ತುಳುನಾಡಿದ ಪ್ರತಿ ಹಿಂದೂಗಳ ಮನೆಯಲ್ಲೂ ದೈವಾರಾಧನೆ ಇದೆ: ಚೇತನ್‌ಗೆ ಕಾಂತಾರ ಬರಹಗಾರನ ತಿರುಗೇಟು!

By Suvarna News  |  First Published Oct 19, 2022, 5:57 PM IST

ದೈವಾರಾಧನೆ ಹಿಂದೂ ಸಂಸ್ಕೃತಿಯೇ ಅಲ್ಲ ಎಂದು ಕಾಂತಾರ ಸಿನಿಮಾದ ಬಗ್ಗೆ ಹೊಸ ವಿವಾದ ಹುಟ್ಟು ಹಾಕಿದ ನಟ ಚೇತನ್ ವಿರುದ್ದ ಕಾಂತಾರ ಸಿನಿಮಾ ತಂಡ ಗರಂ ಆಗಿದೆ. ಕಾಂತಾರ ಬರಹಗಾರ ಹಾಗೂ ಸಿನಿಮಾದ 'ಬುಲ್ಲಾ' ಪಾತ್ರಧಾರಿ ಶನಿಲ್ ಗುರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.


ಮಂಗಳೂರು: ದೈವಾರಾಧನೆ ಹಿಂದೂ ಸಂಸ್ಕೃತಿಯೇ ಅಲ್ಲ ಎಂದು ಕಾಂತಾರ ಸಿನಿಮಾದ ಬಗ್ಗೆ ಹೊಸ ವಿವಾದ ಹುಟ್ಟು ಹಾಕಿದ ನಟ ಚೇತನ್ ವಿರುದ್ದ ಕಾಂತಾರ ಸಿನಿಮಾ ತಂಡ ಗರಂ ಆಗಿದೆ. ತುಳುನಾಡಿನ ಪ್ರತೀ ಹಿಂದೂಗಳ ‌ಮನೆಯಲ್ಲೂ ದೈವಾರಾಧನೆ ನಡೆಯುತ್ತೆ. ಮೊದಲು ನಾವು ದೈವವನ್ನ ನಂಬೋದು, ಆ ಮೇಲೆ ದೇವರನ್ನ. ದೈವಾರಾಧನೆಯ‌ನ್ನ ನಾವು ಅಷ್ಟು ನೀಯತ್ತಾಗಿ ಮಾಡ್ತೇವೆ ಅಂತ ಕಾಂತಾರ ಬರಹಗಾರ ಹಾಗೂ ಸಿನಿಮಾದ 'ಬುಲ್ಲಾ' ಪಾತ್ರಧಾರಿ ಶನಿಲ್ ಗುರು ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳೂರಿನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಶನಿಲ್ ಗುರು (sanil guru) ಪ್ರತಿಕ್ರಿಯೆ ನೀಡಿದ್ದು, ಸಿನಿಮಾ ಯಶಸ್ವಿಯಾದಾಗ ಮಾತನಾಡೋರು ಇರ್ತಾರೆ, ಅವರಲ್ಲಿ ಚೇತನ್ ಕೂಡ ಒಬ್ಬರು ಅಷ್ಟೇ. ಇದಕ್ಕೂ ಮೊದಲು ಚೇತನ್ (Chetan) ಹೀಗೆಲ್ಲಾ ಮಾಡಿದ್ದರು. ಅವರನ್ನ ನಾವು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ. ಭೂತಾರಾಧನೆ (bhutaaradhane), ನಾಗಾರಾಧನೆ (Nagaradhane) ಏನು ಅಂತ ಈ‌ ಮಣ್ಣಲ್ಲಿ ಇರೋ ನಮಗೆ ಗೊತ್ತು. ಸಿನಿಮಾದ ಭಾಗವಾಗಿ ಅಲ್ಲದೇ ದೈವದ ಆರಾಧಕನಾಗಿ ನಾನು ಹೇಳ್ತಾ ಇದೀನಿ. ದೈವಕ್ಕೆ ಹಿಂದೆ ಮುಂದೆ ಹೇಳಿದವರು ಅನುಭವಿಸಿದ ಉದಾಹರಣೆ ಇದೆ. ನಮ್ಮ ಭಾವನೆ ಬಗ್ಗೆ ಮಾತನಾಡಿದ್ದಾರೆ, ಇದರ ಬಗ್ಗೆ ಬೇಸರವಿದೆ.‌ ಸಿನಿಮಾ (cinema) ಜಾಗತಿಕವಾಗಿ ಹಿಟ್ ಆಗುವಾಗ ಈ ರೀತಿ ಮಾತನಾಡ್ತಿದಾರೆ. ಅವರು ಹೇಳಿರೋದಕ್ಕೆ ಅವರಿಗೆ ಪ್ರತಿಫಲ ಸಿಕ್ಕೇ ಸಿಗುತ್ತೆ. ಇದು ಸಿನಿಮಾದ ಬಗ್ಗೆ ಅಪಸ್ವರ, ಇದು ದೈವದ ಬಗ್ಗೆ ಅಲ್ಲ. ಸಿನಿಮಾದ ಬಗ್ಗೆ ‌ಮಾತನಾಡಿ ಅವರು ಪ್ರಚಾರ ತೆಗೋತಿದಾರೆ ಅಂದಿದ್ದಾರೆ. 

Tap to resize

Latest Videos

ತಾಕತ್ತಿದ್ರೆ ಮಂಗಳೂರಿಗೆ ಬಂದು ಪ್ರಶ್ನೆ ಮಾಡಲಿ: ನಟ ಚೇತನ್ ಗೆ ಕಾಂತಾರದ 'ಗುರುವ'ನ ಸವಾಲು!

ನಮಗೆ ದೈವದ ಪ್ರೇರಣೆಯಿಂದಲೇ ಈ ಕೆಲಸ ಆಗಿದೆ. ಜನರು ಸ್ವೀಕರಿಸಿ ನಮ್ಮನ್ನ ಒಪ್ಪಿ ಸಿನಿಮಾ ಗೆಲ್ಲಿಸಿದ್ದಾರೆ. ಈ ವಿವಾದ ಅವರು ಅವರ ಮೇಲೆಯೇ ಎಳೆದು ಕೊಂಡಿದ್ದಾರೆ. ನಾವು ನಂಬೋದನ್ನ ಅವರು ಇಲ್ಲ ಅಂತ ಹೇಳಿ ಅದರ ಪರಿಣಾಮ ಎದುರಿಸ್ತಾರೆ.‌ ನಾವು ಭೂತಾರಾಧನೆ ಬಗ್ಗೆ ಹೇಳ್ತಾ ಇದೀವಿ, ಅದರ ಹುಟ್ಟನ್ನ ಕೆದಕಿಲ್ಲ. ಪ್ರಕೃತಿ ‌ಮತ್ತು‌ ಮನುಷ್ಯನ ನಡುವಿನ ಸಂಘರ್ಷದ ಬಗ್ಗೆ ಮಾತನಾಡಿದ್ದೇವೆ.‌ ನಾವು ಈ ಸಿನಿಮಾ ಮಾಡುವಾಗ ಅನೇಕರ ಜೊತೆ ಮಾತನಾಡಿದ್ದೇವೆ.‌ ಶುದ್ದಾಚಾರ ಪಾಲಿಸಿ ಯಾವುದಕ್ಕೂ ಕಳಂಕ ತರದೇ ಸಿನಿಮಾ ಮಾಡಿದ್ದೇವೆ. ಯಾರದ್ದೇ ಭಾವನೆ, ಭಕ್ತಿ, ಆಚಾರ-ವಿಚಾರಕ್ಕೆ ನಾವು ಧಕ್ಕೆ ತಂದಿಲ್ಲ.‌ ಹಾಗಾಗಿಯೇ ಜನರೇ ನಮ್ಮ ಸಿನಿಮಾವನ್ನ ಡಿವೈನ್ ಹಿಟ್ (Divine hit) ಅಂತಿದಾರೆ. ನಾವು ಭಕ್ತಿ ಪ್ರಧಾನ ಚಿತ್ರ ಮಾಡದಿದ್ದರೂ ಜನರು ಅದನ್ನ ಭಕ್ತಿಯಿಂದ ಸ್ವೀಕಾರ ಮಾಡಿದ್ದಾರೆ ಅಂತ ಹೇಳಿದ್ದಾರೆ.

ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲವೇ ಅಲ್ಲ; ಸುದ್ದಿಗೋಷ್ಠಿಯಲ್ಲಿ ನಟ ಚೇತನ್ ಹೇಳಿಕೆ

click me!