ನಾವ್ಯಾರೆಂದು ನಮಗೆ ಅರಿವಾದರೆ, ಬದುಕು ಸಾರ್ಥಕ: ಎಂಟಿಬಿ ನಾಗರಾಜ್

By Kannadaprabha News  |  First Published Dec 9, 2023, 8:23 PM IST

ಮನುಷ್ಯ ನಾನು, ನನ್ನದು ಎಂಬ ಅಹಂ ಮನೋಭಾವದಿಂದ ಬದುಕುತ್ತಿದ್ದು ಮೊದಲು ನಾವ್ಯಾರೆಂದು ನಮಗೆ ಅರಿವಾಗಬೇಕು. ಆಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
 


ಹೊಸಕೋಟೆ (ಡಿ.09): ಮನುಷ್ಯ ನಾನು, ನನ್ನದು ಎಂಬ ಅಹಂ ಮನೋಭಾವದಿಂದ ಬದುಕುತ್ತಿದ್ದು ಮೊದಲು ನಾವ್ಯಾರೆಂದು ನಮಗೆ ಅರಿವಾಗಬೇಕು. ಆಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. ತಾಲೂಕಿನ ಹಳೇವೂರು ಗ್ರಾಮದಲ್ಲಿ ಕನಕದಾಸರ 536ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ನಾನು ನನ್ನದು ಎಂಬ ಹಂಬಲ ಸುಮ್ಮನೇ ಅಳಿಯುವುದಿಲ್ಲ. ಪರಮಾತ್ಮನ ದಯೆ ಇರಬೇಕು ಎಂದು ತಮ್ಮ ಕೀರ್ತನೆಯಲ್ಲಿ ಕನಕದಾಸರು ದಾಸರ ಕೀರ್ತನೆಗಳ ವೈಶಿಷ್ಟ್ಯವೆಂದರೆ ಸರಳ ಭಾಷೆಯಲ್ಲಿ ವಿಷಯ ಜನರಿಗೆ ಮನಮುಟ್ಟುವಂತೆ ತಿಳಿಸುವುದು. 

ಕನಕದಾಸರ ಆದರ್ಶದ ಹೊತ್ತಿಗೆಯಲ್ಲಿ ಬಿಡಿಸಿ ಎಣಿಸಿ ಪೋಣಿಸಿದ ಪದಗಳನ್ನು ಅಥೈಸಿಕೊಂಡರಷ್ಟೇ ನಾವಾರೆಂದು ನಮಗರಿವಾಗುವುದು. ಕನಕದಾಸರು ಯಾವುದೋ ಒಂದು ಜಾತಿಗೆ ಸೀಮಿತರಲ್ಲ. ಕನ್ನಡ ಭಾಷಾ ಚಿಂತಕರಾಗಿ ಕನ್ನಡಿಗರ ಬದುಕುಗಳ ನಡುವಿನ ಬಿಕ್ಕಟ್ಟೊಳಗಿಂದ ಹುಟ್ಟಿದ, ನೊಂದ ಬದುಕುಗಳ ನಡುವಿನಿಂದ ಮೇಲೆದ್ದು ಬಂದ ಅಪರೂಪದ ಸಂತ ಕನಕದಾಸರು. ಗಯಾ, ಮಥುರಾ, ಕಾಶಿ, ದ್ವಾರಕಾ, ಮೊದಲಾಗಿ ರಾಜಸ್ಥಾನ, ತಮಿಳುನಾಡು, ಆಂಧ್ರವನ್ನು ಸುತ್ತಿ ಬಂದವರು, 

Tap to resize

Latest Videos

undefined

ನಾನು ದೂರ ಹೋಗುವವರೆಗೆ ನನ್ನನ್ನ ನೋಡಿದ್ದರು: ಮೊದಲ ಬಾರಿಗೆ ಲೀಲಾವತಿ ಬಗ್ಗೆ ಮೊಮ್ಮಗ ಯುವರಾಜ್ ಪ್ರತಿಕ್ರಿಯೆ!

ಯಾವುದೇ ಮತಕ್ಕೆ ಕಟ್ಟು ಬೀಳದೆ ಸರ್ವಮತಗಳ ಒಳಿತನ್ನು ಪಡೆದು ಸ್ವಂತ ವ್ಯಕ್ತಿತ್ತ್ವವನ್ನು ಜನಹಿತಕ್ಕಾಗಿ ಬೆಳೆಸಿಕೊಂಡು ಬಾಳಿದವರು ಎಂದರು. ಬಮುಲ್ ನಿರ್ದೇಶಕ ಹುಲ್ಲೂರು ಮಂಜುನಾಥ್ ಮಾತನಾಡಿ, ದಾಸ ಪರಂಪರೆಯಲ್ಲಿ ಕನಕದಾಸರು ಶ್ರೇಷ್ಠ ದಾಸರಾಗಿದ್ದು, ತಮ್ಮದೇ ಆದ ಸರಳ ಕೀರ್ತನೆಗಳ ಮೂಲಕ ಸಮಾಜದ ಉನ್ನತಿಗೆ ಶ್ರಮಿಸಿದದವರು. ಅವರ ಕೀರ್ತನೆಗಳು ಸರಳವಾಗಿದ್ದು ಆಗಾಧವಾದ ಅರ್ಥವನ್ನು ಅಡಗಿಸಿಕೊಂಡಿದೆ. ಪ್ರತಿಯೊಬ್ಬ ಮನುಷ್ಯ ಕನಕದಾಸರ ಕೀರ್ತನೆಗಳನ್ನು ಓದಿ ಅರ್ಥೈಸಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಿಪಂ ಮಾಜಿ ಸದಸ್ಯ ನಾಗರಾಜ. ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್, ಬಿಜೆಪಿ ಉಪಾಧ್ಯಕ್ಷ ಎನ್.ಚಂದ್ರಪ್ಪ. ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಸುರೇಶ್, ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಬನಹಳ್ಳಿ ರಮೇಶ್, ಗ್ರಾಪಂ ಮಾಜಿ ಸದಸ್ಯ. ಅಶ್ವಥ್, ಮುಖಂಡರಾದ ಸುಬ್ರಹ್ಮಣಿ, ರಾಮಕೃಷ್ಣ, ಉತ್ತನಾಳಪ್ಪ, ಬನಹಳ್ಳಿ ಕೃಷಮೂರ್ತಿ, ಕಲ್ಲಪ್ಪ ಹಾಜರಿದ್ದರು.

ಇದೇ ಕಾರಣಕ್ಕೆ 10 ವರ್ಷದಲ್ಲಿ 8ಕ್ಕೂ ಹೆಚ್ಚು ಕಾಡಾನೆಗಳ ಸಾವು!

ಹಳೆ ಚಾಳಿ ಮುಂದುವರೆಸಿದ್ರೆ ಸಹಿಸಲ್ಲ: ಹಳೇವೂರು ಗ್ರಾಮದಲ್ಲಿ ನಾನು ಶಾಸಕನಾಗಿ, ಸಚಿವನಾಗಿದ್ದ ಸಂದರ್ಭದಲ್ಲಿ 77 ಬಡ ಕುಟುಂಬಗಳಿಗೆ 94ಸಿ ಅಡಿಯಲ್ಲಿ ಹಕ್ಕು ಪತ್ರ ಕೊಡಿಸಿದ್ದೇನೆ. ಈಗ ಆ ಕುಟುಂಬಗಳಿಗೆ ಈ ಸ್ವತ್ತು ಮಾಡಲು ತೊಂದರೆ ಕೊಡುತ್ತಿದ್ದಾರೆಬ ದೂರುಗಳು ಕೇಳಿಬಂದಿದೆ. ನಿಮ್ಮದೆ ಸರ್ಕಾರ ಇದೆ, ಬಡವರಿಗೆ ಒಳ್ಳೆಯ ಕೆಲಸ ಮಾಡಿ. ವಿನಾಕಾರಣ ತೊಂದರೆ ಕೊಡುವ ಹಳೆ ಚಾಳಿ ಮುಂದುವರೆಸಿದರೆ ನಾನು ಸಹಿಸಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಎಚ್ಚರಿಕೆ ನೀಡಿದರು.

click me!