ವಿಜಯಪುರ: ಟ್ರಾಫಿಕ್ ತಾಪತ್ರಯ ತಪ್ಪಿಸಲು ಪೀಲ್ಡಿಗಿಳಿದ ಎಸ್ಪಿ ಹೃಷಿಕೇಶ್..!

By Girish Goudar  |  First Published Jul 27, 2024, 11:01 PM IST

ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಸ್ವತಃ ಎಸ್ಪಿ ಹೃಷಿಕೇಶ್ ಸೋನಾವಣೆ ಪೀಲ್ಡಿಗಿಳಿದಿದ್ದಾರೆ. ಸಾಯಂಕಾಲ ಎಎಸ್ಪಿ ಶಂಕರ ಮಾರಿಹಾಳ್, ಗಾಂಧಿ ಚೌಕ ಇನ್ಸ್ಪೆಕ್ಟರ್ ಪ್ರದೀಪ ತಳಕೇರಿ, ಟ್ರಾಫಿಕ್ ಇನ್ಸ್ಪೆಕ್ಟರ್ ಸಂಗಮೇಶ ಪಾಟೀಲ್ ಜೊತೆಗೆ ಟ್ರಾಫಿಕ್ ಉಂಟಾಗುವ ರಸ್ತೆ, ಸ್ಥಳಗಳ ಪರಿಶೀಲನೆ ನಡೆಸಿದ್ರು. 
 


- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ(ಜು.27):  ಗುಮ್ಮಟನಗರಿ ವಿಜಯಪುರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ನಗರ ಬೆಳೆಯುವುದರ ಜೊತೆಗೆ ಟ್ರಾಫಿಕ್ ವಿಚಾರ ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ. ಹೀಗಾಗಿ ಟ್ರಾಫಿಕ್ ಕಿರಿಕಿರಿಗೆ ಕಡಿವಾಣ ಹಾಕಲು ಎಸ್ಪಿ ಹೃಷಿಕೇಶ್ ಸೋನಾವಣೆ ಸ್ವತಃ ಪೀಲ್ಡಿಗಿಳಿದು ಟ್ರಾಫಿಕ್ ನಿಮಯ ಗಾಳಿಗೆ ತೂರಿದವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಅಲ್ಲದೆ ಟ್ರಾಫಿಕ್ ಕುರಿತು ಜಾಗೃತಿ ಮೂಡಿಸಿದ್ದಾರೆ.

Tap to resize

Latest Videos

undefined

ಟ್ರಾಫಿಕ್ ತಪ್ಪಿಸಲು ಪೀಲ್ಡಿಗಿಳಿದ ಐಪಿಎಸ್ ಅಧಿಕಾರಿ..!

ವಿಜಯಪುರ ನಗರ ಬೆಳೆಯುತ್ತಿದ್ದು ಸದಾ ವಾಹನಗಳಿಂದ ಜಿನುಗುಡುತ್ತಿರುತ್ತೆ. ಅದರಲ್ಲು ಗಾಂಧಿಚೌಕ, ಎಲ್‌ಬಿಎಸ್ ಮಾರ್ಕೆಟ್ ರಸ್ತೆ, ಸರಾಫ್ ಬಜಾರ್ ರಸ್ತೆ, ವಾಜಪೇಯಿ ರಸ್ತೆ , ಬಿಎಲ್ಡಿ ಆಸ್ಪತ್ರೆ ರಸ್ತೆಗಳು ರಶ್ ಆಗಿರುತ್ವೆ. ಆದ್ರೆ ಕೆಲವರು ಮಾಡುವ ಯಡವಟ್ಟಿಗೆ ಜನಸಾಮಾನ್ಯರು ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಗುತ್ತದೆ. ಈ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಸ್ವತಃ ಎಸ್ಪಿ ಹೃಷಿಕೇಶ್ ಸೋನಾವಣೆ ಪೀಲ್ಡಿಗಿಳಿದಿದ್ದಾರೆ. ಸಾಯಂಕಾಲ ಎಎಸ್ಪಿ ಶಂಕರ ಮಾರಿಹಾಳ್, ಗಾಂಧಿ ಚೌಕ ಇನ್ಸ್ಪೆಕ್ಟರ್ ಪ್ರದೀಪ ತಳಕೇರಿ, ಟ್ರಾಫಿಕ್ ಇನ್ಸ್ಪೆಕ್ಟರ್ ಸಂಗಮೇಶ ಪಾಟೀಲ್ ಜೊತೆಗೆ ಟ್ರಾಫಿಕ್ ಉಂಟಾಗುವ ರಸ್ತೆ, ಸ್ಥಳಗಳ ಪರಿಶೀಲನೆ ನಡೆಸಿದ್ರು. 

ವಿಜಯಪುರ: ಸರ್ಕಾರಿ ಸಭೆ-ಸಮಾರಂಭಕ್ಕೆ ಹಾರ-ಶಾಲು, ಸನ್ಮಾನಕ್ಕೆ ಬ್ರೇಕ್, ಡಿಸಿ ಖಡಕ್ ಸೂಚನೆ..!

ಎಸ್ಪಿ‌ ಕೈಗೆ ತಗಲಾಕಿಕೊಂಡ ಸವಾರರು..!

ಟ್ರಾಫಿಕ್ ಉಂಟಾಗುವ ರಸ್ತೆ, ಸ್ಥಳ ಪರಿಶೀಲನೆ ವೇಳೆ ಟ್ರಾಫಿಕ್ ನಿಮಯ ಉಲ್ಲಂಘನೆ ಮಾಡಿ ರಸ್ತೆಗಳಲ್ಲೆ ವಾಹನ ನಿಲ್ಲಿಸಿದ್ದ ಕೆಲವರು ಎಸ್ಪಿ ಹೃಷಿಕೇಶ್ ಅವರ ಕೈಗೆ ಸಿಕ್ಕಾಕಿಕೊಂಡ್ರು. ಸರಾಫ್ ಬಜಾರ್‌ನಲ್ಲಿ ಕಾರುಗಳನ್ನ ರಸ್ತೆಯ ಮೇಲೆ ನಿಲ್ಲಿಸಿ ಬಜಾರನಲ್ಲಿ ಅಡ್ಡಾಡುತ್ತಿದ್ದವರ ವಾಹನಗಳಿಗೆ ತಕ್ಷಣವೆ ದಂಡ ಹಾಕಲು ಆದೇಶ ನೀಡಿದ್ರು. ಇನ್ನು ಕಾರು ನಿಲ್ಲಿಸಿ ಬಿಂದಾಸ್ಸಾಗಿ ಅಡ್ಡಾಡುತ್ತಿದ್ದವರಿಗೆ ಪಾಠ ಕಲಿಸಿದ್ರು. ಇನ್ನು ಪಾರ್ಕಿಂಗ್ ಸ್ಥಳ ಬಿಟ್ಟು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ವಾಹನಗಳ ಪೋಟೋ ತೆಗೆದುಕೊಂಡು ನೋಟಿಸ್ ನೀಡಲು ಇನ್ಸ್ಪೆಕ್ಟರ್‌ಗಳಿಗೆ ಸೂಚನೆ ನೀಡಿದ್ರು..

ಟ್ರಾಫಿಕ್ ರೂಲ್ಸ್ ಮೀರಿದರೆ ಮನೆಗೆ ದಂಡದ ನೋಟಿಸ್..!

ಇನ್ನೂ ಬೇಕಾಬಿಟ್ಟಿಯಾಗಿ ವಾಹನಗಳನ್ನ ಕಂಡು ಕಂಡಲ್ಲಿ ಪಾರ್ಕ್ ಮಾಡುವ ವಾಹನ ಸವಾರರಿಗೆ ಶಾಕ್ ಕೊಡಲು ಎಸ್ಪಿ ಹೃಷಿಕೇಶ್ ಸೋನಾವಣೆ ಮುಂದಾಗಿದ್ದಾರೆ. ನೋ ಪಾರ್ಕಿಂಗ್ ಸ್ಥಳಗಳಲ್ಲಿ ಕಾರ್, ಬೈಕ್ ನಿಲ್ಲಿಸಿ ಮಾರ್ಕೆಟ್ ನಲ್ಲಿ ಅಡ್ಡಾಡಿದ್ರೆ ಅವರ ಮನೆಗೆ ದಂಡದ ನೋಟಿಸ್ ರವಾನೆಗೆ ಎಸ್ಪಿ ಸೂಚನೆ ನೀಡಿದ್ದಾರೆ. ಟ್ರಾಫಿಕ್ ರೂಲ್ಸ್ ಗಾಳಿಗೆ ತೂರಿದವರು ಆಕ್ಷಣ ಪೊಲೀಸರಿಂದ ತಪ್ಪಿಸಿಕೊಂಡರು ದಂಡದ ರಸೀದಿ ಅವರ ಮನೆಗೆ ಸೇರಲಿದೆ. ಈ ಮೂಲಕ ಟ್ರಾಫಿಕ್ ವ್ಯವಸ್ಥೆ ಸುಧಾರಣೆಗೆ ಎಸ್ಪಿ ಕ್ರಮ ಕೈಗೊಂಡಿದ್ದಾರೆ.

ವಿಜಯಪುರ: ಕುರಿ ಮರಿ ರಕ್ಷಿಸಿ ತಾನು ನೀರಲ್ಲಿ ಮುಳುಗಿ ಅಸುನೀಗಿದ..!

ಟ್ರಾಫಿಕ್ ತಾಪತ್ರಯ ಕಡಿಮೆ ಕಠಿಣ ಕ್ರಮ..!

ಇನ್ನೂ ನಗರದ ಸರಾಫ್ ಬಜಾರ್, ಗಾಂಧಿ ಚೌಕ, ಸಿದ್ದೇಶ್ವರ ದೇವಸ್ಥಾನ ರಸ್ತೆ, ವಾಜಪೇಯಿ ರಸ್ತೆ, ಬಿಎಲ್ಡಿ ರಸ್ತೆಯಲ್ಲಿ ಟ್ರಾಫಿಕ್ ತಾಪತ್ರಯ ತಪ್ಪಿಸಲು ಕಠಿಣ ಕ್ರಮಕ್ಕೆ ಎಸ್ಪಿ ಮುಂದಾಗಿದ್ದಾರೆ. ಟ್ರಾಫಿಕ್ ನಿಯಮ ಮುರಿದವರಿಗೆ ಸ್ಥಳದಲ್ಲೆ ಮುಲಾಜಿಲ್ಲದೆ ದಂಡ ಹಾಕಲು ಟ್ರಾಫಿಕ್ ಪೊಲೀಸರಿಗೆ ಸೂಚನೆಯನ್ನ ನೀಡಿದ್ದಾರೆ. ಅಲ್ಲದೆ ಕೆಲ ರಸ್ತೆಗಳಲ್ಲೆ ನಡೆಯುತ್ತಿದ್ದ ಹಣ್ಣು ವ್ಯಾಪಾರಕ್ಕು ಕಡಿವಾಣ ಹಾಕಿದ್ದಾರೆ. ವ್ಯಾಪಾರಸ್ತರು ರಸ್ತೆ ಬಿಟ್ಟು ವ್ಯಾಪಾರ ಮಾಡಬೇಕು. ರಸ್ತೆಯಲ್ಲಿ ಕುಳಿತು ಅಥವಾ ತಳ್ಳುಗಾಡಿ ಬಳಕೆ‌ ಮಾಡಿ ವ್ಯಾಪಾರ ಮಾಡುವ ಮೂಲಕ ವಾಹನ ಸವಾರರಿಗೆ ತೊಂದರೆ ನೀಡದಂತೆ ತಿಳುವಳಿಕೆ ಹೇಳಿದ್ದಾರೆ. ತಪ್ಪಿದಲ್ಲಿ ದಂಡ ಪ್ರಯೋಗ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ..

ಪಾಲಿಕೆ ಸಹಾಯದೊಂದಿಗೆ ಮಾರ್ಕಿಂಗ್..!

ರಸ್ತೆ ಬದಿಗೆ ಬೈಕ್, ಕಾರ್ ಪಾರ್ಕಿಂಗ್ ಗಾಗಿ ಮಾರ್ಕಿಂಗ್ ವ್ಯವಸ್ಥೆ ಮಾಡಲು ಎಸ್ಪಿ ಮುಂದಾಗಿದ್ದಾರೆ. ಪಾಲಿಕೆ ಅಧಿಕಾರಿಗಳ ಸಹಾಯದೊಂದಿಗೆ ಅಲ್ಲಲ್ಲಿ ಪಾರ್ಕಿಂಗ್ ನಾಮಫಲಕ, ಪಾರ್ಕಿಂಗ್ ಮಾರ್ಕ್‌ ಮಾಡಲು ಪಾಲಿಕೆ ಅಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ. ಇನ್ನೂ ಆಟೋ ಚಾಲಕರಿಗೆ ನಗರದ ಗಾಂಧಿ ವೃತ್ತದ ಬಳಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಗಾಂಧಿ ವೃತ್ತದಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಕಿರಿಕಿರಿ ಕಡಿಮೆ ಮಾಡಲು ಕ್ರಮ ಕೈಗೊಂಡಿದ್ದಾರೆ.

click me!