ಲಾಕ್‌ಡೌನ್‌: ವಾಹನ ತಪಾಸಣೆ ವೇಳೆ ಹೆಡ್‌ಕಾನ್ಸ್‌ಟೇಬಲ್‌ಗೆ ಡಿಕ್ಕಿ

Kannadaprabha News   | Asianet News
Published : Apr 24, 2020, 07:21 AM ISTUpdated : Apr 24, 2020, 07:25 AM IST
ಲಾಕ್‌ಡೌನ್‌: ವಾಹನ ತಪಾಸಣೆ ವೇಳೆ ಹೆಡ್‌ಕಾನ್ಸ್‌ಟೇಬಲ್‌ಗೆ ಡಿಕ್ಕಿ

ಸಾರಾಂಶ

ಹೆಡ್‌ಕಾನ್ಸ್‌ಟೇಬಲ್‌ ಒಬ್ಬರಿಗೆ ದ್ವಿಚಕ್ರ ವಾಹನ ಡಿಕ್ಕಿ| ಮುಖ್ಯಪೇದೆ ಗೋಪಾಲ್‌ ಗಾಯಾಳು| ಬಲಗಾಲಿನ ಮೂಳೆ ಮುರಿದಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು| ಈ ಸಂಬಂಧ ದ್ವಿಚಕ್ರ ವಾಹನ ಸವಾರ ಸುಮಂತ್‌ (32) ಎಂಬಾತನ ಬಂಧನ| 

ಬೆಂಗಳೂರು(ಏ.24): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನ ತಪಾಸಣೆಯಲ್ಲಿ ತೊಡಗಿದ್ದ ಹೆಡ್‌ಕಾನ್ಸ್‌ಟೇಬಲ್‌ ಒಬ್ಬರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಾಜಿನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜಾಜಿನಗರ ಸಂಚಾರ ಠಾಣೆಯ ಮುಖ್ಯಪೇದೆ ಗೋಪಾಲ್‌ ಗಾಯಾಳು. ಬಲಗಾಲಿನ ಮೂಳೆ ಮುರಿದಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ದ್ವಿಚಕ್ರ ವಾಹನ ಸವಾರ ಸುಮಂತ್‌ (32) ಎಂಬಾತನನ್ನು ಬಂಧಿಸಿ, ವಾಹನ ಜಪ್ತಿ ಮಾಡಲಾಗಿದೆ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ ದಾಖಲೆಯ 778 ಜನಕ್ಕೆ ವೈರಸ್‌

ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ರಾಜ್‌ಕುಮಾರ್‌ ಸಮಾಧಿ ಸಮೀಪ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಬಂದ ಸುಮಂತ್‌ ನಿಯಂತ್ರಣ ತಪ್ಪಿ ಹಿಂಬಂದಿಯಿಂದ ಗೋಪಾಲ್‌ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಗೋಪಾಲ್‌ ಕೈ, ಕಾಲು ಹಾಗೂ ಮುಖಕ್ಕೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

PREV
click me!

Recommended Stories

ಭದ್ರಾವತಿಯಲ್ಲಿ ನಾಳೆ ಅಭಿಮಾನಿಗಳಿಂದ ಡಾ. ರಾಜ್, ಪುನೀತ್ ದೇಗುಲ ಲೋಕಾರ್ಪಣೆ!
ಇಸ್ರೇಲ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ: ಹಳೇ ಆರೋಪಿ ರಾಜಗಿರಿ ಕೈವಾಡ?