ಬಿಜೆಪಿ ಸೋತರೆ ಮತ್ತೆ ಚುನಾವಣೆಯೇ ಸೂಕ್ತ : ಪೇಜಾವರ ಶ್ರೀ

By Kannadaprabha NewsFirst Published Nov 28, 2019, 10:30 AM IST
Highlights

ಕರ್ನಾಟಕದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿಗೆ ಅಗತ್ಯದಷ್ಟುಸ್ಥಾನಗಳು ಸಿಗದಿದ್ದಲ್ಲಿ ಮತ್ತೆ ಸಾರ್ವತ್ರಿಕ ಚುನಾವಣೆಗೆ ಹೋಗುವುದೇ ಸೂಕ್ತ ಎಂದು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ(ನ.28): ಕರ್ನಾಟಕದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿಗೆ ಅಗತ್ಯದಷ್ಟುಸ್ಥಾನಗಳು ಸಿಗದಿದ್ದಲ್ಲಿ ಮತ್ತೆ ಸಾರ್ವತ್ರಿಕ ಚುನಾವಣೆಗೆ ಹೋಗುವುದೇ ಸೂಕ್ತ ಎಂದು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಅವರು ಬುಧವಾರ ತಮ್ಮ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಬಹುಮತ ಸಾಧ್ಯವಾಗದಿದ್ದರೆ ಹಿಂದಿನಂತೆ ಮತ್ತೆ ಜೆಡಿಎಸ್‌ ನೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು, ಆದರೆ ಅದು ಕಷ್ಟಇದೆ. ಅದಕ್ಕೆ ಉದಾರ ಮನಸ್ಸು ಬೇಕು, ಅಧಿಕಾರಕ್ಕಾಗಿ ಕಚ್ಚಾಟ ನಡೆಸಬಾರದು. ಹಿಂದೆ ಕೇಂದ್ರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ಎಲ್ಲಾ ಪಕ್ಷಗಳ ಉದಾರ ಮನಸ್ಸಿನಿಂದ ಸರ್ಕಾರ ಮಾಡಿದ್ದರು ಎಂದವರು ಹೇಳಿದ್ದಾರೆ.

'ಮಂದಿರಕ್ಕೆ ಮುಸ್ಲಿಮರು, ಮಸೀದಿಗೆ ಹಿಂದೂಗಳು ಸಹಾಯ ಮಾಡಿ'

ಆದರೆ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡುವಾಗ ರಾಜಕೀಯ ನೈತಿಕ ಅಧಃಪತನ ಆಗಿದೆ ಎಂದೆನಿಸುತ್ತಿದೆ. ಕರ್ನಾಟಕದ ಪರಿಸ್ಥಿತಿಯೂ ಬೇರೆಯಾಗಿಲ್ಲ ಎಂದವರು ಬೇಸರಿಸಿದ್ದಾರೆ.

ಬಿಜೆಪಿಗಿಂತಲೂ ಕಟ್ಟರ್‌ ಹಿಂದುತ್ವವಾದಿಯಾಗಿದ್ದ ಶಿವಸೇನೆಯವರು ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳುವುದು, ಬಿಜೆಪಿಯವರು ಎನ್‌.ಸಿ.ಪಿ.ಯ ಜೊತೆಗೆ ಸರ್ಕಾರ ಮಾಡುವುದು, ಪಕ್ಷಾಂತರ ಮಾಡುವುದು, ಎಲ್ಲಾ ಅಧಿಕಾರಕ್ಕಾಗಿ, ನೈತಿಕತೆಯನ್ನು ಬಿಟ್ಟಿದ್ದಾರೆ ಎಂದವರು ಹೇಳಿದ್ದಾರೆ.

ಮಂಗಳೂರು: ಈರುಳ್ಳಿ ರೇಟ್‌ ಕೇಳಿ ಮಸಾಲೆ ಅರೆಯಿರಿ!

ಬಿಜೆಪಿಯವರು ರಾತ್ರಿ ಬೆಳಗಾಗುವುದರೊಳಗೆ ಎನ್‌.ಸಿ.ಪಿ.ಯೊಂದಿಗೆ ಸರ್ಕಾರ ರಚಿಸಿದ್ದು ಸರಿಯಲ್ಲ, ಅದು ನೈತಕತೆ ಅಲ್ಲ ಎಂದವರು ಹೇಳಿದ್ದಾರೆ

ಎಲ್ಲ ಪಕ್ಷ ಸೇರಿ ಸರ್ಕಾರ ಸೂಕ್ತ:

ಯಾವುದೇ ಪಕ್ಷಕ್ಕೆ ಬಹುಮತ ಇಲ್ಲ ಎಂದಾದರೆ ಎಲ್ಲಾ ಪಕ್ಷಗಳು ಸೇರಿ, ಒಂದು ಸಮಾನ ಯೋಜನೆಯನ್ನು ಹಾಕಿಕೊಂಡು ಸರ್ಕಾರವನ್ನು ರಚಿಸಬೇಕು, ಹೆಚ್ಚು ಶಾಸಕರಿದ್ದ ಪಕ್ಷದವರು ಮುಖ್ಯಮಂತ್ರಿಗಳಾಗಬೇಕು, ಕಡಿಮೆ ಶಾಸಕರಿದ್ದ ಪಕ್ಷದವರು ಉಪಮುಖ್ಯಮಂತ್ರಿಗಳಾಗಬೇಕು. ವಿರೋಧ ಪಕ್ಷ ಇಲ್ಲದಿದ್ದರೂ ಪರವಾಗಿಲ್ಲ, ಅಧಿಕಾರಕ್ಕಾಗಿ ಜಗಳ ಮಾಡದೇ ಉದಾರ ಮನಸ್ಸಿನಿಂದ ಆಡಳಿತ ನಡೆಸಬೇಕು, ಮನಸ್ಸು ಮಾಡಿದರೆ ಸಾಧ್ಯವಿದೆ ಎಂದವರು ಹೇಳಿದ್ದಾರೆ.

click me!