ಹಿಂಗಾರು ಹಂಗಾಮಿನ ಬೆಳೆಯಲ್ಲಿ ಪ್ರಮುಖವಾದ ಎಣ್ಣೆಕಾಳು ಬೆಳೆಯಾದ ಕುಸುಬೆ ಬೆಳೆಗೆ ಈಗ ಸೀರು ರೋಗ ಕಾಣಿಸಿಕೊಂಡು ರೈತರ ಆದಾಯಕ್ಕೆ ಕುತ್ತು ತಂದಿದೆ. ಸೀರು ರೋಗ ಬಾಧೆಯಿಂದ ಬೆಳೆಗೆ ಸಿಗಬೇಕಾದ ಪೋಷಕಾಂಶಗಳು ಸಿಗದೆ ಕಾಳುಗಳ ಗುಣಮಟ್ಟಕಡಿಮೆಯಾಗುವ ಸಂಭವ ಹೆಚ್ಚಾಗಿರುತ್ತದೆ.
ಅಶೋಕ ಸೊರಟೂರ
ಲಕ್ಷ್ಮೇಶ್ವರ (ಜ.8) : ಹಿಂಗಾರು ಹಂಗಾಮಿನ ಬೆಳೆಯಲ್ಲಿ ಪ್ರಮುಖವಾದ ಎಣ್ಣೆಕಾಳು ಬೆಳೆಯಾದ ಕುಸುಬೆ ಬೆಳೆಗೆ ಈಗ ಸೀರು ರೋಗ ಕಾಣಿಸಿಕೊಂಡು ರೈತರ ಆದಾಯಕ್ಕೆ ಕುತ್ತು ತಂದಿದೆ. ಸೀರು ರೋಗ ಬಾಧೆಯಿಂದ ಬೆಳೆಗೆ ಸಿಗಬೇಕಾದ ಪೋಷಕಾಂಶಗಳು ಸಿಗದೆ ಕಾಳುಗಳ ಗುಣಮಟ್ಟಕಡಿಮೆಯಾಗುವ ಸಂಭವ ಹೆಚ್ಚಾಗಿರುತ್ತದೆ.
undefined
ತಾಲೂಕಿನಲ್ಲಿ ಈಗ ಕುಸುಬೆ ಬೆಳೆಗೆ ಸೀರು ರೋಗ ಕಾಣಿಸಿಕೊಂಡಿರುವುದು ರೈತರ ಚಿಂತೆಗೆ ಕಾರಣವಾಗಿದೆ. ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ಕುಸುಬೆ ಬೆಳೆಯಲಾಗಿದೆ. ಕುಸುಬೆ ಬೆಳೆಯಲ್ಲಿ ಮುಳ್ಳುಗಳು ತುಂಬಿರುವ ಕಾರಣದಿಂದ ಕೊಯ್ಲು ಮಾಡುವ ಹಾಗೂ ಒಕ್ಕಲು ಮಾಡುವ ಹೊತ್ತಲ್ಲಿ ತೊಂದರೆದಾಯಕ ಎನ್ನುವ ಕಾರಣದಿಂದ ರೈತರು ಕುಸುಬೆ ಬೆಳೆಯನ್ನು ಅಷ್ಟಾಗಿ ಬೆಳೆಯಲು ಮನಸ್ಸು ಮಾಡುವುದಿಲ್ಲ. ಆದರೆ ಈ ಬೆಳೆಗೆ ಯಾವುದೇ ಜಾನುವಾರಗಳ ಮತ್ತು ಪ್ರಾಣಿಗಳ ಕಾಟವಿಲ್ಲ. ಇದರಿಂದ ಬೆಳೆಗಾರರಿಗೆ ಅನುಕೂಲ.
ಅನ್ನದಾತ ಬಾಳಲ್ಲಿ ಬಂಗಾರವಾಗಬೇಕಿದ್ದ ಬಾಳೆ ಬೆಂಕಿಗಾಹುತಿ!
ಉತ್ತರ ಕರ್ನಾಟಕದಲ್ಲಿ ಪ್ರಮುಖ ಹಿಂಗಾರು ಬೆಳೆಗಳಲ್ಲಿ ಬಿಳಿ ಜೋಳ, ಕಡಲೆ, ಗೋದಿ, ಕುಸುಬೆ ಹಾಗೂ ಸೂರ್ಯಕಾಂತಿ ಬೆಳೆಗಳಾಗಿದ್ದು, ರೈತರಿಗೆ ಆರ್ಥಿಕ ಸಭಲತೆ ನೀಡುವ ಬೆಳೆಗಳಾಗಿವೆ. ಹೆಚ್ಚು ಖರ್ಚು ಇರದೆ ಹೆಚ್ಚು ಆದಾಯ ಕೊಡುವ ಬೆಳೆಗಳಾದ ಕಡಲೆ ಮತ್ತು ಕುಸುಬೆ ಬೆಳೆಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಕುಸುಬೆ ಎಣ್ಣೆಗೆ ಎಲ್ಲಿಲ್ಲದೆ ಬೇಡಿಕೆ ಇದೆ. ಕುಸುಬೆ ಎಣ್ಣೆಯನ್ನು ಈ ಹಿಂದೆ ಪ್ರಮುಖವಾಗಿ ಅಡುಗೆಗೆ ಬಳಸಲಾಗುತ್ತಿತ್ತು. ಎಲುವು- ಕೀಲು ನೋವುಗಳಿಗೆ ಕುಸುಬೆ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡುತ್ತಿದ್ದರು. ಈಗ ಬಳಕೆ ಕಡಿಮೆಯಾಗಿದೆ.
ಕಾಡಾನೆ ದಾಳಿ: ನಾಲ್ಕು ಎಕರೆಯಲ್ಲಿನ ಅಡಿಕೆ,ಬಾಳೆ ಬೆಳೆ ಸಂಪೂರ್ಣ ನಾಶ
ಕುಸುಬೆ ಬೆಳೆಗೆ ಪ್ರಮುಖವಾಗಿ ಕಾಟಕೊಡುವ ಸೀರು ರೋಗ ಬಾಧೆಯಿಂದ ಇಳುವರಿ ಕಡಿಮೆಯಾಗುತ್ತದೆ. ಅಲ್ಲದೆ ಎಣ್ಣೆಯ ಅಂಶ ಕಡಿಮಯಾಗುವುದರಿಂದ ಬೆಲೆ ಕುಸಿತವಾಗುವ ಸಂಭವ ಹೆಚ್ಚಾಗಿರುತ್ತದೆ. ಅಡರಕಟ್ಟಿವ್ಯಾಪ್ತಿಯ ಎರಡು ಎಕರೆ ಹೊಲದಲ್ಲಿ 2 ತಿಂಗಳ ಹಿಂದೆ ಕುಸುಬೆ ಬಿತ್ತನೆ ಮಾಡಿದ್ದೆವು. ಈಗ ಬೆಳೆಯು ಹೂವು ಬಿಡುವ ಸಮಯವಾಗಿದ್ದು, ಸೀರು ಬಾಧೆ ಕಾಣಿಸಿಕೊಂಡಿದೆ. ಸಾವಿರಾರು ರುಪಾಯಿ ಖರ್ಚು ಮಾಡಿ ಕ್ರಿಮಿನಾಶಕ ಸಿಂಪರಣೆ ಮಾಡದೆ ಹೋದಲ್ಲಿ ಇಳುವರಿ ಕುಂಠಿತವಾಗುವ ಕಾರಣದಿಂದ ಅನಿವಾರ್ಯವಾಗಿ ಔಷಧ ಸಿಂಪರಣೆ ಮಾಡಬೇಕಾಗಿದೆ.
- ಚೆನಬಸಪ್ಪ ಹಳೆಮನಿ, ಅಡರಕಟ್ಟಿಗ್ರಾಮದ ರೈತ