
ಕೊಪ್ಪಳ (ಅ.17): ರಾಜ್ಯದ ಪ್ರಮುಖ ರೈಲ್ವೆ ಮಾರ್ಗಗಳಲ್ಲಿ ಒಂದಾಗಿರುವ ಯಶವಂತಪುರ- ಕಾರಟಗಿ ಎಕ್ಸ್‌ಪ್ರೆಸ್ ರೈಲು ಕಾರಟಗಿ ಸಮೀಪದಲ್ಲಿ ಹಳಿ ತಪ್ಪಿದ್ದು, ಚಾಲಕನ ಸಮಯ ಪ್ರಜ್ಷೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.
ಅತ್ಯಂತ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ಹಣದಲ್ಲಿ ಪ್ರಯಾಣ ಮಾಡಲು ಅನಕೂಲವಾಗಿರುವ ಭಾರತೀಯ ರೈಲ್ವೆ ಸೇವೆಯು ಕಲ್ಯಾಣ ಕರ್ನಾಟಕದ ಜನರಿಗೂ ಅನುಕೂಲ ಆಗುವಂತೆ ಹಲವು ಮಾರ್ಗಗಳಿಗೆ ಸೇವೆಯನ್ನು ಕಲ್ಪಿಸಿದೆ. ಇನ್ನು ಎಲ್ಲ ರೈಲುಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ (ಮೆಜೆಸ್ಟಿಕ್) ಬರಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಯಶವಂತಪುರದಿಂದ ಕೆಲವು ರೈಲುಗಳನ್ನು ಸಂಚಾರಕ್ಕೆ ಬಿಡಲಾಗಿದೆ. ಅದೇ ರೀತಿ ಯಶವಂತಪುರ-ಕಾರಟಗಿ- ವಿಜಯಪುರ ಎಕ್ಸ್‌ಪ್ರೆಸ್ ರೈಲನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದು, ಬಹಳಷ್ಟು ಪ್ರಯಾಣಿಕರಿಗೆ ಅನುಕೂಲವಾಗಿದೆ.
ತಮಿಳು ಗೊತ್ತಿಲ್ಲದೇ ತಮಿಳುನಾಡಿನಲ್ಲಿ ಬದುಕೋಕಾಗಲ್ಲ, ಇಲ್ಲಿ ಕನ್ನಡ ಬರದಿದ್ರೂ ಬದುಕಬಹುದು: ಸಿಎಂ ಸಿದ್ದರಾಮಯ್ಯ
ಆದರೆ, ಯಶವಂತಪುರ- ಕಾರಟಗಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದೆ. ರೈಲ್ವೆ ಚಾಲಕನ ಸಮಯ ಪ್ರಜ್ಞೆಯಿಂದ ಬಾರೀ ಅನಾಹುತ ತಪ್ಪಿದೆ. ಕೊಪ್ಪಳ ಜಿಲ್ಲೆಯ ಕಾರಟಗಿಯ ರೇಲ್ವೆ ನಿಲ್ದಾಣದ ಸಮೀಪ ಘಟನೆ ನಡೆದಿದೆ. ಯಶವಂತಪುರದಿಂದ ಕಾರಟಗಿ ನಿಲ್ದಾಣಕ್ಕೆ ಆಗಮಿಸುವ ವೇಳೆ ಘಟನೆ ನಡೆದಿದೆ. ರೈಲು ನಿಧಾನವಾಗಿ ಚಲಿಸುತ್ತಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಇನ್ನು ಸಂಪೂರ್ಣವಾಗಿ ರೈಲ್ವೆ ಇಂಜಿನ್ ಹಳಿ ತಪ್ಪಿದ್ದು, ನಿಲ್ದಾಣ ಸಮೀಪವಿದ್ದ ಕಾರಣ ರೈಲು ಕೂಡ ನಿಧಾನವಾಗಿ ಚಲಿಸುತ್ತಿತ್ತು. ಹೀಗಾಗಿ, ಇಂಜಿನ್ ಮಾತ್ರ ಹಳಿ ತಪ್ಪಿದ್ದರೂ ಬೋಗಿಗಳು ಮಾತ್ರ ರೈಲ್ವೆ ಹಳಿಯಲ್ಲಿಯೇ ಇದ್ದವು. ರೇಲ್ವೆ ಹಳಿ ತಪ್ಪಿದ್ದರಿಂದ ಎರಡು ರೇಲ್ವೆ ಸಂಚಾರದಲ್ಲಿ ಅಡೆತಡೆ ಉಂಟಾಗಿದೆ. ರೇಲ್ವೆ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ರೈಲು ವೇಗವಾಗಿ ಚಲಿಸುತ್ತಿದ್ದ ಸಾವು ನೋವಿನ ಪ್ರಮಾಣ ಸಾವಿರಕ್ಕೂ ಅಧಿಕವಾಗುತ್ತಿತ್ತು ಎಂದು ಹೇಳಲಾಗುತ್ತಿದೆ.
ಕರ್ನಾಟಕದಲ್ಲಿ ಐಟಿ ದಾಳಿಯ ಕುರಿತು ಸಂಸದ ಕರಡಿ ಸಂಗಣ್ಣ ವಾಗ್ದಾಳಿ: ಕೊಪ್ಪಳ: ಕರ್ನಾಟಕದ ಬಿಲ್ಡರ್ ಗಳ ಮನೆಯಲ್ಲಿ ಸಿಕ್ಕ ಸಂಪತ್ತಿನಿಂದ ಸರಕಾರ ತಲೆತಗ್ಗಿಸುವಂತದ್ದಾಗಿದೆ ಎಂದು ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ, ಶೇ. 40 ಪರ್ಸೆಂಟ್ ಸರಕಾರ ಎಂದು ಗುತ್ತಿಗೆದಾರರ ಸಂಘ ಆಪಾದನೆ ಮಾಡಿತ್ತು. ಈಗ ಗುತ್ತಿಗೆದಾರರ ಮನೆಯಲ್ಲಿ ಕೋಟ್ಯಂತರ ಹಣ ಸಿಕ್ಕಿದೆ. ಅಂದರೆ ಕಾಂಗ್ರೆಸ್ ಪಾರ್ಟಿ ಪರವಾಗಿರುವ ಈ ಗುತ್ತಿಗೆದಾರರ ಸಂಘವಾಗಿದೆ. ಈ ಸಂಘವನ್ನು ಮೊದಲು ವಜಾ ಮಾಡಬೇಕು, ಒಳಒಪ್ಪಂದದ ಸಂಘವಿದು. ಗುತ್ತಿಗೆದಾರರ ಸಂಘ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ದೇಶದ 8 ಹೆಸರಾಂತ ಉದ್ಯಮಿಗಳೊಂದಿಗೆ, ಜಿಂದಾಲ್ ನೇತೃತ್ವದಲ್ಲಿ ಇನ್ವೆಸ್ಟ್ ಕರ್ನಾಟಕ ಫೋರಂ
ರಾಜ್ಯ ಸರ್ಕಾರ ವಿದ್ಯುತ್‌ನಲ್ಲಿಯೂ ಕಮೀಷನ್ ಹೊಡೆಯುತ್ತದೆ: ಮಲ್ಲಿಕಾರ್ಜುನ ಖರ್ಗೆ, ಸುರ್ಜೆವಾಲಾ ಬಂದು ಗುಪ್ತ ಸಭೆ ನಡೆಸ್ತಾರೆ. ಇದರಲ್ಲಿ ಕಾಂಗ್ರೆಸ್ ಭಾಗಿಯಾಗಿದೆ ಅಂತ ಅರ್ಥ. ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲ ವಿಷಯದಲ್ಲಿ ಎಡವಿದೆ. ಬರದ ವಿಚಾರ, ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಬಂದು ಹೋಗಿದೆ. ಕಾಂಗ್ರೆಸ್ ಸರಕಾರ ವಿದ್ಯುತ್ ನಲ್ಲಿಯೂ ಕಮಿಷನ್ ಹೊಡೆಯುತ್ತಿದ್ದಾರೆ. ಬೇರೆ ರಾಜ್ಯದಿಂದ ವಿದ್ಯುತ್ ಖರೀದಿಸಿದರೆ ಕಮಿಷನ್ ಸಿಗುತ್ತೆ ಎಂದು ಬೇರೆ ರಾಜ್ಯದಿಂದ ವಿದ್ಯುತ್ ಖರೀದಿಸುತ್ತಿದೆ. ದು ರೈತರನ್ನು, ಬಡವರನ್ನು ರಕ್ಷಣೆ ಮಾಡದ ಸರ್ಕಾರವಾಗಿದೆ. ಬಿಜೆಪಿ ಸರಕಾರದ ಅವಧಿಯ ಹಣವೆಂದು ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ವಿಚಾರವಾಗಿದೆ. ತನಿಖೆ ನಡೆಯಲಿ ಎಲ್ಲವೂ ಬಯಲಿಗೆ ಬರುತ್ತದೆ. ಕಲಾವಿದರ ಆಯ್ಕೆಗೂ ಲಂಚಕೇಳುತ್ತಾರೆ ಎಂದರೆ ನಾಚಿಕೆಗೇಡಿನ ವಿಚಾರ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ಕರಡಿ ಸಂಗಣ್ಣ ವಾಗ್ದಾಳಿ ನಡೆಸಿದರು.