ನಾನು ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ: ರಾಜೇಶ್‌

By Kannadaprabha News  |  First Published Feb 17, 2023, 5:20 AM IST

ನಾನು ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ. ಈ ಬಾರಿ ತಾಲೂಕಿನಲ್ಲಿ ಕಮಲ ಅರಳುವುದು ಖಚಿತ ಎಂದು ಬಿಜೆಪಿ ಮುಖಂಡ ರಾಜೇಶ್‌ ಗೌಡ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ.


 ಕುಣಿಗಲ್‌: ನಾನು ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ. ಈ ಬಾರಿ ತಾಲೂಕಿನಲ್ಲಿ ಕಮಲ ಅರಳುವುದು ಖಚಿತ ಎಂದು ಬಿಜೆಪಿ ಮುಖಂಡ ರಾಜೇಶ್‌ ಗೌಡ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

ತಾಲೂಕಿನ ಅಮೃತೂರು ಹೋಬಳಿಯ ಜಿನ್ನಾಗ್ರ ಗ್ರಾಮದಲ್ಲಿ ರಾಜೇಶ್‌ ಗೌಡ ಅಭಿಮಾನಿಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಿಜೆಪಿ ಸರ್ಕಾರ ಸಾಕಷ್ಟುಅನುದಾನಗಳನ್ನು ತಾಲೂಕಿಗೆ ನೀಡಿದರು ಸರಿಯಾಗಿ ಅಭಿವೃದ್ಧಿಗೆ ಬಳಸಿಕೊಂಡಿಲ್ಲ. ಮೂಲಭೂತ ಸೌಕರ್ಯ ಇನ್ನಷ್ಟು ಆಗಬೇಕಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಗೆಲ್ಲುವುದು ಖಚಿತ. ಅದೇ ರೀತಿ ಕುಣಿಗಲ್‌ ತಾಲೂಕಿನಲ್ಲೂ ಕೂಡ ಬಿಜೆಪಿ ಗೆಲ್ಲಲಿದೆ ಎಂದರು. ಕಾರ್ಯಕ್ರಮದಲ್ಲಿ ಹಲವಾರು ರಾಜೇಶ್‌ ಗೌಡರ ಅಭಿಮಾನಿಗಳು ಅವರನ್ನು ಅಭಿನಂದಿಸಿ ಪುಷ್ಪ ಮಳೆ ಸುರಿಸಿದರು.

Latest Videos

undefined

ಈ ಸಂದರ್ಭದಲ್ಲಿ ಅಂಚಿಪುರದ ಗಂಗಾಧರ್‌, ಜಿನ್ನಾಗರದ ಮಧು, ಬೆಟ್ಟಹಳ್ಳಿ ಜಗದೀಶ್‌, ಗಂಗಾಧರ್‌, ವಳಗೇರಪುರ ಜಯರಾಮ್‌, ಉಂಗ್ರದ ದಾಳೇಗೌಡ, ಸಣಬದ ವಾಸು ಸೇರಿದಂತೆ ಇತರರು ಇದ್ದರು.

ಸೋಲು ಖಚಿತವಾದಾಗ ಬಿಜೆಯಿಂದ ಗಲಭೆ

ಶಿರಸಿ (ಫೆ.17): ಬಿಜೆಪಿಯು ಎಲ್ಲಿ ಚುನಾವಣೆ ಎದುರಿಸಲು ಆಗುವುದಿಲ್ಲವೋ ಅಲ್ಲಿ ಕೋಮು ಗಲಭೆ ಸೃಷ್ಟಿಸಿ, ಭಾವನಾತ್ಮಕ ಮಾತನ್ನಾಡತಾರೆ. ಇದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಈ ಸಲ ಸರಿಯಾಗಿ ಬುದ್ಧಿ ಕಲಿಸುತ್ತಾರೆ ಎಂದು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಹೇಳಿದರು. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪರೇಶ್‌ ಮೇಸ್ತ ಪ್ರಕರಣದ ನಂತರ ಬಿಜೆಪಿ ಹೆಣದ ಮೇಲೆ ರಾಜಕಾರಣ ಮಾಡುತ್ತದೆ ಎಂದು ಜನರಿಗೆ ಅರ್ಥವಾಗಿದೆ. 

ಬಿಜೆಪಿ ದಬ್ಬಾಳಿಕೆ ದೌರ್ಜನ್ಯ ಹೋಗಲಾಡಿಸೋಕೆ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ. ಎಲ್ಲಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬೆಲೆ ಏರಿಕೆ ಗಗನ ಮುಟ್ಟಿದೆ. ಜನರ ನಿರೀಕ್ಷೆಯನ್ನು ಅರ್ಥ ಮಾಡಿಕೊಂಡು ಮುಂದೆ ಏನು ಮಾಡಬೇಕು ಎನ್ನುವುದರನ್ನು ಅರಿಯಲು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು. ಎಲ್ಲ ಟೆಂಡರ್‌ನಲ್ಲೂ ಶೇ.40 ಕಮಿಷನ್‌ ಜಗಜ್ಜಾಹೀರಾಗಿದೆ. ಈಗಾಗಲೇ ಪ್ರಧಾನಿ ಮೋದಿ ಅವರಿಗೆ ಇದರ ಬಗ್ಗೆ ಪತ್ರ ಬರೆದರೂ ಕ್ರಮ ಕೈಗೊಳ್ಳುತ್ತಿಲ್ಲ. ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಿದೆ ಎಂದರು.

ಮಂಡ್ಯ ಜಿಲ್ಲೆ ಗೆಲ್ಲಲು ಬಿಜೆಪಿ ಚಾಣಕ್ಯ ತಂತ್ರ: ಅಶ್ವತ್ಥ್, ವಿಜಯೇಂದ್ರ ನೇತೃತ್ವದಲ್ಲಿ ಬಿಗ್‌ ಪ್ಲಾನ್‌

ಸಿದ್ದು ಸ್ಪರ್ಧೆಯಲ್ಲಿ ಗೊಂದಲವಿಲ್ಲ: ಸಿದ್ದರಾಮಯ್ಯ ಸ್ಪರ್ಧೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಬಾದಾಮಿಯಲ್ಲಿ ನಾನು ಸ್ಪರ್ಧೆ ಮಾಡಲ್ಲ, ಕೋಲಾರದಲ್ಲಿ ಸ್ಪರ್ಧೆ ಮಾಡ್ತೀನಿ. ಅದಕ್ಕೆ ಹೈಕಮಾಂಡ್‌ ಒಪ್ಪಿಗೆ ಬೇಕು ಅಂತ ಕೇಳಿದ್ದಾರೆ ಎಂದರು. ನಳಿನ್‌ಕುಮಾರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇವರ ಪಕ್ಷ ಯಾವುದಂತೆ? ಅವರ ಪೂರ್ವಜರು ಗಾಂಧಿಯನ್ನೇ ಕೊಂದ ಪಕ್ಷದವರು. ದೇಶದಲ್ಲಿ ಮೊಟ್ಟಮೊದಲ ಭಯೋತ್ಪಾದಕನನ್ನು ಹುಟ್ಟು ಹಾಕಿದ್ದೇ ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ಹಿಂದೂ ಮಹಾಸಭಾ. ಇವರ ಸರ್ಟಿಫಿಕೇಟ್‌ ನಮಗೆ ಬೇಕಾಗಿಲ್ಲ ಎಂದರು. ಬ್ರಿಟಿಷರ ಏಜೆಂಟರು ನಮ್ಮನ್ನು ಭಯೋತ್ಪಾದಕರು ಅನ್ನಲೇಬೇಕಲ್ಲ ಎಂದು ತಿರುಗೇಟು ನೀಡಿದರು.

ಬ್ರಾಹ್ಮಣ ಮುಖ್ಯಮಂತ್ರಿ ವಿಚಾರವಾಗಿ ಪ್ರಶ್ನೆಗೆ ಉತ್ತರಿಸಿದ ಅವರು, ಸಂವಿಧಾನ, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು ಜನ ಯಾರಿಗೆ ಆಶೀರ್ವಾದ ಮಾಡ್ತಾರೋ ಅವ್ರು ಮುಖ್ಯಮಂತ್ರಿ ಆಗ್ತಾರೆ. ಆದರೆ ಗೋಡ್ಸೆ ಸಂತತಿಯನ್ನು ಸೋಲಿಸಬೇಕಿದೆ. ಅವರೇನು ರಾಮನನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ? ಮಹಾತ್ಮಾ ಗಾಂಧಿಯವರ ರಾಮರಾಜ್ಯಕ್ಕೂ ಇವರ ರಾಮರಾಜ್ಯಕ್ಕೂ ವ್ಯತ್ಯಾಸವಿದೆ. ಇವರ ರಾಮರಾಜ್ಯ ಭಯೋತ್ಪಾದಕರ ರಾಜ್ಯ. ಮಾತೆತ್ತಿದರೆ ಅಂಬೇಡ್ಕರ್‌ ಅಂತಾರೆ, ಮಾಡೋ ಕೆಲಸ ಸಾವರ್ಕರದ್ದು. ಅಂಬೇಡ್ಕರ್‌ ಹಾಗೂ ಸಾವರ್ಕರ ಸ್ಪರ್ಧೆ ಇದೆ ಎಂದರು.

ಭಾರತದಲ್ಲೇ ಅತಿ ದೊಡ್ಡ ಭ್ರಷ್ಟ ಸರ್ಕಾರ ಬಿಜೆಪಿ: ರಣದೀಪ್‌ ಸಿಂಗ್‌ ಸುರ್ಜೇವಾಲ

ಟಿಪ್ಪು ಸುಲ್ತಾನ್‌ ಒಬ್ಬ ಸ್ವಾತಂತ್ರ್ಯ ಹೋರಾಟಗಾರ, ಇವರ ತರ ರಣಹೇಡಿಯಲ್ಲ. ಬ್ರಿಟಿಷರ ಗುಲಾಮಗಿರಿ ಮಾಡುವಂತಹ ಇವರ ಪೂರ್ವಜರ ಸಂತತಿ ಟಿಪ್ಪು ಸುಲ್ತಾನ್‌ದಲ್ಲ ಎಂದ ಅವರು, ಮೋದಿ ಈ ಹಿಂದೆ ಉತ್ತರ ಕರ್ನಾಟಕದಲ್ಲಿ ಮಳೆ ಹಾನಿ ಆದಾಗಲೂ ಬರಲಿಲ್ಲ. ಸಾಮಾನ್ಯವಾಗಿ ವೈಮಾನಿಕ ಸಮೀಕ್ಷೆಗಾದರೂ ಬರುತ್ತಾರೆ. ಆದರೆ ಅದೂ ಗೊತ್ತಿಲ್ಲದಿರುವ, ಸಾಮಾನ್ಯ ಕಾಳಜಿ ಇಲ್ಲದೇ ಇರೋರು ಪ್ರಧಾನಿ ಹಾಗೂ ಅಮಿತ್‌ ಶಾ ಎಂದು ಟೀಕಿಸಿದರು.

 

 

click me!