ರಸ್ತೆ ಬದಿಯಲ್ಲೇ ಕುರಿ-ಕೋಳಿ ಕಡೀತಾರೆ, ಜನ ಮೂಗು ಮುಚ್ಕೋತಾರೆ..!

By Kannadaprabha NewsFirst Published Jan 4, 2020, 8:11 AM IST
Highlights

ತಿಪಟೂರಿನಲ್ಲಿ ಕನಿಷ್ಟ ಮಾನದಂಡಗಳನ್ನು ಅನುಸರಿಸದೆ, ಕಾನೂನು ಬಾಹಿರವಾಗಿ ಕುರಿ-ಕೋಳಿ ಕಡಿದು ಮಾಂಸ ಮಾರಾಟ ಮಾಡುವ ಅಂಗಡಿಗಳಿದ್ದು ಮೂಗು ಮುಚ್ಚಿಕೊಂಡೆ ಓಡಾಡಬೇಕಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಪ್ರಧಾನ ಅಂಚೆ ಕಚೇರಿ ಹಾಗೂ ದೂರವಾಣಿ ಕಚೇರಿಗಳಿಗೆ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಬಂದು ಹೋಗುವುದಲ್ಲದೆ, ಇದೇ ರಸ್ತೆಯಲ್ಲಿ ಮಾರುಕಟ್ಟೆಸೇರಿದಂತೆ ಇತರೆಡೆಗಳಿಗೆ ಸಾರ್ವಜನಿಕರು ಓಡಾಡುತ್ತಾರೆ.

ತುಮಕೂರು(ಜ.04): ತಿಪಟೂರು ನಗರದ ಚಿಕ್ಕ ಮಾರುಕಟ್ಟೆಬಳಿಯ ಪ್ರಧಾನ ಅಂಚೆ ಕಚೇರಿ, ಬಿಎಸ್‌ಎನ್‌ಎಲ್‌ ಕಚೇರಿಯ ಮುಂಭಾಗದ ರಸ್ತೆಯಲ್ಲಿ ಕನಿಷ್ಟಮಾನದಂಡಗಳನ್ನು ಅನುಸರಿಸದೆ, ಕಾನೂನು ಬಾಹಿರವಾಗಿ ಕುರಿ-ಕೋಳಿ ಕಡಿದು ಮಾಂಸ ಮಾರಾಟ ಮಾಡುವ ಅಂಗಡಿಗಳಿದ್ದು ಮೂಗು ಮುಚ್ಚಿಕೊಂಡೆ ಓಡಾಡಬೇಕಾಗಿದೆ ಎಂದು ಕಲ್ಪತರು ನಾಗರಿಕ ವೇದಿಕೆ ಕಾರ್ಯದರ್ಶಿ ಟೈಲರ್‌ ಹರೀಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಪ್ರಧಾನ ಅಂಚೆ ಕಚೇರಿ ಹಾಗೂ ದೂರವಾಣಿ ಕಚೇರಿಗಳಿಗೆ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಬಂದು ಹೋಗುವುದಲ್ಲದೆ, ಇದೇ ರಸ್ತೆಯಲ್ಲಿ ಮಾರುಕಟ್ಟೆಸೇರಿದಂತೆ ಇತರೆಡೆಗಳಿಗೆ ಸಾರ್ವಜನಿಕರು ಓಡಾಡುತ್ತಾರೆ.

ತುಮಕೂರಲ್ಲಿ ಸಿಕ್ತು ಕೆಜಿ ಕೆಜಿ ಜಿಂಕೆ ಮಾಂಸ..ಬೆಳಗಾವಿಯ ಗ್ರಾಪಂ ಅಧ್ಯಕ್ಷ ಬರ್ಬರ ಹತ್ಯೆ

ಕುರಿ-ಕೋಳಿ ಮಾಂಸ ಮಾರುವ ವ್ಯಾಪಾರಿಗಳು ರಸ್ತೆಯ ಪಕ್ಕದಲ್ಲೇ ಕಡಿದು ಕಡಿದ ಮಾಂಸವನ್ನು ಬಹಿರಂಗವಾಗಿ ರಸ್ತೆ ಬದಿಗೆ ನೇತುಹಾಕಿಕೊಂಡು ರಸ್ತೆ ಬದಿಯನ್ನು ಗಲೀಜು ಮಾಡಿಕೊಂಡು ಸಾರ್ವಜನಿಕರ ಓಡಾಟಕ್ಕೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.

ಈಗಲಾದರೂ ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ಮಾಂಸ ಮಾರಾಟಗಾರರ ವಿರುದ್ಧ ಕ್ರಮಕೈಗೊಂಡು ಅಂಚೆ ಹಾಗೂ ದೂರವಾಣಿ ಕಚೇರಿಗಳಿಗೆ ಬಂದು ಹೋಗುವ ಹಾಗೂ ಇಲ್ಲಿ ಓಡಾಡುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪಕ್ಕದಲ್ಲೇ ನಿರ್ಮಿಸಿರುವ ಮಾಂಸ ಮಾರುಕಟ್ಟೆಗೆ ಅಂಗಡಿಗಳನ್ನು ಸ್ಥಳಾಂತರಗೊಳಿಸಬೇಕು. ಇಲ್ಲವಾದಲ್ಲಿ ನಗರಸಭೆ ವಿರುದ್ಧ ಎಸಿಬಿ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ನಗರಸಭೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಟೈಲರ್‌ ಹರೀಶ್‌ ಎಚ್ಚರಿಕೆ ನೀಡಿದ್ದಾರೆ.

ಜೆಡಿಎಸ್ ವಕ್ತಾರ ಆತ್ಮಹತ್ಯೆ: ಕಾರಣ ನಿಗೂಢ..?

click me!