ಹೆಣ್ಣಿನಿಂದಲೇ ಸಂಕಷ್ಟ: 3 ವರ್ಷ ಸೂಕ್ಷ್ಮವಾಗಿ ಇರುವಂತೆ ವಿನಯ್‌ ಕುಲಕರ್ಣಿಗೆ ಕೊರಗಜ್ಜ ದೈವದ ಸೂಚನೆ..!

By Girish Goudar  |  First Published Jul 27, 2024, 10:32 PM IST

ಕೊರಗಜ್ಜ ಕೋಲದಲ್ಲಿ 48 ದಿನಗಳ ಒಳಗೆ ಸಮಸ್ಯೆ ಬಗೆಹರಿಸೋ ಅಭಯ ನೀಡಿದ ಕೊರಗಜ್ಜ ದೈವ, 48 ದಿನಗಳ ಒಳಗೆ ಧಾರವಾಡ ಕ್ಷೇತ್ರ ಪ್ರವೇಶ ನಿರ್ಬಂಧ ತೆರವಿನ ಬಗ್ಗೆ ಅಭಯ ನೀಡಿದೆ. ಇನ್ನು ಮೂರು ವರ್ಷಗಳ ಕಾಲ ಬಹಳ ಸೂಕ್ಷ್ಮವಾಗಿ ಇರುವಂತೆಯೂ ದೈವ ಸೂಚನೆ ನೀಡಿದ್ದು, ಹೆಣ್ಣಿನ ಕಾರಣದಿಂದಲೇ ಈ ಎಲ್ಲಾ ಸಂಕಷ್ಟ ಎಂದು ಹೇಳಿದೆ. ಅಧರ್ಮದಲ್ಲಿ ಹೋದವರನ್ನ ನಾನು ನೋಡಿಕೊಳ್ತೇನೆ. ಸಂಕಷ್ಟ ನಿವಾರಿಸಿ ಒಳಿತು ಮಾಡುತ್ತೇನೆ. ಸಂಕಷ್ಟ ನಿವಾರಣೆ ಬಳಿಕ ಸಂತೋಷದಿಂದ ಕೋಲಸೇವೆ ನೀಡುವಂತೆ ದೈವ ನುಡಿ ಕೊಟ್ಟಿದೆ.


ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು(ಜು.27):  ವಿಧಾನಸಭಾ ಚುನಾವಣೆಯ ಗೆಲುವಿನ ಹಿನ್ನೆಲೆಯಲ್ಲಿ ತುಳುನಾಡಿನ ಆರಾಧ್ಯದೈವ ಕೊರಗಜ್ಜನಿಗೆ ಹರಕೆಯ ಕೋಲ ಸೇವೆ ಸಲ್ಲಿಸಲು ಆಗಮಿಸಿದ್ದ ಶಾಸಕ ವಿನಯ ಕುಲಕರ್ಣಿಗೆ ದೈವ ಮತ್ತೊಂದು ಅಭಯ ನೀಡಿದೆ. ಧಾರವಾಡ ಪ್ರವೇಶ ನಿರ್ಬಂಧ ವಿಚಾರದಲ್ಲಿ ಮುಂದಿನ 48 ದಿನಗಳ ಒಳಗೆ ಸಮಸ್ಯೆ ಬಗೆ ಹರಿಸೋದಾಗಿ ಕೊರಗಜ್ಜ ದೈವ ಅಭಯದ ನುಡಿ ಕೊಟ್ಟಿದೆ. 

Tap to resize

Latest Videos

ಕೊರಗಜ್ಜ ಕೋಲದಲ್ಲಿ 48 ದಿನಗಳ ಒಳಗೆ ಸಮಸ್ಯೆ ಬಗೆಹರಿಸೋ ಅಭಯ ನೀಡಿದ ಕೊರಗಜ್ಜ ದೈವ, 48 ದಿನಗಳ ಒಳಗೆ ಧಾರವಾಡ ಕ್ಷೇತ್ರ ಪ್ರವೇಶ ನಿರ್ಬಂಧ ತೆರವಿನ ಬಗ್ಗೆ ಅಭಯ ನೀಡಿದೆ. ಇನ್ನು ಮೂರು ವರ್ಷಗಳ ಕಾಲ ಬಹಳ ಸೂಕ್ಷ್ಮವಾಗಿ ಇರುವಂತೆಯೂ ದೈವ ಸೂಚನೆ ನೀಡಿದ್ದು, ಹೆಣ್ಣಿನ ಕಾರಣದಿಂದಲೇ ಈ ಎಲ್ಲಾ ಸಂಕಷ್ಟ ಎಂದು ಹೇಳಿದೆ. ಅಧರ್ಮದಲ್ಲಿ ಹೋದವರನ್ನ ನಾನು ನೋಡಿಕೊಳ್ತೇನೆ. ಸಂಕಷ್ಟ ನಿವಾರಿಸಿ ಒಳಿತು ಮಾಡುತ್ತೇನೆ. ಸಂಕಷ್ಟ ನಿವಾರಣೆ ಬಳಿಕ ಸಂತೋಷದಿಂದ ಕೋಲಸೇವೆ ನೀಡುವಂತೆ ದೈವ ನುಡಿ ಕೊಟ್ಟಿದೆ. 

ಹಿಂದು ಹುಡುಗನ ಕೈ ಹಿಡಿದ ಮೇಲೆ ಕೊರಗಜ್ಜನ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಕತ್ರಿನಾ ಕೈಫ್; ಕೋಲಾ ನೋಡಿದ್ರಾ?

ಇನ್ನು ಕೊರಗಜ್ಜನ ಬಳಿ ತನ್ನ ಸಂಕಷ್ಟದ ಬಗ್ಗೆಯೂ ವಿನಯ್ ಕುಲಕರ್ಣಿ ಅರಿಕೆ ಮಾಡಿಕೊಂಡಿದ್ದಾರೆ. ಮುಂದಿನ ತಿಂಗಳು ಕ್ಷೇತ್ರ ಪ್ರವೇಶಕ್ಕಿರುವ ನಿರ್ಬಂಧದ ತೀರ್ಪಿನ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮಗನಿಗೆ ಅಪಘಾತ ಸಂಭವಿಸಿ ಆರೋಗ್ಯ ಸಮಸ್ಯೆ ಎದುರಾಗಿರುವ ಬಗ್ಗೆ ಅಜ್ಜನ ಮುಂದೆ ಕುಲಕರ್ಣಿ ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ಎದುರಾಗಿರುವ ಸಂಕಷ್ಟವನ್ನು ನಿವಾರಿಸುವ ಅಭಯ ನೀಡಿದ ಕೊರಗಜ್ಜ ದೈವ, ತಪ್ಪು ಮಾಡೋದು ಸಹಜ, ತಿದ್ದಿಕೊಂಡು ಮುಂದುವರಿಯುವುದು ಉತ್ತಮ ಗುಣ. ಯಾವುದು ಸರಿ ಯಾವುದು ತಪ್ಪು ಎಂಬ ಲೆಕ್ಕ ನನ್ನ ಬಳಿ ಇದೆ. ನಿಮ್ಮ ಮುಂದಿನ ಭವಿಷ್ಯದ ಲೆಕ್ಕವು ನನ್ನ ಬಳಿ ಇದೆ. ಕಲಿಯುಗದಲ್ಲಿ ಆಗುವುದಿಲ್ಲ ಎಂಬುದನ್ನು ನಾನು ಮಾಡಿಸುತ್ತೇನೆ. ಕಷ್ಟವನ್ನು ನಿವಾರಿಸುತ್ತೇನೆ. ನಿಮ್ಮ ಜೊತೆ ನಾಲ್ಕು ಜನ ಒಳ್ಳೆಯವರಿದ್ದರೆ ಐದು ಜನ ಕೆಟ್ಟವರಿದ್ದಾರೆ. ಎಲ್ಲಾ ಸಂಕಷ್ಟವನ್ನು‌ ನಿವಾರಿಸಿ ಕುಟುಂಬದ ರಕ್ಷಣೆ ಮಾಡುವುದಾಗಿ ಕೊರಗಜ್ಜನ ಅಭಯ ಸಿಕ್ಕಿದೆ. 

ಸಂಕಷ್ಟ ಪರಿಹಾರಕ್ಕಾಗಿ ಶಾಸಕ ವಿನಯ್ ಕುಲಕರ್ಣಿ ಕೊರಗಜ್ಜ ದೈವದ ಮೊರೆ ಹೋಗಿದ್ದು, ಮಂಗಳೂರಿನ ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಕೊರಗಜ್ಜನ ಕಟ್ಟೆಯಲ್ಲಿ ಹರಕೆ ಕೋಲ ಸೇವೆ ಸಲ್ಲಿಸಿದ್ದಾರೆ. ಕೋಲದಲ್ಲಿ ಶಾಸಕ ಕುಲಕರ್ಣಿ, ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಭಾಗಿಯಾಗಿದ್ದು, ಸ್ಪೀಕರ್ ಯು.ಟಿ.ಖಾದರ್ ಸಹೋದರ ಇಫ್ತಿಕಾರ್ ಆಲಿ ಸಾಥ್ ನೀಡಿದರು‌. ಬಿಜೆಪಿ ಜಿಪಂ ಸದಸ್ಯ ಯೋಗೇಶ ಗೌಡ ಹತ್ಯೆ ಪ್ರಕರಣದ ಆರೋಪಿಯಾಗಿರೋ ವಿನಯ್ ಕುಲಕರ್ಣಿಗೆ ಸಿಬಿಐ ನ್ಯಾಯಾಲಯ ಧಾರವಾಡ ಕ್ಷೇತ್ರ ಪ್ರವೇಶಿಸದಂತೆ ನಿರ್ಬಂಧ ಹೇರಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಕ್ಷೇತ್ರಕ್ಕೆ ಭೇಟಿ ನೀಡದೆಯೇ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆದ್ದಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಕ್ಷೇತ್ರ ಪ್ರವೇಶಕ್ಕೆ ನಿರ್ಬಂಧ ಮುಂದುವರಿದಿದೆ. ಮುಂದಿನ ತಿಂಗಳು ಇದೇ ವಿಚಾರದಲ್ಲಿ ಕೋರ್ಟ್ ವಿಚಾರಣೆ ಇದ್ದು, ಈ ಎಲ್ಲಾ ಬೆಳವಣಿಗೆಗಳ ನಡುವೆ ಕೋಲ ಸೇವೆ ಕೊಟ್ಟಿದ್ದಾರೆ. ಕೋಲಸೇವೆ ಬಗ್ಗೆ ಶಾಸಕ ವಿನಯ್ ಕುಲಕರ್ಣಿ ಹೇಳಿಕೆ ನೀಡಿದ್ದು, ಚುನಾವಣಾ ಪೂರ್ವದಲ್ಲಿಯೇ ಕೋಲ ಸೇವೆಯ ಬಗ್ಗೆ ಕಾಂಗ್ರೆಸ್ ನಾಯಕರು ಹೇಳಿದ್ದರು. ಮಂಗಳೂರಿನ ನನ್ನ ಸ್ನೇಹಿತರು ಕೋಲ ಸೇವೆ ಕೊಡೋ ಬಗ್ಗೆ ಹೇಳಿದ್ದರು. ಈಗ ಘಳಿಗೆ ಕೂಡಿ ಬಂದ ಹಿನ್ನೆಲೆ ಕೋಲ ಸೇವೆ ಕೊಟ್ಟಿದ್ದೇನೆ. ಕುಟುಂಬ ಸಮೇತರಾಗಿ ಬಂದು ಕೋಲ ಸೇವೆಯಲ್ಲಿ ಭಾಗಿಯಾಗಿದ್ದೇನೆ ಎಂದಿದ್ದಾರೆ.

click me!