ಕೆಮ್ಮು, ಜ್ವರ ಮಾತ್ರೆ ಪಡೆವವರ ಮೇಲೆ ಕಣ್ಣು

By Kannadaprabha NewsFirst Published Apr 24, 2020, 7:33 AM IST
Highlights

ರಾಜ್ಯದಲ್ಲಿ ಕೊರೋನಾ ಲಕ್ಷಣಗಳಿರುವ ಯಾರೂ ಕೂಡಾ ಪರೀಕ್ಷೆಯಿಂದ ತಪ್ಪಿಸಿಕೊಳ್ಳದಂತಹ ಮಹತ್ವದ ಕ್ರಮವನ್ನು ಸರ್ಕಾರ ಜರುಗಿಸಿದೆ. ಔಷಧ ಅಂಗಡಿಗಳಲ್ಲಿ ಜ್ವರ, ನೆಗಡಿ ಅಥವಾ ಕೆಮ್ಮಿನ ಔಷಧಿ ಪಡೆಯುವ ಪ್ರತಿಯೊಬ್ಬರ ವಿವರಗಳನ್ನು ಸಂಗ್ರಹಿಸಲು ಅದು ತೀರ್ಮಾನಿಸಿದೆ. ಈ ಔಷಧ ಪಡೆಯುವವರ ವಿವರವನ್ನು ಔಷಧ ಅಂಗಡಿಗಳು ಆರೋಗ್ಯಾಧಿಕಾರಿಗಳಿಗೆ ದಿನನಿತ್ಯ ನೀಡಬೇಕು ಎಂದು ಸರ್ಕಾರ ಸೂಚಿಸಿದೆ.

ಬೆಂಗಳೂರು(ಏ.24): ರಾಜ್ಯದಲ್ಲಿ ಕೊರೋನಾ ಲಕ್ಷಣಗಳಿರುವ ಯಾರೂ ಕೂಡಾ ಪರೀಕ್ಷೆಯಿಂದ ತಪ್ಪಿಸಿಕೊಳ್ಳದಂತಹ ಮಹತ್ವದ ಕ್ರಮವನ್ನು ಸರ್ಕಾರ ಜರುಗಿಸಿದೆ. ಔಷಧ ಅಂಗಡಿಗಳಲ್ಲಿ ಜ್ವರ, ನೆಗಡಿ ಅಥವಾ ಕೆಮ್ಮಿನ ಔಷಧಿ ಪಡೆಯುವ ಪ್ರತಿಯೊಬ್ಬರ ವಿವರಗಳನ್ನು ಸಂಗ್ರಹಿಸಲು ಅದು ತೀರ್ಮಾನಿಸಿದೆ. ಈ ಔಷಧ ಪಡೆಯುವವರ ವಿವರವನ್ನು ಔಷಧ ಅಂಗಡಿಗಳು ಆರೋಗ್ಯಾಧಿಕಾರಿಗಳಿಗೆ ದಿನನಿತ್ಯ ನೀಡಬೇಕು ಎಂದು ಸರ್ಕಾರ ಸೂಚಿಸಿದೆ.

ರಾಜ್ಯದಲ್ಲಿ ಜ್ವರ ಅಥವಾ ಸೋಂಕಿನ ಲಕ್ಷಣಗಳಿರುವವರು ಆಸ್ಪತ್ರೆಗೆ ಹೋಗಲು ಹೆದರಿ ಔಷಧ ಮಳಿಗೆಗಳಲ್ಲಿ ಸ್ವತಃ ಪ್ಯಾರಾಸಿಟಮಲ್‌ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಸೋಂಕು ಪತ್ತೆಗೆ ಅಡಚಣೆ ಉಂಟಾಗಿದೆ ಎಂಬ ಮಾತು ಕೇಳಿ ಬಂದಿತ್ತು.

ಕೊರೋನಾ ನಿರ್ವಹಣೆ: ಮೋದಿಗೆ ಶೇ.93 ಜನ ಮೆಚ್ಚುಗೆ

ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದ ರಾಜ್ಯದ ಎಲ್ಲ ಫಾರ್ಮಸಿಗಳಲ್ಲಿ ಪ್ಯಾರಾಸಿಟಮಲ್‌ ಮಾತ್ರೆ ಅಥವಾ ಸಿರಪ್‌, ಆ್ಯಂಟಿ ಬಯೋಟಿಕ್‌, ಸೋಂಕು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವವರ ಸಂಪೂರ್ಣ ವಿಳಾಸ, ಮೊಬೈಲ್‌ ಸಂಖ್ಯೆಯನ್ನು ಸಂಗ್ರಹಿಸಲಾಗುವುದು ಎಂದು ಸಚಿವ ಎಸ್‌. ಸುರೇಶ್‌ಕುಮಾರ್‌ ಗುರುವಾರ ತಿಳಿಸಿದರು.

ಕರಾವಳಿ ಬಿಜೆಪಿ ಭೀಷ್ಮನಿಗೆ ಮೋದಿ ಕರೆ, ಭಟ್ ಜಿ ಆಪ್ ಕೈಸೆ ಹೋ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಂಕಿನ ಲಕ್ಷಣಗಳಿರುವವರ ಮೇಲೆ ಇನ್ನೂ ಹೆಚ್ಚು ನಿಗಾ ಇಡಲು ತೀರ್ಮಾನಿಸಲಾಗಿದೆ. ಸೋಂಕಿನ ಲಕ್ಷಣಗಳಿರುವವರು ಆಸ್ಪತ್ರೆಗೆ ತಡವಾಗಿ ಬರುವುದು ಹಾಗೂ ಈ ವೇಳೆಗೆ ಹಲವರಿಗೆ ಸೋಂಕು ಹಬ್ಬಿಸುವುದನ್ನು ನಿವಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ನಿತ್ಯ ಈ ರೀತಿ ಮಾತ್ರೆಗಳನ್ನು ತೆಗೆದುಕೊಂಡು ಹೋದವರ ವಿವರಗಳನ್ನು ದಿನಾಂತ್ಯಕ್ಕೆ ಆಯಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಔಷಧ ಮಳಿಗೆಗಳವರು ನೀಡಬೇಕು. ಅದನ್ನು ಪರಿಶೀಲಿಸಿ ಆರೋಗ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.

click me!