ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಪ್ರಧಾನಿ ಮೋದಿಯಿಂದ ವಿವೇಕ ಸ್ಮಾರಕ ಉದ್ಘಾಟನೆ

Published : Aug 01, 2026, 04:39 PM ISTUpdated : Aug 01, 2026, 04:51 PM IST
Narendra Modi at mysuru

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಇಂದು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟನೆ ಮಾಡಿದ್ದಾರೆ. ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಆಗಮಿಸಿದ ಮೋದಿ ವಿವೇಕ ಸಾಂಸ್ಕೃತಿ ಕೇಂದ್ರ ಉದ್ಘಾಟನೆ ಮಾಡಿದ್ದಾರೆ.

ಮೈಸೂರು (ಆ.01) ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ( ವಿವೇಕ ಸ್ಮಾರಕ)ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. 1892ರಲ್ಲಿ ಸ್ವಾಮಿ ವಿವೇಕಾನಂದರು ಇಲ್ಲಿ ತಂಗಿದ್ದರು. ಈ ಪ್ರಮುಖ ಹಾಗೂ ವಿಶೇಷ ಘಟನೆಯ ನೆನಪಿಗಾಗಿ ವಿವೇಕ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾಥ್ ನೀಡಿದರು.45 ಕೋಟಿ ರೂಪಾಯಿ ವೆಚ್ಚದ ವಿವೇಕ ಸಾಂಸ್ಕೃತಿಕ ಕೇಂದ್ರ ಉದ್ಘಾಟನೆಗೊಂಡಿದೆ. ವೀವೇಕ ಕೇಂದ್ರದಲ್ಲಿ ಗಿಡ ನಡುವ ಮೂಲಕ ಮೋದಿ ವಿವೇಕ ಸ್ಮಾರಕ ಉದ್ಘಾಟನೆ ಮಾಡಿದ್ದಾರೆ. ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕವನ್ನು ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯಲ್ಲಿ ಮೂಡಿಬಂದಿದೆ.

ಸ್ವಾಮಿ ವಿವೇಕಾನಂದರ ಆಶೀರ್ವಾದ ಪಡೆದ ಮೋದಿ

1892ರಲ್ಲಿ ಮೈಸೂರಿಗೆ ಆಗಮಿಸಿದ್ದ ಸ್ವಾಮಿ ವಿವೇಕಾನಂದರು ಇದೇ ಸ್ಥಳದಲ್ಲಿ ಪ್ರವಚನ ನೀಡಿದ್ದರು. ಈ ವೇಳೆ ಮೈಸೂರು ಮಹಜಾರಾಜರು, ದಿವಾನರು ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದರ ಸವಿನೆನಪಿಗಾಗಿ ಇದೀಗ ವಿವೇಕ ಸ್ಮಾರಕ ತಲೆ ಎತ್ತಿದೆ. ವಿವೇಕ ಸ್ಮಾರಕ ಉದ್ಘಾಟನೆಗೂ ಮೊದಲು ಪ್ರಧಾನಿ ನರೇಂದ್ರ ಮೋದಿ ರಾಮಕೃಷ್ಣ ಆಶ್ರಮದಲ್ಲಿರುವ ಸ್ವಾಮಿ ವಿವೇಕಾನಂದರ ಮೂರ್ತಿಗೆ ನಮನ ಸಲ್ಲಿಸಿದರು.ವಿವೇಕಾನಂದ ಸ್ಮಾರಕದಲ್ಲಿ ಕುಳಿತ ಪ್ರಧಾನಿ ಮೋದಿ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಮೇಲೆ ಬೆಳಕು ಚೆಲ್ಲಿದರು.

ಆಂಧ್ರ ಪ್ರದೇಶಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿ ಬಳಿಕ ಮೈಸೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಪ್ರಧಾನಿ ಮೋದಿಯನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೂಗುಚ್ಚ ನೀಡಿ ಸ್ವಾಗತ ನೀಡಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ರಸ್ತೆ ಮಾರ್ಗವಾಗಿ ಓವೆಲ್ ಮೈದಾನಕ್ಕೆ ಆಗಮಿಸಿದರು.

ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನಲೆಯಲ್ಲಿ ಭಾರಿ ಭಿಗಿ ಭದ್ರತೆ ಕೈಗೊಳ್ಳಲಾಗಿದೆ. ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಇಷ್ಟೇ ಅಲ್ಲ ಮೋದಿ ಸಂಚರಿಸುವ ಮಾರ್ಗಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ.ಮೋದಿ ಸಂಚರಿಸುವ ಮಾರ್ಗದ ಇಕ್ಕೆಲಗಳಲ್ಲಿ ಕಿಕ್ಕಿರಿದು ಜನ ತುಂಬಿದ್ದರು. ಮೋದಿಯತ್ತ ಕೈಬೀಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮೋದಿ ಮೋದಿ ಎಂಬ ಜಯಘೋಷಗಳು ಮೊಳಗಿದೆ. ಪ್ರಧಾನಿ ಮೋದಿಯನ್ನು ಹತ್ತಿರದಿಂದ ನೋಡಿ ಹಲವು ಖುಷಿಯಾಗಿದ್ದಾರೆ. ಜೀವನದಲ್ಲಿ ಮೊದಲ ಬಾರಿಗೆ ಮೋದಿ ನೋಡಿದ್ದೇವೆ. ನಮ್ಮ ಬಳಿ ಬಂದಾಗ ಮೋದಿ ವಾಹನ ನಿಧಾನ ಮಾಡಿ ಕೈಬೀಸಿದರು. ಇದು ನಮ್ಮ ಖುಷಿ ಮತ್ತಷ್ಟು ಹೆಚ್ಚಿಸಿದೆ ಎಂದಿದ್ದಾರೆ.

 

PREV
Read more Articles on
click me!

Recommended Stories

ಕಾವೇರಿ ಕೊಳ್ಳದಲ್ಲಿ ವರುಣನ ಆರ್ಭಟ: ಕಬಿನಿ ಭರ್ತಿ, ಹಾರಂಗಿ ಜಲಾಶಯದಿಂದ ಭಾರಿ ನೀರು ತಮಿಳುನಾಡಿಗೆ ಬಿಡುಗಡೆ!
ರಾಜ್ಯಕ್ಕೆ ಮತ್ತೆ ಕೈಕೊಟ್ಟ ಮಳೆ: ಒಂದು ವಾರದಲ್ಲಿ 10 ಜಿಲ್ಲೆಗಳಲ್ಲಷ್ಟೇ ವರುಣಾರ್ಭಟ, 3 ಜಿಲ್ಲೆಗಳಿಗೆ ರೆಡ್ ಅಲರ್ಟ್!