ಸಮಿತಿ ವರದಿ ನೀಡಿದ್ದು ವೈದ್ಯರ ನಿರ್ಲಕ್ಷ್ಯದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಾಲಕನನ್ನು ಸರಿಯಾಗಿ ಮಾನಿಟರ್ ಮಾಡಿಲ್ಲ ಶಸ್ತ್ರಚಿಕಿತ್ಸೆ ನಂತರ ಅಸಮರ್ಪಕ ನಿರ್ವಹಣೆ ಎಂದು ವರದಿ ಹೇಳಿದ್ದು ಈ ಹಿನ್ನಲೆಯಲ್ಲಿ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವರದಿ - ಪುಟ್ಟರಾಜು. ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ಡಿ.09): ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಸಾವನ್ನಪ್ಪಿರುವ ಆರೋಪದ ಮೇರೆಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಜನನಿ ಆಸ್ಪತ್ರೆಯ ಇಬ್ಬರು ವೈದ್ಯರು ಹಾಗೂ ವ್ಯವಸ್ಥಾಪಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
undefined
ಆಸ್ಪತ್ರೆಯ ಸರ್ಜನ್ ಡಾ.ಶಿವಕಿಶೋರ್, ಅರವಳಿಕೆ ತಜ್ಞ ಡಾ.ಸ್ಯಾಮಸನ್ ಹಾಗು ವ್ಯವಸ್ಥಾಕ ಪ್ರವೀಣ್ ವಿರುದ್ಧ ಐಪಿಸಿ ಸೆಕ್ಷನ್ 304(ಎ) ರ ಪ್ರಕಾರ ಮೊಕದ್ದಮೆ ಹೂಡಲಾಗಿದೆ. ಅಪೆಂಡೆಕ್ಸ್ ಹಿನ್ನಲೆಯಲ್ಲಿ ಬಾಲಕನೊನ್ನ ಸೆ. 2 ರಂದು ಜನನಿ ಆಸ್ಪತ್ರೆಗೆ ದಾಖಲಾಗಿದ್ದ. ಆಪರೇಷನ್ ಮಾಡಿದ ವೈದ್ಯರು ಆಪರೇಷನ್ ಯಶಸ್ವಿಯಾಗಿದೆ ಎಂದು ತಿಳಿಸಿದ್ದರು. ನಂತರ ಉಸಿರಾಟದ ತೊಂದರೆಯಿಂದ ಬಾಲ ಸಾವನ್ನಪ್ಪಿದ್ದಾನೆ ಎಂದು ಬಾಲಕನ ಪೋಷಕರಿಗೆ ತಿಳಿಸಿದ್ದರು.
ಚಾಮರಾಜನಗರ: ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಕಾಮುಕನ ಬಂಧನ
ಆದರೆ ಶಸ್ತ್ರ ಚಿಕಿತ್ಸೆಗೆ ಮೊದಲು ಸರಿಯಾದ ಅರವಳಿಕೆ ಚುಚ್ಚುಮದ್ದು ಕೊಟ್ಟಿಲ್ಲ ವೈದ್ಯರ ನಿರ್ಲಕ್ಷ್ಯದಿಂದ ಬಾಲಕನ ಸಾವಾಗಿದ್ದು ಕೂಡಲೇ ವೈದ್ಯರ ವಿರುದ್ಧ ಕ್ರಮ ಜರುಗಿಸುವಂತೆ ಕೊಳ್ಳೇಗಾಲ ಪೊಲೀಸರಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಪ್ರಕರಣದ ಸತ್ಯಾಸತ್ಯೆತೆ ವರದಿ ನೀಡಲು ಸಿಮ್ಸ್ ತಜ್ಞ ವೈದ್ಯರ ಸಮಿತಿ ರಚನೆ ಮಾಡಲಾಗಿತ್ತು.
ಇದೀಗ ಈ ಸಮಿತಿ ವರದಿ ನೀಡಿದ್ದು ವೈದ್ಯರ ನಿರ್ಲಕ್ಷ್ಯದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಾಲಕನನ್ನು ಸರಿಯಾಗಿ ಮಾನಿಟರ್ ಮಾಡಿಲ್ಲ ಶಸ್ತ್ರಚಿಕಿತ್ಸೆ ನಂತರ ಅಸಮರ್ಪಕ ನಿರ್ವಹಣೆ ಎಂದು ವರದಿ ಹೇಳಿದ್ದು ಈ ಹಿನ್ನಲೆಯಲ್ಲಿ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.