ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಪಿಲಿಗೊಬ್ಬು ಮತ್ತು ಆಹಾರ ಮೇಳ ಬಹಳ ವಿಜ್ರಂಭಣೆಯಿಂದ ನಡೆಯಲಿದೆ. ಅ.21 ಮತ್ತು ಅ.22 ರಿಂದ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, 30 ಸಾವಿರ ಜನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮಂಗಳೂರು (ಅ.17): ತುಳುನಾಡಿನಲ್ಲಿ ದಸರಾ ಸಂಭ್ರಮ, ನವರಾತ್ರಿ ಎಂದರೆ ಅದು ಹುಲಿ ವೇಷ ಕುಣಿತ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಈ ಬಾರಿ ವಿಜಯ ಸಾಮ್ರಾಟ್ ಪುತ್ತೂರು ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ ನೇತೃತ್ವದಲ್ಲಿ 'ಪಿಲಿಗೊಬ್ಬು ' ಬಹಳ ವಿಜ್ರಂಭಣೆಯಿಂದ ನಡೆಯಲಿದೆ. ಅ.21 ಮತ್ತು ಅ.22 ರಿಂದ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಮಾರುಗದ್ದೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಮೊದಲ ದಿನದಿಂದ ಅಂದರೆ ಅ.21ರಿಂದ ಫುಡ್ ಫೆಸ್ಟ್ (ಆಹಾರ ಮೇಳ) ಕಾರ್ಯಕ್ರಮ ನಡೆಯಲಿದೆ. ತುಳುನಾಡಿನ ವಿಭಿನ್ನ ಶೈಲಿಯ ಆಹಾರವನ್ನು ಸವಿಯುವ ಅವಕಾಶ ದೊರೆಯಲಿದೆ. ಇದು ಪುತ್ತೂರಿನಲ್ಲಿ ನಡೆಯುತ್ತಿರುವ ಪ್ರಪ್ರಥಮ ಆಹಾರ ಮೇಳವಾಗಿದೆ.
ಮಂಗಳೂರು: ಮಂಗಳಾದೇವಿ ಸ್ಟಾಲ್‌ಗಳಿಗೆ 'ಭಗವಾಧ್ವಜ': ವಿವಾದಕ್ಕೆ ವಿಎಚ್‌ಪಿ ಎಂಟ್ರಿ!
ಅ.21ರ ಸಂಜೆ 4 ಗಂಟೆಯಿಂದ ಅ.22 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಪಿಲಿಗೊಬ್ಬು ಕಾರ್ಯಕ್ರಮ ನಡೆಯಲಿದ್ದು, ಸುಮಾರು 30 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.
ಪಿಲಿಗೊಬ್ಬ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಸ್ಪರ್ಧೆಗಳಿಗೆ ಈ ಕೆಳಗಿನ ನಿಯಮ ಕಡ್ಡಾಯವಾಗಿದೆ.
10 ತಂಡಗಳಿಗೆ ಮಾತ್ರ ಅವಕಾಶ
ಹುಲಿ ನೃತ್ಯ ಮಾಡಲು ಪ್ರತೀ ತಂಡಕ್ಕೆ 23 ನಿಮಿಷಗಳ ಅವಕಾಶ.
ಗರಿಷ್ಠ 15 ಹುಲಿಗಳಿಗೆ ಮಾತ್ರ ಒಂದು ತಂಡದಲ್ಲಿ ಅವಕಾಶ.
ಪ್ರಥಮ ಬಹುಮಾನ 3ಲಕ್ಷ ರೂ, ದ್ವಿತೀಯ ಬಹುಮಾನ 2ಲಕ್ಷ ರೂ, ಮತ್ತು ತೃತೀಯ ಬಹುಮಾನ 1 ಲಕ್ಷ ರೂ ಹಾಗೂ
10,000 ರೂ ಐದು ವ್ಯಯಕ್ತಿಕ ಬಹುಮಾನಗಳು.
ಕರಾವಳಿಗರಿಗೆ ಸಂತಸ, ಮಡ್ಗಾಂವ್- ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ
ಪರಿಣತಿ ಹೊಂದಿದ ತೀರ್ಪುಗಾರರು ಕಾರ್ಯಕ್ರಮದಲ್ಲಿ ಇರಲಿದ್ದಾರೆ. ತಂಡಗಳ ನಿಯಮ ಮತ್ತು ನಿಬಂಧನೆಗಳನ್ನು ಆಯಾ ತಂಡಗಳಿಗೆ ಪ್ರತ್ಯೇಕವಾಗಿ ನೀಡುತ್ತೇವೆ. ಸ್ಯಾಂಡಲ್‌ವುಡ್ ಮತ್ತು ಕೋಸ್ಟಲ್‌ವುಡ್ ಚಲನಚಿತ್ರ ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.