ಹಲವು ವರ್ಷಗಳ ಬಳಿಕ ತುಂಬಿದ ಗಿಣಗೇರಿ ಗ್ರಾಮದ ಕೆರೆ:ಬಾಗಿನ ಅರ್ಪಿಸಿದ ರೈತರು

By Suvarna News  |  First Published Oct 19, 2022, 5:09 PM IST

ಕೊಪ್ಪಳ ಜಿಲ್ಲೆ ಈ ವರ್ಷ ನಿರಂತರ ಮಳೆಯಿಂದಾಗಿ ಮಲೆ ನಾಡಿನಂತಾಗಿದೆ. ಜಿಲ್ಲೆಯಲ್ಲಿನ ಬಹುತೇಕ ಕೆರೆಗಳು ಭರ್ತಿಯಾಗಿದೆ. ಇದರಿಂದಾಗಿ ರೈತರು ಸಹಜವಾಗಿಯೇ ಸಂಭ್ರಮದಲ್ಲಿದ್ದು ಭರ್ತಿಯಾದ ಕೆರೆಗಳಿಗೆ ಬಾಗಿನ ಅರ್ಪಿಸುವ ಕೆಲಸ ಮಾಡುತ್ತಿದ್ದಾರೆ.


ವರದಿ:ದೊಡ್ಡೇಶ್ ಯಲಿಗಾರ್ ಏಷಿಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ: ಆ ಕೆರೆ ಅನೇಕ ವರ್ಷಗಳಿಂದ ಭರ್ತಿಯಾಗದೆ ಬರಿದಾಗಿತ್ತು. ‌ಆದರೆ ಸ್ವಾಮೀಜಿಯೊಬ್ಬರ ಆಸಕ್ತಿಯ ಜೊತೆ ಸಕಾಲಕ್ಕೆ ಸುರಿದ ಮಳೆಯಿಂದ ಆ ಕೆರೆ‌ ಇದೀಗ ಭರ್ತಿಯಾಗಿದ್ದು ಬಾಗಿನ ಅರ್ಪಿಸಲಾಯಿತು. ಸದಾ ಬರಕ್ಕೆ ಹೆಸರುವಾಸಿಯಾಗಿದ್ದ ಕೊಪ್ಪಳ ಜಿಲ್ಲೆ ಈ ವರ್ಷ ನಿರಂತರ ಮಳೆಯಿಂದಾಗಿ ಮಲೆ ನಾಡಿನಂತಾಗಿದೆ. ಜಿಲ್ಲೆಯಲ್ಲಿನ ಬಹುತೇಕ ಕೆರೆಗಳು ಭರ್ತಿಯಾಗಿದೆ. ಇದರಿಂದಾಗಿ ರೈತರು ಸಹಜವಾಗಿಯೇ ಸಂಭ್ರಮದಲ್ಲಿದ್ದು ಭರ್ತಿಯಾದ ಕೆರೆಗಳಿಗೆ ಬಾಗಿನ ಅರ್ಪಿಸುವ ಕೆಲಸ ಮಾಡುತ್ತಿದ್ದಾರೆ.

ತಾವ ಕೆರೆಗೆ ಬಾಗಿನ ಅರ್ಪಿಸಿದ್ದು

Tap to resize

Latest Videos

undefined

ಕೊಪ್ಪಳ‌ (Koppala) ತಾಲೂಕಿನ ಗಿಣಗೇರಿ ಗ್ರಾಮ (Ginageri village) ಅಂದರೆ ನಮಗೆ ತಟ್ಟನೆ ನೆನಪಾಗುವುದು  ಇಲ್ಲಿನ ಕೈಗಾರಿಕಾ ಪ್ರದೇಶ (Industrial Area) ಅದರಂತೆ ಈ ಗ್ರಾಮದಲ್ಲಿ 250 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೃಹತ್ ಆದ ಕೆರೆಯೊಂದು ಇದ್ದು ಈ ಕೆರೆ ನಿರಂತರ ಮಳೆಯಿಂದಾಗಿ ಕಳೆದ ವಾರ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು  ಬಿಜಕ್ ಶ್ರೀಗಳ ಸಾನಿಧ್ಯದಲ್ಲಿ,ಶಾಸಕ ರಾಘವೇಂದ್ರ ಹಿಟ್ನಾಳ್ (Ragavendra Hitnal), ಗ್ರಾಮಸ್ಥರು ಸೇರಿಕೊಂಡು ಸಂತಸದಿಂದ ಬಾಗೀನ ಅರ್ಪಿಸಿದರು.

Koppala Rains; ಕೊಪ್ಪಳ ಜಿಲ್ಲೆಗೆ ಸಾಕು ಸಾಕಾಗಿ ಹೋದ ಈ ಬಾರಿಯ ಮಳೆ!

ಗವಿಸಿದ್ದೇಶ್ವರ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಡೆದಿದ್ದ ಹೂಳೆತ್ತುವ ಕೆಲಸ

ಇನ್ನು ಗಿಣಗೇರಿ ಕರೆ ತುಂಬಿದಂತೆ ರಾಜ್ಯದ ಸಾವಿರಾರು ಕೆರೆಗಳು ತುಂಬಿವೆ.‌ಇದರಲ್ಲಿ ಏನು ವಿಶೇಷ ಎನ್ನಬೇಡಿ.‌ ಗಿಣಗೇರಿ ಕೆರೆ ಈಗಿರುವಂತೆ ಮೊದಲು ಇದ್ದಿಲ್ಲ. ‌ಗಿಣಗೇರಿ ಕರೆ ಈಮೊದಲು ಹೂಳಿನಿಂದ ತುಂಬಿತ್ತು. ಈ ಹಿನ್ನಲೆಯಲ್ಲಿ 2021 ರ ಕೊವೀಡ್ ಸಮಯದಲ್ಲಿ ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳು (Gavisiddeshwara swamiji) ವಿವಿಧ ಕಾರ್ಖಾನೆಗಳ, ಸಂಘ ಸಂಸ್ಥೆಗಳ, ದಾನಿಗಳ ನೆರವಿನೊಂದಿಗೆ  ಕೆರೆ ಹೂಳೆತ್ತಿದ್ದರು.‌ ಅದರ ಪರಿಣಾಮವಾಗಿ 250 ಕ್ಕೂ ಹೆಚ್ಚು ಎಕರೆ ವಿಸ್ತೀರ್ಣದ ಗಿಣಗೇರಿ ಕೆರೆ ಇದೀಗ 15 ವರ್ಷಗಳ ತರುವಾಯ ತುಂಬಿದೆ. ಇದರಿಂದಾಗಿ ಸಹಜವಾಗಿಯೇ ಗ್ರಾಮಸ್ಥರು ಸಂತಸಗೊಂಡಿದ್ದಾರೆ.

Koppal News: ಮುನ್ಸಿಪಾಲಿಟಿ ಬಿಲ್‌ ಪಾಸ್‌, ಗರಿಗೆದರಿದ ರಿಯಲ್‌ಎಸ್ಟೇಟ್‌

ತೆಪ್ಪದಲ್ಲಿ ಕೆರೆಯಲ್ಲಿ ಸಂಚರಿಸಿದ ಶಾಸಕ

ಇನ್ನು ಕೆರೆಗೆ ಬಾಗಿನ ಅರ್ಪಿಸಲು ಶಾಸಕ ರಾಘವೇಂದ್ರ ಹಿಟ್ನಾಳ್ ಆಗಮಿಸಿದ್ದರು. ಈ ವೇಳೆಯಲ್ಲಿ ಕೆರೆ ಭರ್ತಿಯಾಗಿರುವುದನ್ನು ನೋಡಿ ಅವರೂ ಸಹ ಸಂತಸಗೊಂಡಿದ್ದರು.‌ ಅಷ್ಟೇ ಅಲ್ಲ ಕೆರೆಯಲ್ಲಿದ್ದ ತೆಪ್ಪದಲ್ಲಿ ಸ್ವತಃ ತಾವೇ ಹತ್ತಿ ಕೆರೆಯೆಲ್ಲಾ ಸಂಚರಿಸಿ ಸಂಭ್ರಮಿಸಿದರು. ಇನ್ನು ಗಿಣಗೇರಿ ಕೆರೆ ಭರ್ತಿಯಾಗಿರುವುದರಿಂದ ಸುತ್ತಮುತ್ತಲಿನ 20 ಕ್ಕೂ ಹೆಚ್ಚು ಗ್ರಾಮಗಳ ಬೋರವೆಲ್ ಗಳಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿದೆ. ಇದರಿಂದಾಗಿ ರೈತರು ಇನ್ನೂ 5 ವರ್ಷ ನೆಮ್ಮದಿಯಿಂದ ಕೃಷಿ ಕಾಯಕ ‌ಮಾಡಬಹುದಾಗಿದೆ.‌  ಮನಸ್ಸು ಮಾಡಿದರೆ ಏನ್ನೆಲ್ಲಾ‌ ಮಾಡಬಹುದು ಎನ್ನುವುದಕ್ಕೆ ಈ ಗಿಣಗೇರಿ ಕೆರೆ ಸಾಕ್ಷಿಯಾಗಿದೆ.
 

click me!