ಸಾರ್ವಜನಿಕರ ಕೆಲಸಗಳಿಗೆ ಆದ್ಯತೆ ನೀಡಬೇಕು ಕೆಲಸ ಮಾಡಲು ಇಷ್ಟಇಲ್ಲದಿದ್ದರೆ ಹೊರಡಿ ಎಂದು ಶಾಸಕ ಇಕ್ಬಾಲ್ ಹುಸೇನ್ ಅಧಿಕಾರಿಗಳನ್ನು ತರಾಟೆ ತಗೆದುಕೊಂಡರು.
ಹಾರೋಹಳ್ಳಿ (ಜೂ.23): ಸಾರ್ವಜನಿಕರ ಕೆಲಸಗಳಿಗೆ ಆದ್ಯತೆ ನೀಡಬೇಕು ಕೆಲಸ ಮಾಡಲು ಇಷ್ಟಇಲ್ಲದಿದ್ದರೆ ಹೊರಡಿ ಎಂದು ಶಾಸಕ ಇಕ್ಬಾಲ್ ಹುಸೇನ್ ಅಧಿಕಾರಿಗಳನ್ನು ತರಾಟೆ ತಗೆದುಕೊಂಡರು. ಹಾರೋಹಳ್ಳಿ ತಾಲೂಕಿನ ಕಗ್ಗಲ್ಲಹಳ್ಳಿ, ಬನವಾಸಿ, ದ್ಯಾವಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು, ಗಣಕನದೊಡ್ಡಿ ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿಗೆ ಸ್ಮಶಾನ ಜಾಗ ಗುರುತಿಸಲು ಸರ್ವೆ ಸಂಖ್ಯೆ ಕೇಳಿದರು. ಗ್ರಾಮಲೆಕ್ಕಾಧಿಕಾರಿ ಸರಿಯಾಗಿ ಮಾಹಿತಿ ನೀಡದಿದ್ದಾಗ ನಿಮಗೆ ಕೆಲಸ ಮಾಡಲು ಆಗದಿದ್ದರೆ ಬೇರೆ ಕಡೆ ಹೊರಡಿ. ಒಂದು ವಾರದಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸುವಂತೆ ಖಡಕ್ ಸೂಚನೆ ನೀಡಿದರು. ಇದೇ ಗ್ರಾಮದಲ್ಲಿ ಗ್ರಾಮಸ್ಥರು ಅಕ್ಕಿ ಕೊಡಿ ಎಂದು ಕೇಳಿದ್ದು ಈಗಾಗಲೇ ಹಲವು ರಾಜ್ಯಗಳಲ್ಲಿ ಅಕ್ಕಿ ಖರೀದಿಗೆ ಪ್ರಯತ್ನ ನಡೆದಿದೆ. ಮುಂದಿನ ದಿನಗಳಲ್ಲಿ ಕೊಟ್ಟಭರವಸೆ ಈಡೇರಿಸಲಾಗುವುದು ಎಂದರು.
ಅಂಗನವಾಡಿ ಶಿಕ್ಷಕಿ ಮೇಲೆ ಪುಲ್ ಗರಂ: ಏಡುಮಡು ಗ್ರಾಮದಲ್ಲಿ ಅಂಗನವಾಡಿ ಪಕ್ಕದಲ್ಲಿ ಗಿಡ್ಡ ಬೆಳೆದು ಕಸದ ರಾಶಿ ಬಿದ್ದಿದ್ದು ಸ್ವಚ್ಛತೆಗೆ ಆಧ್ಯತೆ ಕೊಡಿ ಪಿಡಿಒಗೆ ತರಾಟೆಗೆ ತಗೆದುಕೊಂಡರು. ಏಡು ಮಡು ಗ್ರಾಮದ ಅಂಗನವಾಡಿ ಶಿಕ್ಷಕಿ ಮೇಲೆ ಗರಂ ಆದ ಇಕ್ಬಾಲ್ ರವರು, ಅಂಗನವಾಡಿಯ ಅಶುಚಿತ್ವವನ್ನು ಕಂಡು ಕುಪಿತಗೊಂಡು ಅಂಗನವಾಡಿ ಮುಂದೆಯೇ ಎಲ್ಲಂದರಲ್ಲಿ ಕಸ ಬಿಸಾಡಿ ಮತ್ತು ತ್ಯಾಜ್ಯಗಳನ್ನು ಸುಟ್ಟು ಹಾಕಿದ್ದೀರಿ ಕೂಡಲೇ ತ್ಯಾಜ್ಯ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕಾಂಗ್ರೆಸ್‌ನ ಮಾಯಾಯುದ್ಧದ ಗೆಲುವು ತಾತ್ಕಾಲಿಕ: ಸಿ.ಟಿ.ರವಿ
100 ದೇವಸ್ಥಾನಕ್ಕಿಂತ ಒಂದು ವಿದ್ಯಾಸಂಸ್ಥೆ ಮೇಲು: ವಡೇರಹಳ್ಳಿ ಗ್ರಾಮದ ಸುವರ್ಣ ಸಂಸ್ಕೃತಿ ಧಾಮಕ್ಕೆ ಭೇಟಿ ನೀಡಿದ ಶಾಸಕರು, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಮಕ್ಕಳು ಮನಸ್ಸು ಮಾಡಿದರೆ ಏನಾದರೂ ಸಾಧಿಸಬಹುದು. ಜೀವನದಲ್ಲಿ ಗುರಿ ಇರಬೇಕು. ವಿದ್ಯಾರ್ಥಿ ಜೀವನದಿಂದಲೇ ಗುರಿ ನಿಶ್ಚಯಿಸಿಕೊಳ್ಳಬೇಕು. ಸಂಸ್ಥೆಗೆ ಒಳ್ಳೆ ಹೆಸರು ತರಬೇಕು. ಪೋಷಕರ ಗೌರವವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ವಿದ್ಯೆಯೇ ಎಲ್ಲ. ಎಲ್ಲರಿಗೂ ಈ ಅವಕಾಶ ಸಿಗುವಿದಿಲ್ಲ. ಆಟ ಪಾಠ ಎಲ್ಲವು ಮುಖ್ಯ.ನಮ್ಮ ಸಂಸ್ಕೃತಿ ಉಳಿಸಿಕೊಳ್ಳಬೇಕು. 100 ದೇವಸ್ಥಾನಕ್ಕಿಂತ ಒಂದು ವಿದ್ಯಾ ಸಂಸ್ಥೆ ಮೇಲು. ಕಲ್ಲನ್ನು ಕೆತ್ತಿ ಶಿಲೆ ಮಾಡಿದಂತೆ. ಶಾಲೆಯೂ ನಿಮ್ಮ ಜೀವನಕ್ಕೆ ಒಂದು ರೂಪ ನೀಡುತ್ತದೆ ಎಂದು ಹೇಳಿದರು.
ವಿವಿಧ ಕಾಮಗಾರಿಗಳಿಗೆ ಚಾಲನೆ: ಕಗ್ಗಲ್ಲಹಳ್ಳಿ, ಬನವಾಸಿ ದ್ಯಾವಸಂದ್ರ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಜೆಜೆಎಂ, ಶಾಲಾ ಕೊಠಡಿ, ಸೇರಿದ್ದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಈ ವೇಳೆ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ ಶಾಸಕರು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಬಮುಲ್ ನಿರ್ದೇಶಕ ಹರೀಶ್ ಕುಮಾರ್, ಜೆಸಿಬಿ ಅಶೋಕ್, ಈಶ್ವರ್, ರಾಂಪುರ ರುದ್ರ, ರುದ್ರೇಶ್,ಕೇಬಲ್ ರವಿ, ಕಾಂಗ್ರೆಸ್ ಮುಖಂಡರು ಹಾಜರಿದ್ದರು
ಜೂ.28ರಿಂದ ಪ್ರತಿ ಕ್ಷೇತ್ರದಲ್ಲೂ ಕೆಂಪೇಗೌಡ ಜಯಂತಿ: ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್
ಕಳೆದ ಚುನಾವಣೆಯಲ್ಲಿ ನಾವು ಜೆಡಿಎಸ್ ಪರವಾಗಿ ಅನಿತಾ ಕುಮಾರಸ್ವಾಮಿ ಅವರಿಗೆ ಮತ ಕೇಳಿ ಸಹಾಯ ಮಾಡಿದ್ದೆವು. ಅದನ್ನು ಮರೆತಿರುವ ಮಾಜಿ ಸಿಎಂ ಕುಮಾರಸ್ವಾಮಿರವರು ಈಗ ಹತಾಶೆಯಿಂದ ಮಾತನಾಡುತ್ತಿದ್ದಾರೆ. ನಾನು ಒಬ್ಬ ರೈತನ ಮಗ. ನನಗೆ ಜನ ಅವಕಾಶ ಮಾಡಿ ಕೊಟ್ಟಿದ್ದಾರೆ. ನಮಗೆ ಕಾರ್ಡ್ ಕೊಡುವುದು ಗೊತ್ತು, ಗಿಫ್ಟ್ ಕೊಡುವುದು ಗೊತ್ತು.
- ಇಕ್ಬಾಲ್ ಹುಸೇನ್, ಶಾಸಕ, ರಾಮನಗರ ಕ್ಷೇತ್ರ.