ಜಮೀನು ರೈತರಿಗೆ ವಾಪಸ್‌ ನೀಡಿದಿದ್ದರೆ ನಾನೇ ನಿಂತು ಉಳುವೆ ಮಾಡುವೆ: ಶಾಸಕ ಈ. ತುಕಾರಾಮ

By Kannadaprabha News  |  First Published Jan 8, 2023, 12:53 PM IST

ಕಾರ್ಖಾನೆ ಅಭಿವೃದ್ಧಿಯ ಹೆಸರಲ್ಲಿ ರೈತರಿಂದ ಜಮೀನು ವಶಪಡಿಸಿಕೊಂಡು 12 ವರ್ಷಗಳಾಗಿವೆ.ಇದುವರೆಗೂ ಕಾರ್ಖಾನೆ ಸ್ಥಾಪನೆಗೊಂಡಿಲ್ಲ.ಕೆಲ ಕಂಪನಿಯವರು ವಶಪಡಿಸಿಕೊಂಡ ಜಮೀನನ್ನು ಅಕ್ರಮವಾಗಿ ಹೆಚ್ಚಿನ ದರಕ್ಕೆ ಬೇರೇ ಕಂಪನಿಗೆ ಮಾರಾಟ ಮಾಡಿ ರೈತರಿಗೆ ಹಾಗೂ ಸರ್ಕಾರಕ್ಕೆ ದ್ರೋಹವೆಸಗಿದ್ದಾರೆ. ಒಂದು ವೇಳೆ ವಾಪಸ್‌ ನೀಡದಿದ್ದರೆ ನಿಮ್ಮ ಹೋರಾಟಕ್ಕೆ ನನ್ನ ಬೆಂಬಲ ನೀಡಿ, ನಿಮ್ಮೊಂದಿಗೆ ನಿಮ್ಮ ಜಮೀನುಗಳಲ್ಲಿ ಮಡಿಕೆ ಹೊಡಿಯುತ್ತೇನೆ ಎಂದ ಶಾಸಕರು.


ಕುರುಗೋಡು (ಜ.8) : ಆರು ತಿಂಗಳಲ್ಲಿ ರೈತರ ಜಮೀನು ವಾಪಸ್‌ ನೀಡದಿದ್ದಲ್ಲಿ ಸ್ವಂತ ನಾನೇ ಮುಂದೆ ನಿಂತು ಜಮೀನು ಉಳುಮೆ ಮಾಡುವೆ ಎಂದು ಶಾಸಕ ಈ.ತುಕಾರಾಂ ರೈತರಿಗೆ ಭರವಸೆ ನೀಡಿದರು. ಸಮೀಪದ ಕುಡತಿನಿ ಪಟ್ಟಣದಲ್ಲಿ ರೈತರ ಜಮೀನು ಕಾರ್ಖಾನೆಗಳ ಮಾಲೀಕರು ವಶಪಡಿಸಿಕೊಂಡ ಹಿನ್ನೆಲೆ ಭೂಮಿ ಕಳೆದುಕೊಂಡ ಸಂತ್ರಸ್ತರು ಮತ್ತು ವಿವಿಧ ಸಂಘಟನೆ ಮುಖಂಡರು ಹಾಗೂ ಪಟ್ಟಣದ ಸಾರ್ವಜನಿಕರು ಸುಮಾರು 20 ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು.

ಕುಡತಿನಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವಿವಿಧ ಭಾಗದಲ್ಲಿ ಸುಮಾರು ವರ್ಷಗಳಿಂದ ಕಾರ್ಖಾನೆಗಳು ರೈತರ ಜಮೀನು ವಶಪಡಿಸಿಕೊಂಡಿವೆ. ಆದರೆ ಕಾರ್ಖಾನೆಗಳು ಪ್ರಾರಂಭವಾಗದೆ ಸ್ಥಳೀಯರಿಗೆ ಉದ್ಯೋಗ ನೀಡದೆ ಮೋಸ ಮಾಡಿವೆ ಎಂದರು.

Latest Videos

undefined

AGRICULTURE: ಭತ್ತ ನಾಟಿಗೆ ಅನ್ನದಾತರಿಂದ ಕೂಲಿ ಕಾರ್ಮಿಕರ ಹುಡುಕಾಟ

ಕಾರ್ಖಾನೆ ಅಭಿವೃದ್ಧಿಯ ಹೆಸರಲ್ಲಿ ರೈತರಿಂದ ಜಮೀನು ವಶಪಡಿಸಿಕೊಂಡು 12 ವರ್ಷಗಳಾಗಿವೆ.ಇದುವರೆಗೂ ಕಾರ್ಖಾನೆ ಸ್ಥಾಪನೆಗೊಂಡಿಲ್ಲ.ಕೆಲ ಕಂಪನಿಯವರು ವಶಪಡಿಸಿಕೊಂಡ ಜಮೀನನ್ನು ಅಕ್ರಮವಾಗಿ ಹೆಚ್ಚಿನ ದರಕ್ಕೆ ಬೇರೇ ಕಂಪನಿಗೆ ಮಾರಾಟ ಮಾಡಿ ರೈತರಿಗೆ ಹಾಗೂ ಸರ್ಕಾರಕ್ಕೆ ದ್ರೋಹವೆಸಗಿದ್ದಾರೆ. ಈ ವಿಷಯವನ್ನು ಈಗಾಗಲೇ ಕಳೆದ ತಿಂಗಳ ನಡೆದ ವಿಧಾನಸಭಾ ಸಭೆಯಲ್ಲಿ ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾಪಿಸಿದ್ದೇನೆ. 6 ತಿಂಗಳಲ್ಲಿ ರೈತರ ಜಮೀನು ವಾಪಸ್‌ ನೀಡುವುದಾಗಿ ತಿಳಿಸಿದ್ದಾರೆ.

ಒಂದು ವೇಳೆ ವಾಪಸ್‌ ನೀಡದಿದ್ದರೆ ನಿಮ್ಮ ಹೋರಾಟಕ್ಕೆ ನನ್ನ ಬೆಂಬಲ ನೀಡಿ, ನಿಮ್ಮೊಂದಿಗೆ ನಿಮ್ಮ ಜಮೀನುಗಳಲ್ಲಿ ಮಡಿಕೆ ಹೊಡಿಯುತ್ತೇನೆ ಎಂದ ಅವರು, ಹೋರಾಟ ಮನೋಭಾವನೆಯಿಂದ ಮಾತ್ರ ಇತಂಹ ಹೋರಾಟ ಮಾಡಲು ಸಾಧ್ಯ, ನಾನು ಕೂಡ ಮೊದಲು ಹೋರಾಟ ಮಾಡಿಕೊಂಡು ಬಂದಿದ್ದೇನೆ ಇದರಿಂದ ನಾನು 3ಬಾರಿ ಶಾಸಕನಾಗಿದ್ದೇನೆ ಎಂದರು.

ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ಆಶ್ವಾಸನೆಗೂ ಮಣೆಯದೇ ಪ್ರತಿಭಟನೆ ಮುಂದುವರೆಸಿದ್ದು, ಇದೆ ವೇಳೆ ವಿವಿಧ ಸಂಘಟನೆಯ ಮುಖಂಡರು ಮಾತನಾಡಿ, ಕುಡತಿನಿ ಪಟ್ಟಣದ ಮಿತ್ತಲ್‌,ಉತ್ತಮ್‌ ಗಾಲ್ವಾ ಹಾಗೂ ಎನ್‌ಎಂಡಿಸಿ ಕಂಪನಿಗಳು 2010ರಲ್ಲಿ 13 ಸಾವಿರ ಎಕರೆ ಜಮೀನು ವಶಪಡಿಸಿಕೊಂಡು 12 ವರ್ಷ ಕಳೆದರೂ ಕಾರ್ಖಾನೆ ಪ್ರಾರಂಭವಾಗದೆ ಮತ್ತು ಉದ್ಯೋಗ ನೀಡದೇ ಹಾಗೂ ರೈತರಿಗೆ ಉಳುಮೆ ಮಾಡಲು ಮರು ಜಮೀನು ನೀಡದೆ ಅನ್ಯಾಯ ಎಸಗಿದ್ದಾರೆ. ಸರ್ಕಾರ ಕೂಡಲೇ ಕಾರ್ಖಾನೆ ಸ್ಥಾಪಿಸಬೇಕು ಇಲ್ಲವೇ ನಮ್ಮ ಜಮೀನು ವಾಪಸ್‌ ನೀಡಬೇಕು ಎಂದು ಆಗ್ರಹಿಸಿದರು.

ರಾಗಿ ರೈತರಿಗೆ ವರ್ತಕರು, ಅಧಿಕಾರಿಗಳ ಧೋಖಾ?: ಕೃಷಿ ಇಲಾಖೆಗೆ ರೈತರ ದೂರು

ಕಂಪನಿಗಳು ಬಂದ್‌ ಆಗಿರುವುದರಿಂದ ರೈತರ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ, ಇದನ್ನೇ ನಂಬಿಕೊಂಡ ರೈತರು ಬೀದಿಗೆ ಬಂದಿದ್ದಾರೆ. ಒಂದು ಹೊತ್ತು ಊಟಕ್ಕೂ ಇಲ್ಲದೆ ಪರದಾಡುತ್ತಿದ್ದಾರೆ. ಇನ್ನೂ ಕೆಲ ರೈತರು ಇದರಿಂದ ಮೋಸ ಹೋಗಿ ಜೀವನ ನಿರ್ವಹಣೆಗೆ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿ ಜೀವನ ಮಾಡುವಂತ ಪರಿಸ್ಥಿತಿ ಬಂದೋಗಿದೆ. ಇದರ ಬಗ್ಗೆ ಅನೇಕ ವರ್ಷ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ ಮತ್ತು ಮಾಲೀಕರು ಇತ್ತ ಕಡೆ ತಲೆ ಹಾಕದೆ ಮೌನವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಪತ್‌ ಕುಮಾರ್‌, ಜಂಗಲಿ ಸಾಬ್‌, ದರೋಜಿ ರಾಮಣ್ಣ, ಬಾವಿ ಶಿವಕುಮಾರ್‌, ತಿಪ್ಪೇಶ, ಇತರರಿದ್ದರು.

click me!