ಕೆ.ಆರ್.ಪೇಟೆಯಲ್ಲಿ ಫೀಲ್ಡಿಗಿಳಿದ ಜೆಡಿಎಸ್-ಕಾಂಗ್ರೆಸ್ : ಶುರುವಾಯ್ತು ಲೆಕ್ಕ!

By Suvarna NewsFirst Published Dec 11, 2019, 12:22 PM IST
Highlights

ರಾಜ್ಯದಲ್ಲಿ ನಡೆದ  ಉಪ ಚುನಾವಣೆಯಲ್ಲಿ ಭದ್ರಕೋಟೆಯಲ್ಲಿ ಜೆಡಿಎಸ್ ಸೋಲು ಕಂಡಿದ್ದು ಈ ಬಗ್ಗೆ ಇದೀಗ ಅವಲೋಕನಕ್ಕೆ ಇಳಿದಿದೆ. ಸೋಲಿನ ಕಾರಣಗಳೇನು ಎನ್ನುವುದರ ಪತ್ತೆಗೆ ಆರಂಭಿಸಿದ್ದಾರೆ. 

ಮಂಡ್ಯ [ಡಿ.11]: ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಜೆಡಿಎಸ್ ಭದ್ರಕೋಟೆ ಎಂದೇ ಕರೆಸಿಕೊಳ್ಳುತ್ತಿದ್ದ ಮಂಡ್ಯ ಕೆ.ಆರ್.ಪೇಟೆ ಕ್ಷೇತ್ರವೂ ಸಹ ಇದೀಗ ಜೆಡಿಎಸ್ ಕೈ ತಪ್ಪಿ ಬಿಜೆಪಿ ವಶವಾಗಿದೆ. 

ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ನಾರಾಯಣ ಗೌಡ ಕೆ.ಆರ್.ಪೇಟೆಯಲ್ಲಿ  ಗೆಲುವು ಸಾಧಿಸಿದ್ದು, ಇದೀಗ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್ ನಾಯಕರು ಸೋಲಿನ ಪರಾಮರ್ಶೆಗೆ ಇಳಿದಿದ್ದಾರೆ. 

ಎರಡೂ ಪಕ್ಷಗಳಿಂದ ಕೆ.ಆರ್.ಪೇಟೆಯಲ್ಲಿ ಸೋಲಿನ ಅವಲೋಕನ ನಡೆಯುತ್ತಿದ್ದು ಇದಕ್ಕೆ  ನಾಯಕರು ಸೇರಿ ಕಾರಣ ಹುಡುಗಲು ಮುಂದಾಗಿದ್ದಾರೆ. 

JDS ನಲ್ಲಿದ್ದು ಕೈ ಅಭ್ಯರ್ಥಿ ಗೆಲುವಿಗೆ ಸಪೋರ್ಟ್ : ಫಲಿತಾಂಶದ ಬಗ್ಗೆ ತುಟಿ ಬಿಚ್ಚದ ಶಾಸಕ

ಈ ಕ್ಷೇತ್ರದಲ್ಲಿ ಜೆಡಿಎಸ್  ಅಭ್ಯರ್ಥಿಯಾಗಿ BL ದೇವರಾಜು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಂದ್ರಶೇಖರ್ ಕಣಕ್ಕೆ ಇಳಿದಿದ್ದು,  ಸೋಲಲು ಜೆಡಿಎಸ್ ಹಾಗೂ ಕಾಂಗ್ರೆಸ್ ವೈಫಲ್ಯಗಳೇನು ಎನ್ನುವ ಕಾರಣ ಪತ್ತೆಗೆ ಉಭಯ ಪಕ್ಷದ ನಾಯಕರು ಮುಂದಾಗಿದ್ದಾರೆ. ಕಾರಣಗಳನ್ನು ಪಟ್ಟಿ ಮಾಡಲು ಮುಂದಾಗಿದ್ದು, ಬೂತ್ ಮಟ್ಟದಿಂದಲೇ ಲೆಕ್ಕಾಚಾರ ನಡೆಸುತ್ತಿದ್ದಾರೆ. 

ಪ್ರತೀ ಬೂತಲ್ಲಿ ಚಲಾವಣೆಯಾದ ಮತಗಳ ಅಂಕಿ ಅಮಶಗಳನ್ನು ಪರಿಗಣಿಸಿ ಅವಲೋಕನ ಶುರು ಮಾಡಿದ್ದು, ಹಣ ಪಡೆದು ತಟಸ್ಥರಾಗಿದ್ದವರ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ. 

ಡಿಸೆಂಬರ್ 5 ರಂದು 15 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ 12 ಸ್ಥಾನ ಬಿಜೆಪಿ ಪಾಲಾಗಿದ್ದು, ಕಾಂಗ್ರೆಸ್ ಎರಡು ಸ್ಥಾನದಲ್ಲಿ ವಿಜಯ ಸಾಧಿಸಿತ್ತು. ಆದರೆ ಜೆಡಿಎಸ್ ಈ ಚುನಾವಣೆಯಲ್ಲಿ ಶೂನ್ಯ ಫಲಿತಾಂಶ ದಾಖಲಿಸಿತ್ತು. 

click me!