ಚುನಾವಣೆಯಲ್ಲಿ ಸೋತರೂ ನನಗೆ ಖುಷಿ ಇದೆ : ಎಚ್.ವಿಶ್ವನಾಥ್ !

Kannadaprabha News   | Asianet News
Published : Dec 11, 2019, 01:26 PM ISTUpdated : Dec 11, 2019, 03:00 PM IST
ಚುನಾವಣೆಯಲ್ಲಿ ಸೋತರೂ ನನಗೆ ಖುಷಿ ಇದೆ : ಎಚ್.ವಿಶ್ವನಾಥ್ !

ಸಾರಾಂಶ

ನಾನೂ ಚುನಾವಣೆಯಲ್ಲಿ ಸೋತರು ಕೂಡ ನನಗೆ ಖುಷಿ ಇದೆ ಎಂದು ಮಾಜಿ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ. ಇದಕ್ಕೆ ಕಾರಣ ಇಲ್ಲಿದೆ. 

ಮೈಸೂರು [ಡಿ.11]: ಉಪಚುನಾವಣೆಯಲ್ಲಿ ನಾನು ಸೋತೆ ಎಂಬುದಕ್ಕಿಂತ ರಾಜ್ಯದಲ್ಲಿ ಸ್ಥಿರ ಸರ್ಕಾರ ಬಂತಲ್ಲ ಅದೇ ನನಗೆ ಖುಷಿ ನೀಡಿದೆ ಎಂದು ಪರಾಜಿತ ಅಭ್ಯರ್ಥಿ ಎಚ್. ವಿಶ್ವ ನಾಥ್ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಉಪಚುನಾವಣೆ ಸೋಲು ನೋವಿಗಿಂತಲೂ ಸದೃಢ ಸರ್ಕಾರ ತಂದಿರುವ ಖುಷಿ ಇದೆ. ಯಡಿಯೂರಪ್ಪ ನಮ್ಮ ಜೊತೆ ಇರು ವುದಲ್ಲ, ನಾವೇ ಅವರ ಜೊತೆ ಇದ್ದೇವೆ. ಯಾವ ಕ್ಷಣದಲ್ಲೂ ಅವರು ನಮ್ಮ ಕೈ ಬಿಡುವುದಿಲ್ಲ ಎಂಬ ಭರ ವಸೆ ಇದೆ. ಶುದ್ಧ ರಾಜಕಾರಣಕ್ಕಾಗಿ ನಾವು ತ್ಯಾಗ ಮಾಡಿದ್ದೇವೆ. 

ಯಡಿಯೂರಪ್ಪ ಒಮ್ಮೆ ಮಾತು ಕೊಟ್ಟ ಮೇಲೆ ಎಂದೂ ತಪ್ಪುವುದಿಲ್ಲ. ನಮ್ಮ ಜನರಿಗೆ ಯಾರನ್ನು ಗೆಲ್ಲಿಸಬೇಕು ಅಂತ ಗೊತ್ತಿರಬೇಕು. ಈ ಬಗ್ಗೆ ಜನರ ನಿರ್ಧಾರವನ್ನು ನಾನು ಟೀಕಿಸುವುದಿಲ್ಲ. ನಮ್ಮನ್ನ ನಾವೇ ದೂರಿಕೊಳ್ಳಬೇಕು. ಇದರ ಬಗ್ಗೆ ಜನರಿಗೆ ಇನ್ನಷ್ಟು ಮಾಹಿತಿ ಬೇಕಿದೆ ಎಂದರು. 

ಉಪ ಚುನಾವಣೆ ಬೆನ್ನಲ್ಲೇ JDS ಶಾಸಕ GTD ಬಾಂಬ್ ...

 ಎಲ್ಲರೂ ಸೇರಿ ಸೋಲಿಸಿದರು: ಉಪಚುನಾವಣೆಯಲ್ಲಿ ನನ್ನ ಸೋರಿಗೆ ಎಲ್ಲರೂ ಒಂದಾಗಿ ಕೆಲಸ ಮಾಡಿದರು. ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಜಿ.ಟಿ. ದೇವೇಗೌಡ ಎಲ್ಲರೂ ಸೇರಿಕೊಂಡು ನನ್ನನ್ನು ಸೋಲಿಸಿದ್ದಾರೆ ಎಂದ ಅವರು, ಸಿದ್ದರಾಮಯ್ಯ ರಾಜೀನಾಮೆ ವಿಚಾರವಾಗಿ, ನೋಡಿ ಭಗವಂತ ಎಲ್ಲೋ ಒಂದು ಕಡೆ ತೋರಿಸುತ್ತಾನೆ ಎಂದರು.

ಹುಣಸೂರು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಶಿಷ್ಯ ಎಚ್.ಪಿ.ಮಂಜುನಾಥ್ ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದಾರೆ. 

PREV
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ