ಅಕ್ರಮ ಗಣಿಗಾರಿಕೆ: ದೂರು ನೀಡಿದ್ರೂ ಗಣಿ ಲೀಸ್‌ ನವೀಕರಣ: ಆರೋಪ

By Kannadaprabha NewsFirst Published Feb 3, 2023, 11:32 AM IST
Highlights

 ಹಿರೀಕಾಟಿ ಗ್ರಾಮದ ಕ್ವಾರಿಯಲ್ಲಿ ಕೋಟ್ಯಾಂತರ ಬಾಕಿ ಹಾಗೂ ಅಕ್ರಮ ಗಣಿಗಾರಿಕೆ ನಡೆಸಿರುವ ಲೀಸ್‌ದಾರ ಪಿ.ಎಚ್‌.ಕಿರಣ್‌ಗೆ ಸೇರಿದ ಲೀಸ್‌ ನವೀಕರಿಸದಂತೆ ದೂರು ಸಲ್ಲಿಸಿದ್ದರೂ ಮತ್ತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಲೀಸ್‌ ಮಾಡುವ ಮೂಲಕ ಅಕ್ರಮಕ್ಕೆ ಪುಷ್ಠಿ ನೀಡಿದೆ ಎಂದು ದೂರುದಾರ ಎಚ್‌.ಎಸ್‌.ದಿನೇಶ್‌ ಆರೋಪಿಸಿದ್ದಾರೆ.

ಗುಂಡ್ಲುಪೇಟೆ (ಫೆ.3) : ಹಿರೀಕಾಟಿ ಗ್ರಾಮದ ಕ್ವಾರಿಯಲ್ಲಿ ಕೋಟ್ಯಾಂತರ ಬಾಕಿ ಹಾಗೂ ಅಕ್ರಮ ಗಣಿಗಾರಿಕೆ ನಡೆಸಿರುವ ಲೀಸ್‌ದಾರ ಪಿ.ಎಚ್‌.ಕಿರಣ್‌ಗೆ ಸೇರಿದ ಲೀಸ್‌ ನವೀಕರಿಸದಂತೆ ದೂರು ಸಲ್ಲಿಸಿದ್ದರೂ ಮತ್ತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಲೀಸ್‌ ಮಾಡುವ ಮೂಲಕ ಅಕ್ರಮಕ್ಕೆ ಪುಷ್ಠಿ ನೀಡಿದೆ ಎಂದು ದೂರುದಾರ ಎಚ್‌.ಎಸ್‌.ದಿನೇಶ್‌ ಆರೋಪಿಸಿದ್ದಾರೆ.

ಹಿರೀಕಾಟಿ ಗ್ರಾಮದ ಸ.ನಂ.108ರಲ್ಲಿ ಲೀಸ್‌ದಾರ ಪಿ.ಎಚ್‌.ಕಿರಣ್‌ 2019 ರ ಸಾಲಿನಲ್ಲಿ ಲೀಸ್‌ ಅವಧಿ ಮುಗಿದ ಬಳಿಕವೂ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ. 2019ರ ಸಾಲಿನಲ್ಲಿ 4.67 ಕೋಟಿ ರಾಜಧನ ಕಟ್ಟಿಲ್ಲ. 2022ರ ಸಾಲಿನಲ್ಲಿ 44.26 ಲಕ್ಷ ರಾಜಧನ ಕಟ್ಟಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯೇ ಮಾಹಿತಿ ನೀಡಿದೆ.

CHAMARAJANAGAR: ರೈತರಿಗೆ ಕಣ್ಣೀರು ತರಿಸಿದ ಸಣ್ಣೀರುಳ್ಳಿ ಕಳಪೆ ಬೀಜ: ಕಟಾವು ಅವಧಿ ಮುಗಿದರೂ ಬಾರದ ಬೆಳೆ

ಈ ಸಂಬಂಧ ರಾಜಧನ ಬಾಕಿ ಹಾಗೂ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ ಹಾಗೂ ನೂರಾರಡಿ ಆಳವಾಗಿದ್ದರೂ ಮತ್ತೆ ಲೀಸ್‌ ಕೊಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮುಂದಾಗಿದೆ. ಇದನ್ನು ಸ್ಥಗಿತಗೊಳಿಸಬೇಕು ಎಂದು 2022ರ ನ.14ರಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಆದರೂ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಲೀಸ್‌ದಾರ ಪಿ.ಎಚ್‌.ಕಿರಣ್‌ ಕೋಟ್ಯಾಂತರ ಬಾಕಿ ರಾಜಧನ ಪಾವತಿಸಿಲ್ಲ ಹಾಗೂ ದೇವಸ್ಥಾನ ಬಳಿಯಿದೆ. ಈ ಬಗ್ಗೆ ಯಾವುದೇ ಮಹಜರು ನಡೆಸದೇ ಲೀಸ್‌ ನೀಡುವ ಮೂಲಕ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಕ್ರಮಕ್ಕೆ ನೀರು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಲೀಸ್‌ದಾರ ಪಿ.ಎಚ್‌.ಕಿರಣ್‌ರ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯೇ ಎಫ್‌ಐಆರ್‌ ದಾಖಲು ಮಾಡಿತ್ತು ಎಂದು ಹೇಳಿಕೆಯಲ್ಲಿ ಹಳೆಯದನ್ನು ಕೆದಕಿದ್ದಾರೆ.

ಆರ್‌ಸಿ ಸೂಚನೆ: ಹಿರೀಕಾಟಿ ಕ್ವಾರಿಯಲ್ಲಿ ಪಿ.ಎಚ್‌.ಕಿರಣ್‌ ಅಕ್ರಮ ಗಣಿಗಾರಿಕೆ ಹಾಗೂ ರಾಜಧನ ಬಾಕಿ ಇರುವ ಸಂಬಂಧ ದೂರು ಬಂದಿದೆ. ಪರಿಶೀಲಿಸಿ ದೂರುದಾರರಿಗೆ ಮಾಹಿತಿ ನೀಡಬೇಕು ಎಂದು ಪ್ರಾದೇಶಿಕ ಆಯುಕ್ತರ ಕಾರ್ಯಾಲಯ 2022ರ ಡಿ.6ರಂದು ಸೂಚನೆ ನೀಡಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇಲ್ಲಿಯ ತನಕ ಮಾಹಿತಿ ನೀಡಿಲ್ಲ.

Chamarajanagar: ಸಿಸಿಟಿವಿ ಕ್ಯಾಮರಾವಿಲ್ಲದ ಏರಿಯಾಗಳೇ ಕಳ್ಳರ ಟಾರ್ಗೆಟ್: ಎರಡು ದಿನಕ್ಕೊಂದು ಕಳ್ಳತನ

ಪ್ರಾದೇಶಿಕ ಆಯುಕ್ತರ ಕಾರ್ಯಾಲಯದಿಂದ ಸೂಚನೆಯನ್ನು ಲೆಕ್ಕಿಸದೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಲೀಸ್‌ದಾರರೊಂದಿಗೆ ಶಾಮೀಲಾಗಿ ಗಣಿಗಾರಿಕೆ ನಡೆಸಲು ಅವಕಾಶ ಮಾಡಿದ್ದಾರೆ ಎಂದು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಲಾಗುವುದು ಎಂದಿದ್ದಾರೆ.

click me!