ಚಿಕ್ಕಮಗಳೂರು ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಾಸ್ಸಾದ ರಾಜ್ಯಪಾಲರು

By Suvarna News  |  First Published Feb 16, 2023, 10:08 PM IST

ಕಳೆದ ಎರಡು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದ ಕರ್ನಾಟಕದ  ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಫೆ.16): ಕಳೆದ ಎರಡು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದ ಕರ್ನಾಟಕದ  ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ. ನಿನ್ನೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ರಾಜ್ಯಪಾಲರು ಮಧ್ಯಾಹ್ನ ಮೂಡಿಗೆರೆ ಕಾಫಿ ಕೋರ್ಟ್‍ನಲ್ಲಿ ಕೆಲ ಹೊತ್ತು ತಂಗಿ ವಿಶ್ರಾಂತಿ ಪಡೆದರು. ಈ ಸಂದರ್ಭದಲ್ಲಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು, ಕಾಫಿ ಕೋರ್ಟ್ ಅಧ್ಯಕ್ಷ ಡಿ.ಬಿ. ಜಯಪ್ರಕಾಶ್, ಹಳಸೆ ಶಿವಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದು ರಾಜ್ಯಪಾಲರನ್ನು ಸ್ವಾಗತಿಸಿದರು. ಹಳಸೆ ಶಿವಣ್ಣ ಅವರ ಎಸ್ಟೇಟ್ ಗೆ ಭೇಟಿ ನೀಡಿ ಕಾಫಿ, ಕಾಳುಮೆಣಸು ಬೆಳೆಗಳ ಬಗ್ಗೆ ಮಾಹಿತಿ ಪಡೆದರು. ನಂತರ ಧರ್ಮಸ್ಥಳಕ್ಕೆ ತೆರಳಿದ್ದರು.

Tap to resize

Latest Videos

ಇಂದು ಹೊರಡನಾಡಿಗೆ ಭೇಟಿ ನೀಡಿದ ರಾಜ್ಯಪಾಲರು:
ಧರ್ಮಸ್ಥಳದಿಂದ ಕಾರ್ಯಕ್ರಮ ಮುಗಿಸಿ ಕುದುರೆಮುಖ ಸಮೀಪದ ನೇಚರ್ ಕ್ಯಾಂಪ್ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದ ರಾಜ್ಯಪಾಲರು ಇಂದು ಹೊರನಾಡು ಕಳಸ ಪ್ರವಾಸ ಕೈಗೊಂಡಿದ್ದರು. ಹೊರನಾಡಿನಲ್ಲಿ ಧರ್ಮಕರ್ತರಾದ ಶ್ರೀ ಜಿ. ಭೀಮೇಶ್ವರ ಜೋಷಿ ಕುಟುಂಬದವರು ರಾಜ್ಯಪಾಲರಿಗೆ ಪೂರ್ಣಕುಂಭ ಸ್ವಾಗತ ನೀಡಿದರು. ತದನಂತರ ಅನ್ನಪೂರ್ಣೇಶ್ವರಿ ದೇವಿ ದರ್ಶನವನ್ನು ರಾಜ್ಯಪಾಲರು ಪಡೆದರು.

 

Dharamsthala: ನವಜೀವನ ಸಮಾವೇಶ: ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ರಾಜ್ಯಪಾಲರ ಕರೆ

ಈ ಸಮಯದಲ್ಲಿ ಕುದುರೆಮುಖದಲ್ಲಿ ಸ್ಥಳೀಯ ಗ್ರಾಮಸ್ಥರು ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದರು. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿದ್ದ ರಾಜ್ಯಪಾಲರು ಇಂದು ತಮ್ಮ ಪ್ರವಾಸ ಮುಗಿಸಿ ಬಾಳೆಹೊನ್ನೂರು, ಆಲ್ದೂರು, ಚಿಕ್ಕಮಗಳೂರು ಮೂಲಕ ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ.

ರಾಜ್ಯಪಾಲರಿಂದ ತೌಡು ಕುಟ್ಟಿದ ಭಾಷಣ, ಭತ್ತ ಕುಟ್ಟಿದ್ದರೆ ಅಕ್ಕಿ ಆದರೂ ಬರುತ್ತಿತ್ತು: ಸಿದ್ದರಾಮಯ್ಯ

click me!