ಭೈರಪ್ಪನವರಂತಹ ಲೇಖಕರಿಗೂ ಅಂಕಣ ಬರೆಯೋದು ಕಷ್ಟವಾಯ್ತು: ವಿಶ್ವೇಶ್ವರ ಭಟ್

By Govindaraj S  |  First Published Jul 28, 2024, 9:24 AM IST

ಒಬ್ಬ ಅಂಕಣಕಾರ ಎಲ್ಲಾ ಬರಹಗಳನ್ನೂ ಬರೆಯಬಲ್ಲ ಆದರೆ ಇತರ ಬರಹಗಳನ್ನು ಬರೆಯುವವರಿಗೆ ಅಂಕಣ ಬರೆಯೋದು ಅಷ್ಟು ಸುಲಭವಲ್ಲ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹೇಳಿದರು.


ವರದಿ: ಸ್ವಸ್ತಿಕ್ ಕನ್ಯಾಡಿ, ಏಷಿಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಜು.28): ಒಬ್ಬ ಅಂಕಣಕಾರ ಎಲ್ಲಾ ಬರಹಗಳನ್ನೂ ಬರೆಯಬಲ್ಲ ಆದರೆ ಇತರ ಬರಹಗಳನ್ನು ಬರೆಯುವವರಿಗೆ ಅಂಕಣ ಬರೆಯೋದು ಅಷ್ಟು ಸುಲಭವಲ್ಲ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹೇಳಿದರು. ಮೈಸೂರು ಬ್ಯಾಂಕ್ ಬಳಿ ಇರುವ FKCCI ಸಭಾಂಗಣದಲ್ಲಿ ನಡೆದ ವಿಶ್ವವಾಣಿ ಪ್ರಕಾಶನದ 9 ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ತಮ್ಮ ಪತ್ರಿಕೋದ್ಯಮದ ಅನುಭವಗಳನ್ನು ಮೆಲುಕು ಹಾಕಿದರು.  ತಾನು ವಿಜಯ ಕರ್ನಾಟಕದ ಸಂಪಾದಕನಾಗಿದ್ದ ಸಂದರ್ಭದಲ್ಲಿ ಅನೇಕ ಸಾಹಿತಿಗಳಿಂದ, ಎಸ್.ಎಲ್ ಭೈರಪ್ಪರಂತಹ ಲೇಖಕರಿಂದ ಅಂಕಣ ಬರೆಸುವುದಕ್ಕೆ ಪ್ರಯತ್ನ ಪಟ್ಟೆ. ಆದರೆ ಅದು ಸಾಧ್ಯವಾಗಲಿಲ್ಲ. 

Tap to resize

Latest Videos

ಅನೇಕರು ಕೈ ಚೆಲ್ಲಿ ಬಿಟ್ಟರು. ಹಾಗಾಗಿ ಒಬ್ಬ ಶ್ರೇಷ್ಠ ಬರಹಗಾರನಿಗೆ ಅಂಕಣಕಾರನಾಗೋದು ಕಷ್ಟವಾಗಬಹುದು. ಆದರೆ ಒಬ್ಬ ಅಂಕಣಕಾರ ಶ್ರೇಷ್ಠ ಬರಹಗಾರನಾಗಬಲ್ಲ ಎಂದು ಅಭಿಪ್ರಾಯಪಟ್ಟರು ಪುಸ್ತಕದ ರಿಬನ್ ಕಟ್ ಮಾಡುವುದು ನನಗಿಷ್ಟವಾದ ಕೆಲಸವಾಗಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಲೇಖಕರ ಸಮಾವೇಶವಾಗಿರುತ್ತದೆ. ಅಕ್ಷರಗಳಿಂದ ಸಂಸದರಾದ ಪ್ರತಾಪ್ ಸಿಂಹ ಒಬ್ಬ ಮಾದರಿಯಾಗಿದ್ದಾರೆ. ಆದ್ದರಿಂದ ಲೇಖಕರ ಶಕ್ತಿ ಅಪಾರವಾಗಿದೆ ಎಂದರು ಅಂಕಣ ಸವಾಲಿನ ಕೆಲಸಗಳಲ್ಲೊಂದು. 9 ಕೃತಿಗಳ ಅಂಕಣ ಸಂಗ್ರಹ ಸುಲಭದ ಕೆಲಸವಾಗಿರಲ್ಲಿಲ್ಲ. ಆದರೆ ಕಷ್ಟಗಳ ಮಧ್ಯೆ ಹೊರತಂದಿರುವ ಕೃತಿಗಳು ಅದೇ ಸಮಯದಲ್ಲಿ ಸಂತಸವನ್ನು ಸಹ ನೀಡಿದೆ ಎಂದರು.

ಮುಡಾ ಹಗರಣ: ಸಚಿವ ಬೈರತಿ ಸುರೇಶ್‌ಗೆ ಸಾರಾ, ಜಿ.ಟಿ.ದೇವೇಗೌಡ ತಿರುಗೇಟು

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ ವಿಶ್ವೇಶ್ವರ ಭಟ್ಟರು ನಾಯಕತ್ವ ಗುಣವುಳ್ಳ ಸಂಪಾದಕರಾಗಿದ್ದಾರೆ. ಎಲ್ಲರನ್ನೂ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ವ್ಯಕ್ತಿತ್ವವುಳ್ಳ ಪತ್ರಕರ್ತ. 93 ಕೃತಿಗಳನ್ನು ಬರೆದು ಓದುಗರಿಗೆ ಬರಹದ ರಸದೌತಣವನ್ನು ಉಣಬಡಿಸಿದ್ದಾರೆ. ಮುಚ್ಚುವ ಹಂತದಲ್ಲಿದ್ದ ವಿಜಯಕರ್ನಾಟಕ ಪತ್ರಿಕೆಯನ್ನು ಕೇವಲ ಒಂದು ವರ್ಷದಲ್ಲಿ ಮುಂಚೂಣಿ ಪತ್ರಿಕೆಯನ್ನಾಗಿಸಿದರು. ಇವತ್ತಿನ ಜಾತಿ, ಹಣದ ಪ್ರಭವಾವಿರುವ ಪತ್ರಿಕೋದ್ಯಮಕ್ಕೆ ಅಪವಾದವಾಗಿದ್ದಾರೆ. ಇನ್ನಷ್ಟು ಸಮಾಜವನ್ನು ತಿದ್ದುವ ಪುಸ್ತಕಗಳು ಪತ್ರಿಕೋದ್ಯಮ ಮತ್ತು ಪತ್ರಕರ್ತರನ್ನು ಬಡಿದೆಬ್ಬಿಸುವ ಲೇಖನಗಳು ಇನ್ನಷ್ಟು ಹೊರ ಬರಬೇಕು ಎಂದು ಆಶಿಸಿದರು.

ಏಷಿಯಾ ನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ಮಾತನಾಡಿ, ಈಗಿನ ತಲೆಮಾರಿನ ಪತ್ರಿಕೋದ್ಯಮಕ್ಕೆ ಮೆಂಟರ್ಸ್ ಇಲ್ಲದ ಹಾಗಾಗಿದೆ. ವಿಶ್ವೇಶ್ವರ ಭಟ್ ತರಹದ ಧೈರ್ಯಶಾಲಿ ಪತ್ರಕರ್ತರು ಮುಂದಿನ ತಲೆಮಾರಿಗೆ ದಾರಿದೀಪವಾಗುವಂತವರು ಇರದ ವಾತಾವರಣ ಸೃಷ್ಟಿಯಾಗಿದೆ. ಇದ್ದರೂ ಒತ್ತಡದ ಪತ್ರಿಕೋದ್ಯಮ ಅದಕ್ಕೆ ಅವಕಾಶ ನೀಡುತ್ತಿಲ್ಲ. ಆದ್ದರಿಂದ ಕನಿಷ್ಠ ಅವರು ಬರೆದಿರುವ ಪುಸ್ತಕಗಳು ಆಶಾದೀಪವಾಗಿದೆ ಎಂದರು.

ಡ್ಯಾಂಗಳಿಂದ ಲಕ್ಷ ಲಕ್ಷ ಕ್ಯುಸೆಕ್ ನೀರು ಬಿಡುಗಡೆ: ಮುತ್ತತ್ತಿ, ರಂಗನತಿಟ್ಟಿಗೆ ಪ್ರವೇಶ ನಿರ್ಬಂಧ

ಯಾವುದೇ ವಸ್ತುವನ್ನು ಹೊಸದಾಗಿ ನೋಡುವ ದೃಷ್ಟಿಕೋನ ಬೆಳಸಿಕೊಂಡು ಬರೆಯುವ ಅಕ್ಷರಗಳು ಪುಸ್ತಕಗಳ ರೂಪದಲ್ಲಿ ಹೊರ ಬರಬೇಕು. ಇಂದು ಬಿಡುಗಡೆಗೊಂಡ ಎಲ್ಲಾ ಪುಸ್ತಕಗಳು ಈ ಪರಿಕಲ್ಪನೆಗೆ ಇಂಬು ನೀಡಿದೆ ಎಂದು ಶಿಕ್ಷಣ ತಜ್ಞರು, ಸಂಸ್ಕೃತಿ ಚಿಂತಕ ಗುರುರಾಜ್ ಕರ್ಜಗಿ ಹೇಳಿದರು.  ವನ್ಯಜೀವಿ ತಜ್ಞ ಡಾ. ಉಲ್ಲಾಸ್ ಕಾರಂತ್ ಮಾತನಾಡಿ ವಿಶ್ವೇಶ್ವರ ಭಟ್ ಅವರಿಗೆ ವನ್ಯಜೀವಿಗಳ ಕುರಿತು ಸಾಕಷ್ಟು ಆಸಕ್ತಿಯಿದೆ. ಅವರಲ್ಲಿರುವ ತಿಳಿದುಕೊಳ್ಳುವ ಆಸಕ್ತಿ ಶಬ್ದ ಭಂಡಾರ ನನಗೆ ಆಶ್ಚರ್ಯವನ್ನುಟು ಮಾಡುತ್ತದೆ ಎಂದು ವರ್ಣಿಸಿದರು. ಲೇಖಕರದ ರೂಪಾ ಗುರುರಾಜ್, ರಾಜು ಅಡಕಳ್ಳಿ ಕಿರಣ್ ಉಪಾಧ್ಯಾಯ, ಶಿಹಿರ ಹೆಗಡೆ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

click me!