ಮ್ಯಾಟ್ರಿಮೋನಿ ಪರಿಚಯ-ದೈಹಿಕ ಸಂಪರ್ಕ : ಹೈಕೋರ್ಟ್‌ನಲ್ಲೊಂದು ಮಹತ್ವದ ತೀರ್ಪು

By Kannadaprabha NewsFirst Published Nov 18, 2020, 8:04 AM IST
Highlights

ಕರ್ನಾಟಕ ಹೈ ಕೋರ್ಟ್  ಮಹತ್ವದ ತೀರ್ಪೊಂದನ್ನು  ನೀಡಿದೆ. ಅತ್ಯಾಚಾರ ಪ್ರಕರಣ ಒಂದರಲ್ಲಿ ಆರೋಪಿಗೆ ಜಾಮೀನು ನೀಡಿದೆ. 

ಬೆಂಗಳೂರು (ನ.18) :  ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಆರೋಪಿ ವಿರುದ್ಧ 11ಕ್ಕೂ ಹೆಚ್ಚು ಕ್ರಿಮಿನಲ್‌ ಹಾಗೂ ಸಿವಿಲ್‌ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಮೂರು ಪ್ರಕರಣಗಳು ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿವೆ. ಮದುವೆಯಾಗುವುದಾಗಿ ನಂಬಿಸಿ ಕೆಲ ಮಹಿಳೆಯರಿಗೆ ವಂಚಿಸಿದ್ದಾನೆ. ಆದ್ದರಿಂದ ಆರೋಪಿಗೆ ನೀಡಿರುವ ಜಾಮೀನನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು.

ಸಂತ್ರಸ್ತೆಯ ಮನವಿ ತಿರಸ್ಕರಿಸಿರುವ ಹೈಕೋರ್ಟ್‌, ಆರೋಪಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂಬ ಆಧಾರದ ಮೇಲೆ ಜಾಮೀನು ನಿರಾಕರಿಸಿ ಆತನಿಗೆ ಸಂವಿಧಾನದ ಪರಿಚ್ಛೇದ 21ನೇ ಅಡಿಯಲ್ಲಿ ದತ್ತವಾಗಿರುವ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜೀವಿಸುವ ಹಕ್ಕನ್ನು ನಿರ್ಬಂಧಿಸಲಾಗದು. ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 439 (2) ಪ್ರಕಾರ ವಿರಳ ಪ್ರಕರಣಗಳಲ್ಲಿ ಮಾತ್ರ ಮಂಜೂರಾಗಿರುವ ಜಾಮೀನು ರದ್ದುಗೊಳಿಸುವಂತೆ ಕೋರಲು ಅವಕಾಶವಿದೆ. ಈ ಪ್ರಕರಣದಲ್ಲಿ ಜಾಮೀನು ರದ್ದುಗೊಳಿಸಲು ಬಲವಾದ ಸಾಕ್ಷ್ಯ ಹಾಗೂ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿ ವಜಾಗೊಳಿಸಿತು.

ವಸತಿ ಗೃಹದಲ್ಲಿ ವಿವಾಹಿತೆ ಜೊತೆಗೆ ಸಿಕ್ಕಿಬಿದ್ದ ಅರಣ್ಯ ಅಧಿಕಾರಿ : ಎರಡು ದಿನ ಜೊತೆಗೆ ಇದ್ರು ...

ನಗರದ ಕೋರಮಂಗಲದ 37 ವರ್ಷದ ವ್ಯಕ್ತಿ ಹಾಗೂ ಸಂತ್ರಸ್ತೆ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ ಮೂಲಕ ಪರಸ್ಪರ ಪರಿಚಯವಾಗಿ, ದೂರವಾಣಿ ನಂಬರ್‌ ವಿನಿಮಯ ಮಾಡಿಕೊಂಡಿದ್ದರು. ಈ ವೇಳೆ ಆರೋಪಿ ವ್ಯಕ್ತಿ ತಾನು ಯಶಸ್ವಿ ಉದ್ಯಮಿಯಾಗಿದ್ದೇನೆ. ದೇಶ-ವಿದೇಶದಲ್ಲಿ ಉದ್ದಿಮೆಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದ. ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿ, ಮದುವೆ ಮಾತುಕತೆಯೂ ನಡೆದು ದೈಹಿಕ ಸಂಪರ್ಕವೂ ಆಗಿತ್ತು. ಆದರೆ ಆರೋಪಿಗೆ ಮದುವೆಯಾಗಿ ಮಗು ಇರುವ ಸಂಗತಿ ತಡವಾಗಿ ಬೆಳಕಿಗೆ ಬಂದಿತ್ತು. ಈ ಮಧ್ಯೆ ಆರೋಪಿಯು ಸಂತ್ರಸ್ತೆಗೆ 31.88 ಲಕ್ಷ ಹಣ ನೀಡುವಂತೆ ಒತ್ತಾಯಿಸಿದ್ದ. ಇದರಿಂದ ಸಂತ್ರಸ್ತೆ ನೀಡಿದ ದೂರು ಆಧರಿಸಿ ವಿವೇಕ ನಗರ ಪೊಲೀಸ್‌ ಠಾಣೆ ಆತನನ್ನು ಬಂಧಿಸಿದ್ದರು. ನ್ಯಾಯಾಲಯವು ಆರೋಪಿಗೆ ಜಾಮೀನು ಮಂಜೂರು ಮಾಡಿತ್ತು.

click me!