ಹಾಸನಾಂಬೆ ಹುಂಡಿಯಲ್ಲಿ ಈ ಬಾರಿ ಸಂಗ್ರಹವಾದ ಹಣವೆಷ್ಟು..? ಆದಾಯದಲ್ಲಿ ಭಾರಿ ಕುಸಿತ

Kannadaprabha News   | Asianet News
Published : Nov 18, 2020, 08:27 AM IST
ಹಾಸನಾಂಬೆ ಹುಂಡಿಯಲ್ಲಿ ಈ ಬಾರಿ ಸಂಗ್ರಹವಾದ ಹಣವೆಷ್ಟು..? ಆದಾಯದಲ್ಲಿ ಭಾರಿ ಕುಸಿತ

ಸಾರಾಂಶ

 ಬಾರಿ ಜಾತ್ರಾ ಮಹೋತ್ಸವದಲ್ಲಿ ಹಾಸನಾಂಬೆ ಹುಂಡಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹಣ ಸಂಗ್ರಹವಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಈ ಕುಸಿತವಾಗಿದೆ

ಹಾಸನ (ನ.18) : ವರ್ಷಕ್ಕೊಮ್ಮೆ ಬಾಗಿಲು ತೆಗೆದು ಸಾರ್ವಜನಿಕರಿಗೆ ದರ್ಶನ ನೀಡುವ ಹಾಸನಾಂಬೆ ದೇವಾಲಯದ ಆದಾಯ ಕೋಟಿಯಿಂದ ಲಕ್ಷಕ್ಕೆ ಕುಸಿದಿದೆ. ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನಿರ್ಬಂಧ ಹೇರಿದ್ದರಿಂದ ಭಕ್ತರಿಂದ ಕಾಣಿಕೆ ರೂಪದಲ್ಲಿ 22.79 ಲಕ್ಷ ರು. ಮಾತ್ರ ಸಂಗ್ರಹವಾಗಿದೆ.

ಪೂರ್ವ ನಿಗದಿ​ಯಂತೆ ನ.16ರಂದು ದೇಗುಲದ ಬಾಗಿಲು ಹಾಕಲಾಗಿದೆ. ಮಂಗಳವಾರ ಹುಂಡಿ ಎಣಿಕೆ ಮಾಡಲಾಗಿದ್ದು, ಹಾಸನಾಂಬೆ ದೇಗುಲದ ಹುಂಡಿಯಿಂದ 21.4 ಲಕ್ಷ ರು., ಶ್ರೀ ಸಿದ್ದೇಶ್ವರ ದೇವಸ್ಥಾನದ ಹುಂಡಿಯಿಂದ 1.45 ಲಕ್ಷ ರು. ಸಂಗ್ರಹವಾಗಿದೆ. 

ಹಾಸನಾಂಬೆ ದೇಗುಲದಲ್ಲಿ ಪಂಚಾಂಗಕ್ಕೆ ವಿರುದ್ಧ ಸಂಪ್ರದಾಯ : ಆಕ್ಷೇಪದ ನಡುವೆ ಗಂಡಾಂತರದ ಆತಂಕ ...

ಇನ್ನು ಕಾಣಿಕೆಯಾಗಿ ಹಣ, ಚಿನ್ನ, ಬೆಳ್ಳಿ ಹಾಕಿದರೆ, ಇನ್ನೂ ಕೆಲ ಭಕ್ತರು ಚಿತ್ರವಿಚಿತ್ರ ಬೇಡಿಕೆಗಳ ಒಳಗೊಂಡ ಪತ್ರಗಳು ಕಾಣಿಕೆ ಹುಂಡಿಗಳಲ್ಲಿ ಹಾಕಿದ್ದಾರೆ. ಜೊತೆಗೆ ವಿದೇಶಿ ಕರೆನ್ಸಿಗಳು ಇದ್ದವು.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ