* ಮಾರಾಟ ಜಾಲ ಅವ್ಯಾಹತ
* ಪಡಿತರ ಮಾರಾಟಕ್ಕೆ ಬೀಳದ ಕಡಿವಾಣ
* 34 ಪ್ರಕರಣ ದಾಖಲು
ಬಾಲಕೃಷ್ಣ ಜಾಡಬಂಡಿ
ಹುಬ್ಬಳ್ಳಿ(ಏ.14): ರಾಜ್ಯ ಸರ್ಕಾರ(Government of Karnataka) ಹಸಿವು ಮುಕ್ತ ಸಮಾಜ ನಿರ್ಮಾಣಕ್ಕಾಗಿ 2013ರಲ್ಲಿ ಅನ್ನಭಾಗ್ಯ(Annabhagya) ಯೋಜನೆ ಜಾರಿಗೊಳಿಸಿದ್ದು, ಜಿಲ್ಲಾದ್ಯಂತ ಹಲವು ಪಡಿತರ ಚೀಟಿದಾರರೇ ಅನ್ನಭಾಗ್ಯಕ್ಕೆ ಕನ್ನ ಹಾಕುತ್ತಿದ್ದಾರೆ. ಜಿಲ್ಲೆಯ ಧಾರವಾಡ, ಕಲಘಟಗಿ, ನವಲಗುಂದ, ಅಣ್ಣಿಗೇರಿ, ಕುಂದಗೋಳ ಹಾಗೂ ಹುಬ್ಬಳ್ಳಿ ನಗರ, ಗ್ರಾಮೀಣ ಭಾಗದಲ್ಲಿ ಪಡಿತರ ಅಕ್ಕಿ ಮಾರಾಟ ಜಾಲ ಅವ್ಯಾಹತವಾಗಿ ಬೆಳೆದು ನಿಂತಿದೆ. ಮಹಾನಗರದ ಗಣೇಶ ಪೇಟೆ, ನೇಕಾರ ನಗರ, ಗಿರಿಯಾಲ, ಹಳೇಹುಬ್ಬಳ್ಳಿ, ಆನಂದ ನಗರ, ಗೋಪನಕೊಪ್ಪ, ಉಣಕಲ್, ಕೇಶ್ವಾಪೂರ ಶ್ರೀನಗರ, ಸಪ್ತಾಪುರ ಸೇರಿ ಹಲವೆಡೆ ಬಡವರಿಗೆ ನೀಡುವ ಅಕ್ಕಿ(Rice) ದಂಧೆಕೋರರ ಪಾಲಾಗುತ್ತಿದೆ ಎನ್ನುವ ಆರೋಪ ದಟ್ಟವಾಗಿದೆ.
undefined
ಪಡಿತರ ಅಕ್ಕಿ ಮಾರಿ ಜೋಳ, ಬೇಳೆ, ಗೋದಿ ಖರೀದಿ ಮಾಡುವವರ ಸಂಖ್ಯೆ ನಗರದಲ್ಲಿ ಹೆಚ್ಚಿದೆ. ಇನ್ನು ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕೆಲವರು ಇದನ್ನೇ ಕೆಲಸವಾಗಿಸಿಕೊಂಡಿದ್ದಾರೆ. ಕೆಲವು ಕಿರಾಣಿ ಅಂಗಡಿಯವರು, ಗಿರಣಿ ಮಾಲೀಕರು ಇದರಲ್ಲಿ ಸಂಪೂರ್ಣವಾಗಿ ತೊಡಗಿದ್ದಾರೆ.
Raita Ratna 2022 ಧಾರವಾಡ ಮಂಡಿಹಾಳದ ಸ್ವಾವಲಂಬಿ ರೈತ ಮಹಿಳೆ ಲಕ್ಷ್ಮವ್ವ ಹಡಪದ
ಪಡಿತರ(Ration) ಪಡೆದು ಮನೆಗೆ ಕೊಂಡೊಯ್ಯದೆ ಅದನ್ನು ಧಾನ್ಯಗಳ ಅಂಗಡಿಯಲ್ಲಿಯೇ ಮಾರಿ ಹಣ ಅಥವಾ ಬದಲಿ ಧಾನ್ಯ ಪಡೆಯುವ ನಿದರ್ಶನಗಳೂ ಇವೆ. ಇನ್ನು ಕೆಲವೆಡೆ ಮನೆ-ಮನೆಗೆ ಹೋಗಿ ಪಡಿತರ ಅಕ್ಕಿ ಸಂಗ್ರಹ ಮಾಡಿ ಕೆಜಿಗೆ .10ರಿಂದ 15ರವರೆಗೆ ನೀಡಲಾಗುತ್ತಿದೆ. ಇದರ ಹಿಂದೆ ಬೃಹತ್ ಜಾಲವೇ ಇದ್ದು, ಸರ್ಕಾರ ಕಂಡು ಕಾಣದಂತೆ ವರ್ತಿಸುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ.
34 ಪ್ರಕರಣ ದಾಖಲು:
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ವಿತರಿಸಲಾದ ಆಹಾರ ಧ್ಯಾನ ಮಾರಾಟ ಮಾಡಿದ ಕುರಿತು 2020ರ ಏಪ್ರಿಲ್‌ನಿಂದ 2022ರ ಮಾಚ್‌ರ್‍ವರೆಗೆ ಕೇವಲ 34 ಪ್ರಕರಣ ದಾಖಲಾಗಿವೆ. ಒಟ್ಟು 4,053.87 ಕಿಂಟ್ವಲ್ ಅಕ್ಕಿ, 22.1 ಕ್ವಿಂಟಲ್ ಗೋದಿ, 22 ವಾಹನ ವಶಪಡಿಸಿಕೊಳ್ಳಲಾಗಿದೆ. 30 ಎಫ್‌ಐಆರ್ ದಾಖಲಿಸಿ 59 ಜನರನ್ನು ಬಂಧಿಸಲಾಗಿದೆ. ಇದು ಜಿಲ್ಲೆಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನೀಡಿರುವ ಲೆಕ್ಕ. ಆದರೆ ಕಾಳಸಂತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಡಿತರ ಅಕ್ಕಿ ಮಾರಾಟವಾಗುತ್ತಿದೆ.
Covid Crisis: ಬೂಸ್ಟರ್ ಡೋಸ್‌ಗೆ ನಿರಾಸಕ್ತಿ..!
ಪ್ರಕರಣ ವಿಚಾರಣೆ ನ್ಯಾಯಾಲಯದಲ್ಲಿ(Court) ನಡೆಯುವುದರಿಂದ ಸಾಕ್ಷಿ ಇಲ್ಲದ ಅನೇಕ ಪ್ರಕರಣಗಳು ಅಂತ್ಯ ಕಂಡಿವೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ದೂರು ಆಧರಿಸಿ ಕೆಲಸ ಮಾಡುತ್ತಿರುವುದರಿಂದ ದೂರು ನೀಡಲು ಸಾಕಷ್ಟುಜನರು ಮುಂದೆ ಬರದೆ ಇರುವುದೇ ಪಡಿತರ ಅಕ್ಕಿ ಮಾರಾಟ ಜಾಲ ಬೆಳೆಯಲು ಕಾರಣವಾಗಿದೆ. ಪಡಿತರ ಅಕ್ಕಿ ಮಾರಾಟ ಜಾಲದಿಂದ ಅನ್ನಭಾಗ್ಯ ಯೋಜನೆ ಉದ್ದೇಶ ನಿಂತ ನೀರಾಗಿದೆ. ವಿತರಣೆಯಾಗುವ ಪಡಿತರ ಬಡವರ ಹೊಟ್ಟೆಸೇರದೆ ಉಳ್ಳವರ ಜೇಬು ತುಂಬಿಸುತ್ತಿದೆ. ಇನ್ನಾದರೂ ಸರ್ಕಾರ, ಸಂಬಂಧಿಸಿದ ಅಧಿಕಾರಿಗಳು ಮಾರಾಟದ ಜಾಲವನ್ನು ನಿಯಂತ್ರಿಸಲು ಕ್ರಮಕೈಗೊಳ್ಳಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.
ಪಡಿತರ ಚೀಟಿಯ ಅಕ್ಕಿ ಮಾರಾಟ ಮಾಡುತ್ತಿರುವ ಕುರಿತು ದೂರು ಬಂದ ತಕ್ಷಣ ಕ್ರಮಕೈಗೊಳ್ಳಲಾಗುತ್ತಿದೆ. ಪಡಿತರ ದಾಸ್ತಾನು ಇಡುವವರ ಮೇಲೆಯೂ ಕ್ರಮಕೈಗೊಳ್ಳುವ ಕೆಲಸ ಮಾಡಲಾಗುತ್ತಿದೆ. ಸಾರ್ವಜನಿಕರು ಮನಸ್ಸು ಮಾಡಿದರೆ ಮಾರಾಟ ಜಾಲದ ನಿಯಂತ್ರಣ ಸಾಧ್ಯ ಅಂತ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಭಾರಿ ಉಪನಿರ್ದೇಶಕ ಸುಧೀರ್ ಸಾವಕರ್ ತಿಳಿಸಿದ್ದಾರೆ.
ವರ್ಷ ದಾಖಲಾದ ಪ್ರಕರಣ ಎಫ್‌ಐಆರ್
ಏ.2020-ಮಾ.2021 14 12
ಏ.2021-ಮಾ.20222 20 18
ಒಟ್ಟು 34 30