ಮನೆ ಬಾಗಿಲಲ್ಲಿ ಆಡ್ತಿದ್ದ ಕಂದಮ್ಮನ ಹೊತ್ತೊಯ್ಯಲು ಯತ್ನಿಸಿದ ಚಿರತೆ.. ಅಜ್ಜಿ, ಮೊಮ್ಮಗಳು ಗಂಭೀರ

Published : Jul 04, 2026, 10:53 PM IST
cheetah attacks

ಸಾರಾಂಶ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತಟ್ಟೆಗೆರೆ ಗ್ರಾಮದಲ್ಲಿ, ಮನೆಯ ಬಾಗಿಲ ಬಳಿ ಕುಳಿತಿದ್ದ ಅಜ್ಜಿ ಶಿವಮ್ಮ ಮತ್ತು ಅವರ 5 ವರ್ಷದ ಮೊಮ್ಮಗಳು ಹರ್ಷಿತಾ ಮೇಲೆ ಚಿರತೆಯೊಂದು ದಾಳಿ ನಡೆಸಿದೆ. ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಘಟನೆಯಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆಮಾಡಿದೆ ಮತ್ತು ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಚಾಮರಾಜನಗರ: ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗ ಮನೆಯ ಬಾಗಿಲಲ್ಲೇ ಕುಳಿತಿದ್ದ ಅಜ್ಜಿ ಮತ್ತು ಐದು ವರ್ಷದ ಪುಟ್ಟ ಮಗುವಿನ ಮೇಲೆ ಚಿರತೆ ದಾಳಿ ನಡೆಸಿದೆ. ಜಿಲ್ಲೆಯ ಹನೂರು ತಾಲೂಕಿನ ತಟ್ಟೆಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಈಗ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಘಟನೆಯ ವಿವರ

ಹನೂರು ತಾಲೂಕಿನ ಮೀಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟೆಗೆರೆ ಗ್ರಾಮದ ನಿವಾಸಿ ಶಿವಮ್ಮ ಮತ್ತು ಅವರ 5 ವರ್ಷದ ಮೊಮ್ಮಗಳು ಹರ್ಷಿತಾ ಚಿರತೆ ದಾಳಿಯಿಂದ ಗಾಯಗೊಂಡವರು. ಶಿವಮ್ಮ ಅವರು ಎಂದಿನಂತೆ ತಮ್ಮ ಮನೆಯ ಬಾಗಿಲ ಬಳಿ ಕುಳಿತಿದ್ದರು. ಈ ವೇಳೆ ಹೊಂಚು ಹಾಕಿ ಬಂದ ಚಿರತೆ ಏಕಾಏಕಿ ಅವರ ಮೇಲೆ ದಾಳಿ ಮಾಡಿದೆ. ಇದರಿಂದ ಗಾಬರಿಗೊಂಡ ಶಿವಮ್ಮ ಜೋರಾಗಿ ಕಿರುಚಿಕೊಂಡಿದ್ದಾರೆ. ಅಜ್ಜಿಯ ಚೀರಾಟ ಕೇಳಿ ಮಗು ಹರ್ಷಿತಾ ಏನಾಯಿತೆಂದು ನೋಡಲು ಓಡಿ ಬಂದಿದ್ದಾಳೆ.

ಅಡಗಿ ಕುಳಿತು ಮಗುವಿನ ಮೇಲೆ ದಾಳಿ

ಶಿವಮ್ಮ ಕಿರುಚಿಕೊಂಡಾಗ ಚಿರತೆಯು ಅಲ್ಲಿಂದ ಓಡಿಹೋಗದೆ ಮನೆಯ ಪಕ್ಕದಲ್ಲೇ ಅಡಗಿ ಕುಳಿತಿತ್ತು. ಅಜ್ಜಿಯನ್ನು ನೋಡಲು ಬಂದ ಪುಟ್ಟ ಮಗು ಹರ್ಷಿತಾಳನ್ನು ಕಂಡೊಡನೆ ಚಿರತೆ ಮಗುವಿನ ಮೇಲೂ ಎರಗಿದೆ. ಶಿವಮ್ಮ ಮತ್ತು ಮಗುವಿನ ಚೀರಾಟ ಕೇಳಿ ಅಕ್ಕಪಕ್ಕದ ನಿವಾಸಿಗಳು ಲಾಠಿ, ಕಲ್ಲುಗಳೊಂದಿಗೆ ಓಡಿ ಬಂದಿದ್ದಾರೆ. ಜನರನ್ನು ಕಂಡ ಚಿರತೆ ಅಲ್ಲಿಂದ ಕಾಲ್ಕಿತ್ತು ಕಾಡಿನತ್ತ ಪಲಾಯನ ಮಾಡಿದೆ.

ಗ್ರಾಮಸ್ಥರಲ್ಲಿ ಮನೆಮಾಡಿದ ಆತಂಕ

ಗಾಯಗೊಂಡ ಅಜ್ಜಿ ಮತ್ತು ಮಗುವನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಜನವಸತಿ ಪ್ರದೇಶಕ್ಕೆ ನುಗ್ಗಿ ಚಿರತೆ ದಾಳಿ ಮಾಡಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಮನೆಯ ಬಾಗಿಲಲ್ಲೇ ನಮಗೆ ರಕ್ಷಣೆ ಇಲ್ಲದಂತಾಗಿದೆ ಎಂದು ತಟ್ಟೆಗೆರೆ ಗ್ರಾಮದ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಈ ಭಾಗದಲ್ಲಿ ಚಿರತೆಗಳ ಸಂಚಾರ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳಬೇಕು. ದಾಳಿ ಮಾಡಿದ ಚಿರತೆಯನ್ನು ಪತ್ತೆಹಚ್ಚಿ ಸೆರೆಹಿಡಿಯಲು ಬೋನು ಅಳವಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎಂಬ ಆಕ್ರೋಶವೂ ವ್ಯಕ್ತವಾಗಿದೆ.

PREV
Read more Articles on
click me!

Recommended Stories

SIR ಪ್ರಕ್ರಿಯೆಗೆ ತೆರಳುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಅಪಘಾತದಲ್ಲಿ ಸಾವು, ಒತ್ತಡಕ್ಕೆ ಬಲಿಯಾಯ್ತಾ ಜೀವ?
ಸಣ್ಣ ಹಾವು ಕಂಡರೆ ಜೀವ ಬಾಯಿಗೆ ಬರುತ್ತೆ! ಅಂಥದ್ರಲ್ಲಿ ಜನವಸತಿ ಅಪಾರ್ಟ್‌ಮೆಂಟ್‌ನಲ್ಲಿ ಹೆಬ್ಬಾವು ಸಾಕಿದ್ದಾನೆ ಈ ಭೂಪ!