ತಾಲೂಕಿನ ಭಟಪ್ಪನಹಳ್ಳಿಯಲ್ಲಿ ನಡೆದ ಶಾಸಕ ಬಸವರಾಜ ರಾಯರಡ್ಡಿ ಅವರ ಜನಸಂಪರ್ಕ ಸಭೆಗೆ ಭದ್ರತೆ ಹಾಜರಾಗದೆ ನಿರ್ಲಕ್ಷ್ಯ ತೋರಿದ ಕುಕನೂರು ಪೊಲೀಸ್ ಠಾಣೆಯ ಮೂವರು ಪೊಲೀಸರನ್ನು ಕೊಪ್ಪಳ ಎಸ್ಪಿ ಯಶೋದಾ ವಂಟಗೂಡಿ ಸಸ್ಪೆಂಡ್ ಮಾಡಿದ್ದಾರೆ.
ಕುಕನೂರು (ಜೂ.23) ತಾಲೂಕಿನ ಭಟಪ್ಪನಹಳ್ಳಿಯಲ್ಲಿ ನಡೆದ ಶಾಸಕ ಬಸವರಾಜ ರಾಯರಡ್ಡಿ ಅವರ ಜನಸಂಪರ್ಕ ಸಭೆಗೆ ಭದ್ರತೆ ಹಾಜರಾಗದೆ ನಿರ್ಲಕ್ಷ್ಯ ತೋರಿದ ಕುಕನೂರು ಪೊಲೀಸ್ ಠಾಣೆಯ ಮೂವರು ಪೊಲೀಸರನ್ನು ಕೊಪ್ಪಳ ಎಸ್ಪಿ ಯಶೋದಾ ವಂಟಗೂಡಿ ಸಸ್ಪೆಂಡ್ ಮಾಡಿದ್ದಾರೆ.
ಭಟಪ್ಪನಹಳ್ಳಿ ಗ್ರಾಮದಲ್ಲಿ ಕೆಲ ಜನರು ಶಾಸಕ ರಾಯರಡ್ಡಿ(Basavaraj Rayaraddy MLA) ಅವರ ಜನಸಂಪರ್ಕ ಸಭೆ ಮುಗಿಸಿ ತೆರಳುತ್ತಿರುವಾಗ ವ್ಯಕ್ತಿಯೊಬ್ಬ ಮನವಿ ಸಲ್ಲಿಸಲು ಬಂದು, ಏರುಧ್ವನಿಯಲ್ಲಿ ಮನವಿ ತೆಗೆದುಕೊಳ್ಳಿ, ಸಮಸ್ಯೆ ಬಗೆಹರಿಸಿ ಎಂದು ಮಾತನಾಡಿದ್ದಾನೆ. ಆಯ್ತು ಮನವಿ ನೀಡು ಎಂದು ಶಾಸಕರು ಸಮಾಧಾನ ಮಾಡಿದ್ದಾರೆ. ಆದರೆ ಶಾಸಕರ ಮಾತಿಗೆ ಬೆಲೆ ನೀಡದೆ ಆ ವ್ಯಕ್ತಿ ಬಾಯಿ ಜೋರು ಮಾಡಿದ್ದಾನೆ. ವ್ಯಕ್ತಿಯ ಬಾಯಿಗೆ ಆತನ ಬೆಂಬಲಿಗೆ ಕೆಲವರು ಬಂದು ಶಾಸಕರ ಕಾರಿನ ಬಾನಟ್ಟಿಗೆ ಕೈಯಿಂದ ಬಡೆದಿದ್ದಾರೆ.
undefined
ಪ್ರಧಾನಿ ಮೋದಿ ಆಡಳಿತದಿಂದ ಜನ ಭ್ರಮಾನಿರಸ: ಶಾಸಕ ರಾಯರಡ್ಡಿ ಟೀಕೆ
ಶಾಸಕರ ಕಾರ್ ಡ್ರೈವರ್ ಕೆಳಗಿಳಿದು ಯಾಕಪ್ಪ ಎಂದು ಕೇಳಿದ್ದಾನೆ. ಆ ಜನರು ಜೋರು ಧ್ವನಿಯಲ್ಲಿ ಕೂಗುತ್ತಾ ತೆರಳಿದ್ದಾರೆ. ಘಟನೆ ಸ್ಥಳದಲ್ಲಿ ಜನಸಂಪರ್ಕ ಸಭೆಗೆ ನೇಮಿಸಿದ್ದ ಪೊಲೀಸರು ಹಾಜರಾಗದೆ ನಿರ್ಲಕ್ಷ್ಯ ಮಾಡಿದ ಕಾರಣ ಎಸ್ಪಿ ಯಶೋದಾ ವಂಟಗೂಡಿ(SP Yashoda vantagudi) ಎಎಸ್‌ಐ ವಿರೂಪಯ್ಯ(ASI Virupakshayya), ಹೆಡ್ ಕಾನ್‌ಸ್ಟೆಬಲ್ ಹನುಮಂತಪ್ಪ(Head constable hanamantappa), ಪೊಲೀಸ್ ಕಾನ್‌ಸ್ಟೆಬಲ್ ವಿಶ್ವನಾಥ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿದ್ದಾರೆ. ಶಾಸಕರ ಜನಸಂಪರ್ಕ ಸಭೆಯಲ್ಲಿ ನಿರ್ಲಕ್ಷ್ಯ ತೋರಿದ ಕಾರಣ ಸಸ್ಪಂಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಗಲಾಟೆ ಮಾಡಿದ ಏಳು ಜನರನ್ನು ಕುಕನೂರು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಆದರೆ ಅವರು ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿಲ್ಲ.
ನನಗೆ ಮಂತ್ರಿ ಸ್ಥಾನಕ್ಕಿಂತ ಸಿದ್ದರಾಮಯ್ಯ ಸಿಎಂ ಆಗಿದ್ದು ಸಂತಸ ತಂದಿದೆ: ಶಾಸಕ ರಾಯರಡ್ಡಿ