ಲಾಕ್‌ಡೌನ್ ನಡುವೆ ವಿಧಾನಸೌಧ ಸಿಬ್ಬಂದಿಯ ಮನವಿ ಆಲಿಸಿ

By Suvarna NewsFirst Published Apr 23, 2020, 6:21 PM IST
Highlights

ಕೊರೋನಾ ಆತಂಕ ಎಲ್ಲರನ್ನೂ ಕಾಡುತ್ತಿದೆ/ ವಿಧಾನಸೌಧದ ಸಿಬ್ಬಂದಿಯಿಂದ ಸರ್ಕಾರಕ್ಕೆ ಮನವಿ/ ಕೆಲ ವಿನಾಯಿತಿ ನೀಡಬೇಕು/ ಸಾರಿಗೆ ಸಂಪರ್ಕವಿಲ್ಲದೆ ಕಷ್ಟವಾಗುತ್ತಿದೆ

ಬೆಂಗಳೂರು(ಏ. 23)   ಕೊರೋನಾ ಕಾಟ ವಿಧಾನಸೌಧವನ್ನು ಬಿಟ್ಟಿಲ್ಲ. ಲಾಕ್ ಡೌನ ಮುಗಿಯುವವರೆಗೆ ಕೆಲ ವಿನಾಯಿತಿ ನೀಡಲು ವಿಧಾನಸೌಧ ಅಧಿಕಾರಿಗಳು ಪತ್ರ ಬರೆದಿದ್ದಾರೆ.  ಲೌಕ್ ಡೌನ್ ಮುಗಿಯುವ ತನಕ ಕೆಲ ವಿನಾಯಿತಿ ನೀಡುವಂತೆ  ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಮಹಿಳಾ ಸಿಬ್ಬಂದಿಗಳಿಗೆ ಸಾರಿಗೆ ವ್ಯವಸ್ಥೆ ದೊಡ್ಡ ಮಟ್ಟದ ಸಮಸ್ಯೆಯಾಗಿದೆ. ಕಚೇರಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗ್ತಿದೆ. ಸಿಲ್ ಡೌನ್ ಏರಿಯಾದಿಂದ ಬರುವ ಸಿಬ್ಬಂದಿ ಪ್ರತ್ಯೇಕಿಸುವುದು ತೊಂದರೆಯಾಗಿದೆ.  ಅತ್ಯಗತ್ಯ ಸೇವೆಯ ಹೆಸರಿನಲ್ಲಿ ಎಲ್ಲಾ ಸಿಬ್ಬಂದಿಗಳು ಕೆಲಸಕ್ಕೆ ಬರೋದ್ರಿಂದ ಕಷ್ಟವಾಗ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಹೊಂಗಸಂದ್ರ ಸೀಲ್ ಡೌನ್; ಏನೇನಾಯ್ತು? 

ಅಗತ್ಯಕ್ಕೆ ತಕ್ಕಂತೆ ಅನುಪಾತದ ಪ್ರಕಾರ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಬೇಕು.  ವಿಧಾನಮಂಡಳ ಸಿಬ್ಬಂದಿಗೆ ಹಾಜರಾತಿಯಿಂದ ವಿನಾಯಿತಿ ನೀಡಬೇಕು.  ದೃಷ್ಟಿಹೀನ - ವಿಕಲಚೇತನ ಸಿಬ್ಬಂದಿಗೆ ಪೂರ್ಣ ವಿನಾಯಿತಿ ನೀಡಬೇಕು.  ವಿಧಾನಸೌಧಕ್ಕೆ ಬರುವ ಸಿಬ್ಬಂದಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕು. ಎಲ್ಲಾ ಕಚೇರಿಗಳ ಬಳಿ ಸ್ಯಾನಿಟೈಸರ್ ಟೇನಲ್ ಮತ್ತು ಥರ್ಮೋ ಸ್ಕ್ಯಾನಿಂಗ್ ಮಾಡಿಸಬೇಕು ಎಂದು ಒತ್ತಾಯ ಮಾಡಿದ್ದಾರೆ

ಗರ್ಭಿಣಿಯರು ಮತ್ತು ಕಾಯಿಲೆ ಇರುವ ಸಿಬ್ಬಂದಿಗೂ ಹಾಜರಾತಿಯಿಂದ ವಿನಾಯಿತಿ ನೀಡಿಬೇಕು.  ಕೇಂದ್ರ ಸರ್ಕಾರದ ಸೂಚನೆಯಂತೆ ಕರ್ತವ್ಯನಿರತ ಎಲ್ಲಾ ಸಿಬ್ಬಂದಿಗಳಿಗೆ ವಿಶೇಷ ವೈದ್ಯಕೀಯ ವಿಮೆ ಮಾಡಿಸಬೇಕು.  ಲಾಕ್ ಡೌನ್ ಮುಕ್ತಾಯದವರೆಗೆ ಸಾರ್ವಜನಿಕ ಭೇಟಿಯನ್ನು ಕಡ್ಡಾಯವಾಗಿ ನಿರ್ಬಂಧಿಸಬೇಕು ಎಂದು ಕೇಳಿಕೊಂಡಿದ್ದಾರೆ.

click me!