ಜಲಪಾತದ ವೀಕ್ಷಣೆಗೆ ತೆರಳಿದಾಗ ನೀರು ಪಾಲಾಗಿದ್ದ ತಂದೆ ಮಗ ಮಡುಗಿನಲ್ಲಿ ಶವವಾಗಿ ಪತ್ತೆ| ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿರುವ ಗುಂಡಲಬಂಡಿ ಜಲಪಾತ| ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಲಿಂಗಸುಗೂರು(ಜು.25): ತಾಲೂಕಿನ ಪೈದೊಡ್ಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೋಲಪಲ್ಲಿ ಬಳಿಯ ರಾಷ್ಟ್ರೀಯ ಹೆದ್ದಾರಿ 150(ಎ)ರ ಘಟ ಪ್ರದೇಶದಲ್ಲಿನ ಗುಂಡಲಬಂಡಿ ಜಲಪಾತದ ವೀಕ್ಷಣೆಗೆ ತೆರಳಿದಾಗ ನೀರು ಪಾಲಾಗಿದ್ದ ತಂದೆ ಮಗ ಮಡುಗಿನಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮೂಡಲಗುಂಡ ಗ್ರಾಮದ 4 ಜನ ಪ್ರವಾಸಿರು ನಿನ್ನೆ ಗುಂಡಲಬಂಡಿ ಜಲಪಾತ ವೀಕ್ಷಣೆಗೆ ಹೋಗಿದ್ದರು. ಆದರೆ ಜಲಪಾತದಲ್ಲಿ ಏಕಾಏಕಿ ನೀರು ಬಂದು ಇದರಲ್ಲಿ ಚಿತ್ರಕಲಾ ಶಿಕ್ಷಕ ಕೃಷ್ಣಪ್ಪ ಹಾಗೂ ಆತನ ಮಗ ಧನುಷ್ಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಉಳಿದ ಇಬ್ಬರನ್ನು ಸ್ಥಳೀಯರ ನೆರವಿನಿಂದ ಪೊಲೀಸರು ರಕ್ಷಣೆ ಮಾಡಿದ್ದರು. ನಿನ್ನೆ ನೀರಿನಲ್ಲಿ ಕೊಚ್ಚಿ ಹೋದವರು ಬದುಕಿ ಬರಬಹುದೆಂಬ ಆಶಾ ಭಾವನೆಯಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಜಲಪಾತದ ಮಡುಗಿನಲ್ಲಿ ತಂದೆ, ಮಗನ ಶವಗಳು ಪತ್ತೆಯಾಗಿವೆ.
undefined
ರಾಯಚೂರು: ಏಕಾಏಕಿ ನುಗ್ಗಿದ ನೀರು ತಂದೆ ಮಗ ಕೊಚ್ಚಿಹೋದರು, ನಡುಗಡ್ಡೆಯಲ್ಲಿ ಯುವಕ
ತೆಪ್ಪದ ಸಹಾಯದಿಂದ ಇರ್ವರನ್ನು ಹಟ್ಟಿ ಪೊಲೀಸ್ ಠಾಣೆಯ ಪಿಎಸ್‌ಐ ಮುದ್ದುರಂಗಸ್ವಾಮಿ ಮಾರ್ಗದರ್ಶನದಲ್ಲಿ ಪತ್ತೆ ಮಾಡಲಾಗಿದೆ. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.