ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ, ವಿವೇಕ ಸ್ಮಾರಕ ಉದ್ಘಾಟಿಸಿ ಮೋದಿ ಭಾಷಣ

Published : Aug 01, 2026, 06:00 PM IST
PM Modi

ಸಾರಾಂಶ

ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರನ್ನುದ್ದೇಶಿ ಮಾತನಾಡಿದ್ದಾರೆ. ಈ ವೇಳೆ ಮೈಸೂರು ಭಾರತದ ಸಾಂಸ್ಕೃತಿಕ ಕೇಂದ್ರವಾಗಿದೆ ಎಂದಿದ್ದಾರೆ. ಮೋದಿ ಭಾಷಣದ ವಿವರ ಇಲ್ಲಿದೆ.

ಮೈಸೂರು (ಆ.01) ಭಾರತದ ಅರ್ಥ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿದೆ. ಭಾರತದ ಯುವ ಶಕ್ತಿಯಿಂದ ಇದು ಸಾಧ್ಯವಾಗಿದೆ. ಇಂದು ಭಾರತ ವಿಶ್ವದ ಮೂರನೇ ಅತೀ ದೊಡ್ಡ ಸ್ಟಾರ್ಟ್ಅಪ್ ವ್ಯವಸ್ಥೆಯಾಗಿದೆ.ಇದರ ಹಿಂದೆ ಯವ ಶಕ್ತಿ ಇದೆ. ಇಂದು ಭಾರತ ಅತೀ ದೊಡ್ಡ ಮೊಬೈಲ್ ರಫ್ತು ದೇಶವಾಗಿದೆ. ಇದರ ಹಿಂದೆ ಯುವ ಶಕ್ತಿ ಕಾರಣವಾಗಿದೆ. ಭಾರತದ ಯುವಕರ ಸಾಮರ್ಥ್ಯದಿಂದ ಸೆಮಿಕಂಡಕ್ಟರ್, ಎಐ, ತಂತ್ರಜ್ಞಾನ, ಸಂಶೋಧನೆಯಲ್ಲಿ ಹೊಸ ಅಧ್ಯಾಯ ನಿರ್ಮಾಣವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಯುವ ಶಕ್ತಿಯಿಂದ ಭಾರತ ಕಂಗೊಳಿಸುತ್ತಿದೆ ಎಂದು ಯುವ ಸಮೂಹದ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ರಾಮಕೃಷ್ಣ ಆಶ್ರಮದ ವಿದ್ಯಾ ಶಾಲೆ ವೇದಿಕೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೋದಿ ಸಾರ್ವಜನಿಕರನ್ನುದ್ದೇಶಿಸಿ ಕನ್ನಡದಲ್ಲೇ ಮಾತು ಆರಂಭಿಸಿದರು. ಮೈಸೂರು ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪ್ರಮಾಣ ಸಲ್ಲಿಸಿ ಮಾತು ಆರಂಭಿಸಿದ ಪ್ರಧಾನಿ ಮೋದಿ, ನನ್ನ ಯಾತ್ರೆ ಆರಂಭ ಹಾಗೂ ಇಂದು ನಾನು ಯಾವ ಸ್ಥಾನದಲ್ಲಿದ್ದೇನೆ ಅನ್ನೋದರ ಹಿಂದೆ ರಾಮಕೃಷ್ಣ ಮಠದ ಯೋಗದಾನವಿದೆ ಎಂದು ಮೋದಿ ಹೇಳಿದ್ದಾರೆ.

ಮೈಸೂರಿನ ಪವಿತ್ರ ಭೂಮಿಯಲ್ಲಿ ನನಗೆ ವಿಶೇಷ ಉತ್ಸಾಹ, ಹಾಗೂ ಚೈತನ್ಯ ಸಿಗುತ್ತಿದೆ. ಮೈಸೂರು ಭಾರತದ ಸಾಂಸ್ಕೃತಿಕ ಕೇಂದ್ರವಾಗಿದೆ. ಇಲ್ಲಿನ ದೇವಸ್ಥಾನ, ಇಲ್ಲಿನ ಪರಂಪರೆ, ಉತ್ಸವ, ಮೈಸೂರು ದಸರಾ, ಇಲ್ಲಿನ ಅರಮನೆ, ಸಂಗೀತ, ಸಾಹಿತ್ಯ ಸೇರಿದಂತೆ ಭಾರತೀಯ ಪರಂಪರೆ ಇಲ್ಲಿನ ಭೂಮಿಯ ಕಣಕಣದಲ್ಲಿದೆ. ಶ್ರೀ ರಾಮಕೃಷ್ಣ ಆಶ್ರಮ ಮೈಸೂರಿನ ಸಮೃದ್ಧ ಪರಂಪರೆಯಲ್ಲಿ ಭವ್ಯ ಕೊಡುಗೆ ನೀಡಿದೆ. ಸ್ವಾಮಿ ವಿವೇಕಾನಂದರ ಪ್ರಯಾಣದಲ್ಲಿ ಇಲ್ಲಿ ತಂಗಿದ್ದರು. ರಾಷ್ಟ್ರ ಕವಿ ಕುವೆಂಪು ಮೈಸೂರಿನಲ್ಲಿರುವಾಗ ರಾಮಕೃಷ್ಣ ಆಶ್ರಮದ ಜೊತೆ ಉತ್ತಮ ಸಂಬಂಧ ಹೊಂದಿದ್ದರು.

ಸ್ವಾಮಿ ವಿವೇಕಾನಂದರು ಯುವ ಸ್ವಾಮಿಯಾಗಿದ್ದ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಿದ್ದರು. ಅಂದು ವಿವೇಕಾನಂದರು ಯುವಕರಾಗಿದ್ದರು ಅವರ ಮಾತುಗಳು, ಚಿಂತನೆಗಳು ಪ್ರಬುದ್ಧವಾಗಿತ್ತು. ಅಂದು ಮೈಸೂರಿಗೆ ಆಗಮಿಸಿದ ಸ್ವಾಮಿ ವಿವೇಕಾನಂದರಿಗೆ ಮೈಸೂರು ಮಹಾರಾಜರು ಅತ್ಯಂತ ಗೌರವ ನೀಡಿದ್ದರು. ವಿವೇಕಾನಂದರ ಅಮೆರಿಕ ಪ್ರಯಾಣದಲ್ಲಿ ಮಹಾರಾಜರ ಕೊಡುಗೆಯನ್ನು ಸ್ಮರಿಸಿದ್ದಾರೆ.

ಯುವ ಶಕ್ತಿಯಿಂದ ಭಾರತ ಬಲಿಷ್ಠ

ಭಾರತದ ಯುವ ಶಕ್ತಿಯಿಂದ ಭಾರತ ಪ್ರಬಲ ರಾಷ್ಟ್ರವಾಗಿ ಮುನ್ನುಗ್ಗುತ್ತಿದೆ. ಯಾವುದೇ ದೇಶದಲ್ಲಿ ಯುವ ಸಾಮರ್ಥ್ಯ ಸರಿಯಾದ ದಿಕ್ಕು, ಅವಕಾಶಗಳು ಸಿಕ್ಕಿದಾಗ ಆ ದೇಶ ಪ್ರಬಲ ಶಕ್ತಿಯಾಗಿ ಬೆಳೆಯುತ್ತದೆ. ಇದೇ ವೇಳೆ ಭಾರತದಲ್ಲಿ ಐಐಟಿ, ಐಟಿ , ವಿಶ್ವವಿದ್ಯಾಲಯ, ದೇಶದ ಎಂಬಿಬಿಎಸ್ ಸೀಟುಗಳು, ಮೆಡಿಕಲ್ ಕಾಲೇಜುಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಭಾರತದ ಯುವ ಸಮೂಹವನ್ನು ಭವಿಷ್ಯಕ್ಕಾಗಿ ನಿರ್ಮಾಣ ಮಾಡುವ ಕಾರ್ಯದಲ್ಲಿ ನಿರತವಾಗಿದೆ ಎಂದು ಮೋದಿ ಹೇಳಿದ್ದಾರೆ.

PREV
Read more Articles on
click me!

Recommended Stories

ಕೋಲಾರ ಮಹಿಳಾ ಉದ್ಯಮಿಯ ಸಾಧನೆ: ಮಾಲ್ಡೀವ್ಸ್‌ಗೆ ಮೊದಲ ಬಾರಿಗೆ ಕರ್ನಾಟಕದಿಂದ ಮಾವು ರಫ್ತು, ರೈತರಿಗೆ ಅಶ್ವಿನಿ ಸಾಥ್!
ಕಾವೇರಿ ಕೊಳ್ಳದಲ್ಲಿ ವರುಣನ ಆರ್ಭಟ: ಕಬಿನಿ ಭರ್ತಿ, ಹಾರಂಗಿ ಜಲಾಶಯದಿಂದ ಭಾರಿ ನೀರು ತಮಿಳುನಾಡಿಗೆ ಬಿಡುಗಡೆ!