ಸಿಂದಗಿ: ಶಿಕ್ಷಕರ ನಿರಂತರ ಗೈರು , ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದ ಗ್ರಾಮಸ್ಥರು

By Suvarna NewsFirst Published Dec 11, 2019, 1:22 PM IST
Highlights

ಶಾಲೆಗೆ ಶಿಕ್ಷಕರ ನಿರಂತರ ಗೈರು|  ರೊಚ್ಚಿಗೆದ್ದ ಗ್ರಾಮಸ್ಥರಿಂದ ಶಾಲೆಗೆ ಬೀಗ ಜಡಿದು ಪ್ರತಿಭಟನೆ| ಸಿಂದಗಿ ತಾಲೂಕಿನ ಹಳೆ ತಾರಾಪುರ ಗ್ರಾಮದಲ್ಲಿ ನಡೆದ ಘಟನೆ| 90 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರಿಂದ ಪಾಠ|

ವಿಜಯಪುರ(ಡಿ.11): ವಿವಿಧ ನೆಪವೊಡ್ಡಿ ಶಿಕ್ಷಕರು ಶಾಲೆಗೆ ನಿರಂತರ ಗೈರು ಆದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಶಾಲೆಗೆ ಕೀಲಿ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಹಳೆ ತಾರಾಪುರ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ.  

ತರಬೇತಿ ಮತ್ತು ಅನಾರೋಗ್ಯ ನೆಪದಲ್ಲಿ ಬಹಳ ದಿನಗಳಿಂದ ಶಾಲೆಗೆ ಶಿಕ್ಷಕರು ಗೈರಾಗುತ್ತಿದ್ದಾರೆ. ಹೀಗಾಗಿ  ಗ್ರಾಮಸ್ಥರು ಶಿಕ್ಷಕರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಳೆ ತಾರಾಪುರ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಸುಮಾರು 90 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೂರು ಜನ ಖಾಯಂ, ಓರ್ವ ಹೆಚ್ಚುವರಿ ಶಿಕ್ಷಕರ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಕಳೆದ ಒಂದು ವಾರದಿಂದ ಶಾಲೆಗೆ ಒಬ್ಬರೇ ಶಿಕ್ಷಕ ಶಾಲೆಗೆ ಆಗಮಿಸುತ್ತಿದ್ದಾರೆ. ಉಳಿದ ಒಬ್ಬರನ್ನು ತರಬೇತಿಗೆ ನಿಯೋಜನೆ ಮಾಡಲಾಗಿದೆ. ಮತ್ತೊಬ್ಬ ಶಿಕ್ಷಕ ಸುಮಾರು ಒಂದು ತಿಂಗಳಿಂದ ಗೈರಾಗಿದ್ದಾರೆ. 

ಹೆಚ್ಚುವರಿ ಶಿಕ್ಷಕರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರೇ 90 ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಮಂಗಳವಾರ ಮುಖ್ಯ ಶಿಕ್ಷಕ ಸೇರಿ ಎಲ್ಲ ಶಿಕ್ಷಕರು ಗೈರಾಗಿದ್ದರು. ಈ ಹಿನ್ನೆಲೆ ಗ್ರಾಮಸ್ಥರಿಂದ ಶಾಲೆಗೆ ಕೀಲಿ ಹಾಕಿ ಪ್ರತಿಭಟನೆ ನಡೆಸಿದ್ದಾರೆ. 
 

click me!