳಲಾಗಿದೆ.

ಅಮಿತ್ ಶಾ ಬಂದ್ರೆ ಶಾಂತಿ ಕದಡ್ತಾರೆ, ಭೇಟಿಗೆ ಅವಕಾಶ ಬೇಡ: ಕಾಂಗ್ರೆಸ್ ಒತ್ತಾಯ

ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾಗಿದ್ದ 250 ಕ್ಕೂ ಹೆಚ್ಚು ಮರಗಳನ್ನ ಕತ್ತರಿಸಬೇಕಿತ್ತು. ಈ ಮರಗಳನ್ನು ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳಿದ್ದಾಗ ನೆಟ್ಪು, ಪೋಷಣೆ ಮಾಡಲಾಗಿತ್ತು. ಮರಗಳನ್ನು ಕತ್ತರಿಸುವ ಬದಲು ಬುಡ ಸಮೇತ ಸ್ಥಳಾಂತರಕ್ಕೆ ನಿರ್ಧಾರ ಮಾಡಲಾಗಿದೆ.

ಆಧುನಿಕ ತಂತ್ರಜ್ಞಾನದ ಯಂತ್ರ ಬಳಸಿ ಬೇರಿಗೂ ಪೆಟ್ಟಾಗದಂತೆ ಮರಗಳನ್ನು ಸ್ಥಳಾಂತರಿಸಲಾಗುತ್ತದೆ. ವೈದ್ಯಕೀಯ ಕಾಲೇಜಿನಿಂದ ಅರ್ಧ ಕಿ.ಮೀ ದೂರದ BGS ಪಬ್ಲಿಕ್ ಶಾಲೆಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ BGS ವೈದ್ಯಕೀಯ ಮಹಾವಿದ್ಯಾಲಯವಿದ್ದು, BGS ಪಬ್ಲಿಕ್  ಶಾಲೆ ಆವರಣದಲ್ಲಿ ಮರ ನಾಟಿ ಮಾಡಿ ಶ್ರೀ ಮಠ ಪೋಷಣೆಗೆ ಮುಂದಾಗಿದ್ದಾರೆ. ಶ್ರೀ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಶ್ರೀಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

click me!