ಮೈತ್ರಿ ಸರ್ಕಾರಲ್ಲಿ ಅವರವರ ಕಷ್ಟಗಳೇ ಹೆಚ್ಚಾಗಿತ್ತು: ಡಿಸಿಎಂ

By Suvarna NewsFirst Published Jul 25, 2020, 3:05 PM IST
Highlights

ಮೈತ್ರಿ ಸರ್ಕಾರದಲ್ಲಿ ಅವರವರ ಕಷ್ಟಗಳೇ ಹೆಚ್ಚಾಗಿತ್ತು ಎಂದು ಡಿಸಿಎಂ ಅಶ್ವಥ್ ನಾರಾಯಣ ತಿಳಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಬೆಂಗಳೂರು(ಜು.25): ಮೈತ್ರಿ ಸರ್ಕಾರದಲ್ಲಿ ಅವರವರ ಕಷ್ಟಗಳೇ ಹೆಚ್ಚಾಗಿತ್ತು ಎಂದು ಡಿಸಿಎಂ ಅಶ್ವಥ್ ನಾರಾಯಣ ತಿಳಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.'

ಯಡಿಯೂರಪ್ಪ ನೇತೃತ್ವದಲ್ಲಿ ಒಂದು ವರ್ಷದ ಪೂರೈಸುತ್ತಿದ್ದೇವೆ. ಬಹಳ ಸಂತೋಷ ಮತ್ತು ಹೆಮ್ಮೆಯಾಗುತ್ತೆ. ಯಡಿಯೂರಪ್ಪ ನೇತೃತ್ವದ ಜನರ ಕೆಲಸ ಮಾಡುತ್ತ ಬಂದಿದ್ದೇವೆ. ಒಂದು ವರ್ಷದ ಅವಧಿಯಲ್ಲಿ ನಡೆದ ಸಾಧನೆ ಸವಾಲುಗಳನ್ನ ಎದರಿಸಿದ್ದೇವೆ. ಅತಿವೃಷ್ಠಿ ಅನಾವೃಷ್ಠಿಯನ್ನ ನಮ್ಮ ಸರ್ಕಾರ ಎದರಿಸಿದ್ದೇವೆ. ಉಪಚುನಾವಣೆ ಪ್ರಕೃತಿ ವಿಕೋಪಗಳನ್ನ ಸರ್ಕಾರ ಸರ್ಮರ್ಥವಾಗಿ ಎದರಿಸಿದೆ. ಅನಾವೃಷ್ಠಿ ಎದರಿಸಲು ಕಳೆದ ಬಾರಿ ಇದ್ದ ಸರ್ಕಾರ ಸಂಪೂರ್ಣ ವಿಫಲವಾಗಿತ್ತು ಎಂದಿದ್ದಾರೆ.

ಮುಂಜಾನೆ 3 ಗಂಟೆಗೆ ಗರ್ಭಿಣಿಯ ತನ್ನ ಆಟೋದಲ್ಲಿ ಆಸ್ಪತ್ರೆಗೊಯ್ದ ಆಶಾ ಕಾರ್ಯಕರ್ತೆ!

ಯಡಿಯೂರಪ್ಪ ಒಬ್ಬ ರೈತ ನಾಯಕ. ವಿರೋಧ ಪಕ್ಷದಲ್ಲಿದ್ದಾಗ ಹಾಗೂ ಸರ್ಕಾರದ ಅಧಿಕಾರಕ್ಕೆ ಬಂದಾಗ ಬಿಎಸ್ ವೈ ಜನರ ಮಧ್ಯೆ ಇದ್ದಾರೆ. ಪ್ರವಾಹ ಸಂದರ್ಭದಲ್ಲಿ 6000 ಕೋಟಿ ರೂಪಾಯಿ ಸಂಕಷ್ಟದಲ್ಲಿದ್ದ ಜನರಿಗೆ ತಲುಪಿಸಿದ್ದಾರೆ. ತಲಾ 10000 ರೂ ಪ್ರವಾಹ ಪೀಡಿತರಿಗೆ ನೀಡಿದ್ದಾರೆ. ಮನೆಗಳನ್ನ ನಿರ್ಮಾಣ ಮಾಡಲು ಪರಿಹಾರ ಕೊಟ್ಟಿತ್ತು‌. ಕುಸಿದ ಮನೆಗೆ 5 ಲಕ್ಷ ರೂ ಪರಿಹಾರ ನೀಡಿರುವುದು ನಮ್ಮ ಸರ್ಕಾರ ಎಂದಿದ್ದಾರೆ.

ದೇಶದಲ್ಲಿ ಯಾರು ಕೊಟ್ಟಿರದ ಪರಿಹಾರವನ್ನ ನಮ್ಮ ಸರ್ಕಾರ ನೀಡಿದೆ. ಅಲ್ದೇ ಬೆಳೆ ಹಾನಿಗೆ 1000 ಕೋಟಿ ಪರಿಹಾರ ನೀಡಿದ್ದೇವೆ. ಒಟ್ಟಾರೆ 6018 ಕೋಟಿ ಹಣ ಪ್ರವಾಹಕ್ಕೆ ಖರ್ಚು ಮಾಡಲಾಗಿದೆ ಎಂದಿದ್ದಾರೆ.

ಹೆಚ್ಚು ಹಣ ವಸೂಲಿ ಮಾಡಿದರೇ ಕ್ರಿಮಿನಲ್‌ ಕೇಸ್‌: ಐಜಿಪಿ ರೂಪಾ

ರಾಜ್ಯಕ್ಕೆ ಸ್ಥಿರ ಸರ್ಕಾರದ ಬೇಕಿತ್ತು. ಆ ಸ್ಥಿರ ಸರ್ಕಾರವನ್ನ ಬಿಎಸ್ ವೈ ನೀಡಿದ್ದಾರೆ. ಈ ಹಿಂದೆ ಸಮ್ಮಿಶ್ರ ಸರ್ಕರದಲ್ಲಿ ಬರೀ ಗೊಂದಲಗಳಿದ್ದವು. ಜನರ ಸಮಸ್ಯೆ ಬಗೆಹರಿಸಿ ಅಂದ್ರೆ ದಿನ ಬೆಳಗಾದ್ರೆ ಅವರ ಸಮಸ್ಯೆ ನೀಡಬೇಕಾಗಿತ್ತು. ಸಮ್ಮಿಶ್ರ ಸರ್ಕಾರಕ್ಕೆ ಬರೀ ಅಧಿಕಾರದ ದಾಹ ಇತ್ತು...ಅವರಿಗೆ ಬರೀ ಸ್ವಾರ್ಥಕ್ಕಾಗಿ ಅಧಿಕಾರ ನಡೆಸುತ್ತಿದ್ದರು. 
ಜನರ ಕಷ್ಟ ನೋಡಿ ಅಂದ್ರೆ ಬರೀ ಇವರ ಕಿತ್ತಾಟ ನೋಡಬೇಕಿತ್ತು‌ ಎಂದು ಹೇಳಿದ್ದಾರೆ.

ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರವನ್ನು ಜನ ತಿರಸ್ಕರಿಸಿದರು. ಆದರೂ ಕಾಂಗ್ರೇಸ್ ಭಂಡತನದಿಂದ ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸಿತು. ಮೈತ್ರಿ ಸರ್ಕಾರದಲ್ಲಿ ಜನರನ್ನ ಕಷ್ಟಕ್ಕೆ ನೂಕಲಾಯ್ತು. ಮೈತ್ರಿ ವೇಳೆ ಉತ್ತಮ ಆಡಳಿತ ಕೊಡಲಿಲ್ ಇದಕ್ಕೆ ಪರ್ಯಾಯವಾಗಿ ಜನರಿಗಾಗಿ ನಮ್ಮ ಸರ್ಕಾರವನ್ನು ಯಡಿಯೂರಪ್ಪ ನೇತೃತ್ವದಲ್ಲಿ ಅಧಿಕಾರಕ್ಕೆ ತರಲಾಯಿತು. ಉಪಚುನಾವಣೆ ನಡೆದು 15 ಜನರ ಪೈಕಿ ನಮ್ಮವರು 12 ಜನ ನೈತಿಕವಾಗಿ ಗೆದ್ರು. ಸ್ಥಿರ ಸರ್ಕಾರ ಇಲ್ಲದಿದ್ರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದಿದ್ದಾರೆ.

ಮುನಿರತ್ನ ಬರ್ತ್‌ಡೇ ವಿಶ್‌ಗೆ ಆಕ್ಷೇಪ: ಇದು ರಾಜಕೀಯದ ಸತ್ಸಂಪ್ರದಾಯ ಎಂದ ನಿಖಿಲ್

ಸಮ್ಮಿಶ್ರ ಸರ್ಕಾರದಲ್ಲಿ ಆತಂಕ, ಚಿಂತೆ, ಅನಿಶ್ಚಿತತೆ ಇತ್ತು. ಸಾಂದರ್ಭಿಕ ಶಿಶು ಅಂತ ಹೇಳ್ಕೊಳ್ತಿದ್ರು. ಮೈತ್ರಿಯಲ್ಲಿ ಅವರವರ ಕಷ್ಟಗಳೇ ಹೆಚ್ಚಾಗಿತ್ತು. ಮೊನ್ನೆ ಸುದ್ದಿಗೋಷ್ಟಿಯಲ್ಲೂ ಕುಮಾರಸ್ವಾಮಿ ಗೂಗ್ಲಿ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಬದಲಾಗಿ ನಮ್ ಸರ್ಕಾರದ ಮೇಲೆ ಆರೋಪ ಮಾಡಿದ್ರು ಎಂದಿದ್ದಾರೆ. ಸುದ್ದಿಗೋಷ್ಢಿಯಲ್ಲಿ ವಿಧಾನಪರಿಷತ್ ಸದಸ್ಯ ರವಿಕುಮಾರ್ , ಬಿಜೆಪಿ ಉಪಾಧ್ಯಕ್ಷ ನಿರ್ಮಾಲ ಕುಮಾರ್ ಸುರಾನಾ ಉಪಸ್ಥಿತರಿದ್ದರು.

click me!