ಜಾತಿ ಒಲೈಕೆ ಮಾಡಿದ್ದರೆ ನಾನೂ ಸೋಲುತ್ತಿದ್ದೆ : ಶಾಸಕ ಸಾ.ರಾ. ಮಹೇಶ್‌

By Kannadaprabha NewsFirst Published Oct 16, 2021, 1:21 PM IST
Highlights
  •  ಒಕ್ಕಲಿಗ ಜನಾಂಗದ ಹುಡುಗನನ್ನು ಕೃಷ್ಣರಾಜನಗರ ಕ್ಷೇತ್ರದಲ್ಲಿ ಮೂರು ಬಾರಿ  ಗೆಲ್ಲಿಸಿರುವುದು ಅತಿಸೂಕ್ಷ್ಮಾತಿ ಸೂಕ್ಷ್ಮ ಜನಾಂಗ
  • ಇದಕ್ಕೆ ಒಕ್ಕಲಿಗ ಜನಾಂಗ ತಮ್ಮ ಬೆನ್ನನ್ನು ತಟ್ಟಿಕೊಳ್ಳಬೇಕೆಂದ ಶಾಸಕ ಸಾ.ರಾ. ಮಹೇಶ್‌ 

 ಭೇರ್ಯ (ಅ.16):  ಒಬ್ಬ ಒಕ್ಕಲಿಗ (Vokkaliga) ಜನಾಂಗದ ಹುಡುಗನನ್ನು ಕೃಷ್ಣರಾಜನಗರ (KR Nagar) ವಿಧಾನಸಭಾ ಕ್ಷೇತ್ರದಲ್ಲಿ (Assembly Constituency) ಮೂರು ಬಾರಿ ಮತ ನೀಡಿ ಗೆಲ್ಲಿಸಿರುವುದು ಅತಿಸೂಕ್ಷ್ಮಾತಿ ಸೂಕ್ಷ್ಮ ಜನಾಂಗ, ಇದಕ್ಕೆ ಒಕ್ಕಲಿಗ ಜನಾಂಗ ತಮ್ಮ ಬೆನ್ನನ್ನು ತಟ್ಟಿಕೊಳ್ಳಬೇಕೆಂದು ಶಾಸಕ ಸಾ.ರಾ. ಮಹೇಶ್‌ (Sa Ra Mahesh) ಹೇಳಿದರು.

ಸಮೀಪದ ಅರ್ಜುನಹಳ್ಳಿ ಗ್ರಾಮದಲ್ಲಿ ಮಡಿವಾಳ ಮಾಚೀದೇವರ ಟ್ರಸ್ಟ್‌ನಿಂದ (Madiwala Machideva Trust) ಹಮ್ಮಿಕೊಂಡಿದ್ದ ಹುಚ್ಚಮ್ಮ ಲಕ್ಷ್ಮಿ ದೇವಿ ದೇವಸ್ಥಾನದ (Lakshmi Temple) ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಾರಾ : ಪ್ರಧಾನಿ ಮೋದಿ ವಿಶ್‌ಗೂ ಸಮರ್ಥನೆ

ಪ್ರೀತಿ ವಿಶ್ವಾಸದಿಂದ ನಮ್ಮನೆ ಮಗ, ಅಣ್ಣ- ತಮ್ಮ ಎಂದು ಬಂದು ತಾಲೂಕಿನ ಅತಿಸೂಕ್ಷ್ಮ ಜನಾಂಗದವರು ನಾಲ್ಕು ಬಾರಿ ಮತ ನೀಡಿದ್ದಾರೆ, ಅಲ್ಲದೆ ತಾಲೂಕಿನ ರಾಜಕಾರಣದಲ್ಲಿ (Politics) ಒಮ್ಮೆ ಸೋಲಿಸಿ, ಗೆಲ್ಲಿಸಿರುವುದು ನಿಮಗೆಲ್ಲ ಗೊತ್ತಿದೆ, ಅಂತಹದರಲ್ಲೂ ಮೂರು ಬಾರಿ ಸತತವಾಗಿ ತಾಲೂಕಿನ ಜನರು ಮತ ನೀಡಿ ಗೆಲ್ಲಿಸಿದ್ದಾರೆ, ನಾನೇ ಪುಣ್ಯವಂತ ಅಲ್ಲವೇ, ಜಾತಿ (Cast) ಜಾತಿಗಳನ್ನು ಹೊಡೆದಾಡಿಸದೇ ಅತಿಸೂಕ್ಷ್ಮಾತಿ ಸಮಾಜದ ಬೆನ್ನಲುಬಾಗಿ ನಿಲ್ಲುತ್ತಾನೆ, ಅಭಿವೃದ್ಧಿ ಕಾರ್ಯ ಮಾಡುತ್ತಾನೆ ಎಂದು ಈ ಕ್ಷೇತ್ರದ ಜನರು ನನಗೆ ಜಾತಿ ನೋಡದೇ ಮತಹಾಕಿದ್ದು, ನಾನು ಒಂದೇ ಜಾತಿಗೆ ಓಲೈಕೆ ಮಾಡಿದ್ದರೆ ನನ್ನನ್ನು ಕೂಡ ಸೋಲಿಸುತ್ತಿದ್ದರು ಎಂದರು.

ಸಾರಾ ಮಹೇಶ್‌ಗೆ ಕಾನೂನು ಸಂಕಷ್ಟ, ದೂರುದಾರ ಜೆಡಿಎಸ್ MLAಗೆಯೇ ಜಾಮೀನು ರಹಿತ ವಾರಂಟ್

ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಂದೂವರೆ ಲಕ್ಷ ಸೂಕ್ಷ್ಮಾತಿ ಸೂಕ್ಷ್ಮ ಜನಾಂಗ ನನ್ನ ಮೇಲೆ ನಂಬಿಕೆ ಇಟ್ಟು ಕೊಂಡಿದೆ. ಹೆದ್ದಾರಿ ಪಕ್ಕದಲ್ಲಿ 10 ಕೋಟಿ ಬೆಲೆ ಬಾಳುವ ಜಾಗವನ್ನು ಅಂಬೇಡ್ಕರ್‌ ಸಮುದಾಯ ಭವನ (Ambedkar Bhavan) ನಿರ್ಮಾಣ ಮಾಡಲು ಮಂಜೂರು ಮಾಡಿರುವುದು, ನಾಯಕ ಜನಾಂಗದ ವಾಲ್ಮೀಕಿ ಸಮುದಾಯ (Valmiki Community) ಭವನ 50 ಲಕ್ಷದಲ್ಲಿ ಪೂರ್ಣಗೊಳಿಸಿದ್ದು, ವೀರಶೈವ ಸಮಾಜದ ಬಸವ ಭವನದ ಕಾಮಗಾರಿ ಆರಂಭಿಸಿರುವುದು ಸೇರಿದಂತೆ ಕೆ.ಅರ್‌. ನಗರ ಪಟ್ಟಣದಲ್ಲಿ ಅತಿಸೂಕ್ಷ್ಮ ಸಮಾಜದ ಸಮುದಾಯ ಭವನಗಳ ನಿರ್ಮಾಣ ಮಾಡುತ್ತಿರುವುದರಿಂದಲೇ ಪುಣ್ಯಾತ್ಮರು ಮೂರು ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದು ಎಂದು ಅವರು ಹೇಳಿದರು.

ಇದಕ್ಕೂ ಮೊದಲು ರಸ್ತೆ (Road), ಚರಂಡಿ ನಿರ್ಮಾಣ ಸಂಬಂಧ ಗ್ರಾಮಸ್ಥರ ಜೊತೆಯಲ್ಲಿ ಚರ್ಚಿಸಿದರು. ಮಡಿವಾಳ ಮಾಚೀದೇವರ ಟ್ರಸ್ಟ್‌ಯಿಂದ ಶಾಸಕ ಸಾ.ರಾ. ಮಹೇಶ್ ಅವರನ್ನು ಅಭಿನಂದಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಚಂದ್ರಕಲಾ, ಉಪಾಧ್ಯಕ್ಷೆ ಸಿರಿ, ಗ್ರಾಪಂ ಮಾಜಿ ಅಧ್ಯಕ್ಷೆ ದಾಕ್ಷಾಯಿಣಿ, ಸದಸ್ಯರಾದ ಆಶಾದೇವು , ಬಸವರಾಜು, ಮಹದೇವಪ್ಪ, ಶಿವಣ್ಣ, ಕಾಳಮ್ಮ ಮಹದೇವನಾಯಕ, ಅನಿತಾ ಚಂದ್ರಚಾರ್‌, ಪಿಡಿಓ ಪೂರ್ಣಿಮ, ನಿವೃತ್ತ ಲೆಕ್ಕಾಧಿಕಾರಿ ಕೃಷ್ಣನಾಯಕ, ಎ.ಬಿ. ಶಿವಣ್ಣ, ಪ್ರೊ. ರವಿಕುಮಾರ್‌, ಧರ್ಮರಾಜು, ನರಸಶೆಟ್ಟಿ, ಶಿವಶೆಟ್ಟಿ, ಈಶ್ವರಶೆಟ್ಟಿ, ರೈತ ಯುವ ಮುಖಂಡ ರಾಮಪ್ರಸಾದ್‌, ಜೆಡಿಎಸ್‌ ಮುಖಂಡರಾದ ನಂದಕುಮಾರ್‌, ಗಣೇಶ್‌, ಸಂಪತ್‌, ಸಿವಿ ಗುಡಿ ಸಾಗರ್‌, ಶಂಭು, ಧನಪಾಲ, ಯೋಗೇಶ್‌, ಕಾಶಿ ಇದ್ದರು.

click me!