ಎಚ್.ಕೆ. ಪಾಟೀಲ ಹೆಸರಿನಲ್ಲೇ ಮೂರು ಮತ: ಸಂಸದ ಬೊಮ್ಮಾಯಿ ಸ್ಫೋಟಕ ಆರೋಪ

Published : Jul 04, 2026, 08:51 PM IST
Basavaraj Bommai

ಸಾರಾಂಶ

ಮಾಜಿ ಸಚಿವ ಎಚ್.ಕೆ.ಪಾಟೀಲರ ಹೆಸರಿನಲ್ಲೇ ಮೂರು ಮತಗಳಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಬಾಂಬ್ ಸಿಡಿಸಿದ್ರು. ಗದಗನಲ್ಲಿ ಮಾತನಾಡಿದ ಅವ್ರು, ಮ್ಯಾಪಿಂಗ್ ಆದಾಗಿಯೂ ಕೂಡ ಕೆಲ ಹೆಸರುಗಳು..

ಗದಗ (ಜು.04): ಮಾಜಿ ಸಚಿವ ಎಚ್.ಕೆ.ಪಾಟೀಲರ ಹೆಸರಿನಲ್ಲೇ ಮೂರು ಮತಗಳಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಬಾಂಬ್ ಸಿಡಿಸಿದ್ರು. ಗದಗನಲ್ಲಿ ಮಾತನಾಡಿದ ಅವ್ರು, ಮ್ಯಾಪಿಂಗ್ ಆದಾಗಿಯೂ ಕೂಡ ಕೆಲ ಹೆಸರುಗಳು ಮತ್ತೆ ಮತದಾರರ ಪಟ್ಟಿಯಲ್ಲಿ ಕಂಡು ಬಂದಿವೆ. ಈ ಬಗ್ಗೆ ತಹಶೀಲ್ದಾರ್ ಅವರಿಗೆ ತಿಳಿಸಿದರೂ ಗಂಭೀರವಾಗಿ ತೆಗೆದುಕೊಂಡಿಲ್ಲ.

ಹುಲಕೋಟಿಯ ಬೂತ್ ನಂಬರ್ 143ರ ಕ್ರಮ ಸಂಖ್ಯೆ 161, 183 ಹಾಗೂ 153 ನೇ ಬೂತ್ ನಂಬರ್ ನಲ್ಲಿ 393 ಕ್ರಮ ಸಂಖ್ಯೆಯಲ್ಲಿ ಹನಂಮತಗೌಡ ಕೃಷ್ಣಗೌಡ ಪಾಟೀಲ ಅಂತಾ ಹೆಸರಿದೆ. ಒಬ್ಬ ಪ್ರಖ್ಯಾತ ಹೆಸರೇ ಮೂರು ಬಾರಿ ಬಂದ್ರೆ ಯಾವ ರೀತಿ ಪರಿಷ್ಕರಣೆ ಆಗ್ತಿದೆ ಅಂತಾ ಪ್ರಶ್ನೆ ಮೂಡಿದೆ ಅಂತಾ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ಇನ್ನು ರೋಣ ಮತಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲೂ ಹೆಸರು ರಿಪೀಟ್ ಆಗಿದೆ. ರೋಣದಲ್ಲಿ ಅಲ್ಲಾ ಸಾಬ್ ಎಂಬ ವ್ಯಕ್ತಿಯ ಹೆಸರು ಐದು ಕಡೆ ನಮೂದಿದೆ.

ಬಿಎಲ್‌ಒಗಳು ಸರಿಯಾಗಿ ಬರ್ತಿಲ್ಲ

ನಮಗೆ ಕಂಡಂತೆ ರೋಣ ಮತಕ್ಷೇತ್ರದಲ್ಲಿ 3084 ಹೆಸರುಗಳು ರಿಪೀಟ್ ಆಗಿವೆ. ಗದಗ ಮತ ಕ್ಷೇತ್ರದಲ್ಲಿ 2305 ಹೆಸರುಗಳು ಡಬಲ್ ತ್ರಿಬಲ್ ಇದೆ. ಮತದಾನ ಪರಿಷ್ಕರಣೆಯ ಕೆಲಸ ಆಗ್ಬೇಕು. ಆದ್ರೆ ಸಮರ್ಪಕವಾಗಿ ಕೆಲಸ ಆಗಿಲ್ಲ. ಬಿಎಲ್‌ಒಗಳು ಸರಿಯಾಗಿ ಬರ್ತಿಲ್ಲ. ಅಧಿಕಾರಿಗಳಿಗೆ ಸರಿಯಾಗಿ ಟ್ರೇನಿಂಗ್ ಕೂಡ ಆಗಿಲ್ಲ. ಜನರನ್ನ ಬಿಟ್ಟು ಅಂಜುಮನ್ ಇಸ್ಲಾಂ ಮಸೀದಿಯಲ್ಲಿ ನಮೂನೆಗಳನ್ನ ತುಂಬಿಸ್ತಿದ್ದಾರೆ. ಒಂದು ವರ್ಗದ ಜನಕ್ಕೆ ಫ್ರೀ ಬಿಟ್ಟಿದ್ದಾರೆ ಅಂತಾ ಬೊಮ್ಮಾಯಿ ಆರೋಪಿಸಿದ್ರು.

PREV
Read more Articles on
click me!

Recommended Stories

ಮಳೆಗಾಗಿ ಕಾಯುವ ದಿನ ಮುಗಿದಿದೆ.. ಹವಾಮಾನ ಇಲಾಖೆಯಿಂದ ಬಿಗ್ ಅಪ್‌ಡೇಟ್ಸ್
ಆರೋಗ್ಯ ಸಚಿವ ಯುಟಿ ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ, ಗಂಭೀರವಾಗಿ ಗಾಯಗೊಂಡ ರೈಡರ್