ಬ್ಲೂ ಆರ್ಮಿ-ಮಾದಿಗರ ಧ್ವನಿ ಸಂಘಟನೆಗೆ ಶೂದ್ರ ಶ್ರೀನಿವಾಸ್‌ ರಾಜ್ಯಾಧ್ಯಕ್ಷ

By Kannadaprabha News  |  First Published Jun 23, 2023, 6:09 AM IST

ಬ್ಲೂ ಆರ್ಮಿ-ಮಾದಿಗರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಕಡೂರಿನ ಶೂದ್ರ ಶ್ರೀನಿವಾಸ್‌ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.


ಕಡೂರು (ಜೂ.23) : ಬ್ಲೂ ಆರ್ಮಿ-ಮಾದಿಗರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಕಡೂರಿನ ಶೂದ್ರ ಶ್ರೀನಿವಾಸ್‌ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಕಡೂರಿನ ಡಾ ಬಿ.ಆರ್‌.ಅಂಬೇಡ್ಕರ್‌(Dr BR Ambedkar) ಭವನದಲ್ಲಿ ನಡೆದ ದಲಿತ ಸಮುದಾಯ(Dalit community)ದ ಮುಖಂಡರ ಸಭೆಯಲ್ಲಿ ಸರ್ವಾನುಮತದಿಂದ ಬ್ಲೂ ಆರ್ಮಿ ಸಂಘಟನೆಯ ರಾಜ್ಯ ಸಮಿತಿ ಅಧ್ಯಕ್ಷಾ Üರಾಗಿ ತಾಲೂಕು, ಜಿಲ್ಲಾಮಟ್ಟದಲ್ಲೂ ಸಮಾಜದ ಪರವಾಗಿ ಹೋರಾಟ ನಡೆಸಿ ಡಿಎಸ್‌ಎಸ್‌ ಸಂಘಟನೆಯ ಮೈಸೂರು ವಿಭಾಗೀಯ ಮಟ್ಟದ ರಾಜ್ಯಸಂಚಾಲಕರಾಗಿಯೂ ಕಾರ್ಯ ನಿರ್ವಹಿಸಿರುವ ಶೂದ್ರ ಶ್ರೀನಿವಾಸ್‌ ಅವರನ್ನು ಬ್ಲೂ ಆರ್ಮಿ ಸಂಘಟನೆ ರಾಜ್ಯಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Tap to resize

Latest Videos

undefined

 

Chikkamagaluru: ಸರಕಾರಿ ಹಾಸ್ಟೆಲ್‌ನಲ್ಲಿ ಪಿಯುಸಿ ವಿದ್ಯಾರ್ಥಿನಿ ಗರ್ಭಿಣಿ, ವಾರ್ಡನ್ ವಜಾಕ್ಕೆ ದಲಿತ ಸಂಘಟನೆಗಳ ಆಗ್ರಹ

ಇದೇ ಸಂದರ್ಭದಲ್ಲಿ ಶೂದ್ರ ಶ್ರೀನಿವಾಸ್‌(Shudra srinivas) ಮಾತನಾಡಿ, ಶೋಷಿತ, ದಲಿತ, ಹಿಂದುಳಿದ ಮತ್ತು ಕೆಳ ಸ್ತರದ ಸಮುದಾಯಗಳಿಗೆ ಸಿಗಬೇಕಿರುವ ಹಕ್ಕು, ಸವಲತ್ತು ನೀಡಿಕೆ ಮತ್ತು ದೌರ್ಜನ್ಯದ ವಿರುದ್ದದ ಹೋರಾಟಗಳನ್ನು ಎಲ್ಲ ಮುಖಂಡರ ಜೊತೆ ಮಾಡುತ್ತಾ ಬರುತ್ತಿದ್ದೇನೆ ಎಂದರು.

ಈ ನಿಟ್ಟಲ್ಲಿ ರಾಜ್ಯದ ಗಮನ ಸೆಳೆಯದ ದಲಿತ ಸಮುದಾಯಗಳ ಶೋಷಣೆಗೆ ಕಡಿವಾಣ ಹಾಕಿ ಸಾಮಾಜಿಕ ನ್ಯಾಯ ಒದಗಿಸಲು ದಲಿತ ಸಮುದಾಯಗಳ ಪರವಾಗಿ ಹಾಗು ರಾಜ್ಯಮಟ್ಟದ ದಲಿತರ ಧ್ವನಿಯಾಗುವ ಬ್ಲೂ ಆಮಿ}ಯ ರಾಜ್ಯ ಘಟಕದ ಸಮಿತಿಯ ಅಧ್ಯಕ್ಷರಾಗಿ ತಮ್ಮನ್ನು ಮುಖಂಡರು ಆಯ್ಕೆ ಮಾಡಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಹೋರಾಟದ ಮೂಲಕ ಕಾಯ} ನಿವ}ಹಿಸುತ್ತೇನೆ ಎಂದರು.

ಬ್ಲೂ ಆರ್ಮಿ(Blue Army) ಸಂಘಟನೆಯ ರಾಜ್ಯ, ಜಿಲ್ಲಾ-ತಾಲೂಕು ಘಟಕಗಳಿಗೆ ಆಯ್ಕೆಯಾದ ಪದಾಧಿಕಾರಿಗಳು

ರಾಜ್ಯ ಘಟಕ: ಅಧ್ಯಕ್ಷ ಶೂದ್ರ ಶ್ರೀನಿವಾಸ್‌, ಕಾರ್ಯಾಧ್ಯಕ್ಷ ಬಿ.ರುದ್ರಪ್ಪ, ಉಪಾಧ್ಯಕ್ಷ ಹುಲ್ಲೇಹಳ್ಳಿ ಲಕ್ಷ್ಮ,ಣ, ಸಗುನಪ್ಪ ಪಟ್ಟಣಗೆರೆ, ಬಾಸೂರು ಸುರೇಶ, ನಾಗರಾಜ್‌ ಸಖರಾಯ ಪಟ್ಟಣ. ಕಾರ್ಯಕಾರಿ ಸದಸ್ಯರಾಗಿ ತಂಗಲಿ ರಾಘವೇಂದ್ರ, ಕೇದಿಗೆರೆ ಬಸವರಾಜ, ಬಾಸೂರು ಪ್ರಸನ್ನ, ಕಡೂರಹಳ್ಳಿ ಪ್ರಶಾಂತ್‌, ಶಾಂತಮೂರ್ತಿ, ಹು.ತಿ. ಗೋವಿಂದಪ್ಪ, ಖಜಾಂಚಿ ಕೆ.ರಂಗಸ್ವಾಮಿ ಕಡೂರಹಳ್ಳಿ ಆಯ್ಕೆಯಾದರು.

ಜಿಲ್ಲಾ ಘಟಕ: ಜಿಲ್ಲಾಧ್ಯಕ್ಷ ಕೆ.ವೈ.ವಾಸು, ಕಾರ್ಯಾಧ್ಯಕ್ಷ ವೈ.ಟಿ.ಗೋವಿಂದಪ್ಪ, ಕಡೂರು, ಉಪಾಧ್ಯಕ್ಷ ಈಶಣ್ಣ ಬೀರೂರು, ಹಾಲಪ್ಪ ಉದ್ದೇಬೋರನಹಳ್ಳಿ, ಚಂದ್ರಶೇಖರ್‌ ಚಿಕ್ಕಂಗಳ,ಪ್ರಕಾಶ್‌ ಎಮ್ಮೇದೊಡ್ಡಿ, ಸಂಘಟನಾ ಕಾರ್ಯದರ್ಶಿಗಳು ನಂಜುಂಡ ಕಡೂರು, ದರ್ಶನ್‌ ಬಳ್ಳಿಗನೂರು, ಬಸವರಾಜು ಹಿರೇನಲ್ಲೂರು, ಗಣೇಶ್‌ ಆಸಂದಿ, ಖಜಾಂಚಿ ತಿಮ್ಮ ಯ್ಯ ಮಲ್ಲೇಶ್ವರ ಆಯ್ಕೆ ಆಗಿದ್ದಾರೆ.

ಕೋಲಾರ ಸಂಸದರು, ಪೊಲೀಸರಿಂದ ಕಿರುಕುಳ: ಅಂಬೇಡ್ಕರ್‌ ಸಂಘಟನೆಯ ಸಂದೇಶ್ ಆತ್ಮಹತ್ಯೆಗೆ ಯತ್ನ

ತಾಲ್ಲೂಕು ಘಟಕ: ಅಧ್ಯಕ್ಷ ಗಂಗರಾಜು, ಕಾರ್ಯಾಧ್ಯಕ್ಷ ಕಸವನಹಳ್ಳಿ ಬಸವರಾಜು, ಉಪಾಧ್ಯಕ್ಷ ದೇವರಾಜ್‌ ಪಟ್ಟಣಗೆರೆ, ಯೋಗೀಶ್‌ ಹುಲಿಕೆರೆ, ವೆಂಕಟೇಶ್‌ ದೊಡ್ಡಘಟ್ಟ, ರಘು ಚಿಕ್ಕಂಗಳ. ಸಂಘಟನಾ ಕಾರ್ಯದರ್ಶಿಗಳಾಗಿ ಪರಮೇಶ್‌ ಪಟ್ಟಣಗೆರೆ, ಮಧು ಗರುಗದಹಳ್ಳಿ, ಚಂದ್ರಶೇಖರ್‌ ಕಡೂರು, ಕುಮಾರ ಯಗಟಿ, ಚಂದ್ರಪ್ಪ ಕೆದಿಗೆರೆ, ಜಗದೀಶ್‌ ಕಡೂರಹಳ್ಳಿ ಮತ್ತು ಖಜಾಂಚಿಯಾಗಿ ರಮೇಶ್‌ ಚಿಕ್ಕಂಗಳ ಆಯ್ಕೆಯಾಗಿದ್ದಾರೆ.

click me!