ಕ್ಷತ್ರಿಯರೆಲ್ಲರೂ ಒಗ್ಗೂಡಿದರೆ ಶಕ್ತಿವೃದ್ಧಿ: ಬಾವಾಜಿ

By Kannadaprabha News  |  First Published Oct 23, 2022, 9:08 AM IST
  • ಕ್ಷತ್ರಿಯರೆಲ್ಲರೂ ಒಗ್ಗೂಡಿದರೆ ಶಕ್ತಿವೃದ್ಧಿ: ಬಾವಾಜಿ
  • ಕರ್ನಾಟಕ ಕ್ಷತ್ರಿಯ ಒಕ್ಕೂಟ ಕೊಪ್ಪಳ ಜಿಲ್ಲಾ ಘಟಕದ ಸಭೆ
  • ಕ್ಷತ್ರಿಯರು ರಾಜ್ಯಾದ್ಯಂತ 1.20 ಕೋಟಿ: ರಾಜು ಬಾಕಳೆ

 ಕೊಪ್ಪಳ (ಅ.23) : ಕ್ಷತ್ರಿಯ ಸಮಾಜ ಸರ್ಕಾರದಿಂದ ತೀವ್ರ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ನಾನಾ ಪಂಗಡಗಳು ಬೇರೆ ಬೇರೆಯಾಗಿರುವುದರಿಂದ ಶಕ್ತಿ ವೃದ್ಧಿಯಾಗುತ್ತಿಲ್ಲ. ಹೀಗಾಗಿ ಕ್ಷತ್ರಿಯರೆಲ್ಲರೂ ಒಗ್ಗೂಡಿದರೆ ಮಾತ್ರ ಶಕ್ತಿ ವೃದ್ಧಿಯಾಗಲು ಸಾಧ್ಯ ಎಂದು ಬಂಜಾರ ಸಮಾಜದ ಧರ್ಮಗುರುಗಳಾದ ಶ್ರೀ ಬಾವಾಜಿ ಅವರು ಅಭಿಪ್ರಾಯಪಟ್ಟಿದ್ದಾರೆ. ಭಾಗ್ಯನಗರ ಖೋಡೆ ಕಲ್ಯಾಣ ಮಂಟಪದಲ್ಲಿ ಶನಿವಾರ ಕರ್ನಾಟಕ ಕ್ಷತ್ರಿಯ ಒಕ್ಕೂಟದ ಕೊಪ್ಪಳ ಜಿಲ್ಲಾ ಘಟಕದ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮಹಾಭಾರತ: ಕ್ಷತ್ರಿಯ ಧರ್ಮವನ್ನು ಪಾಲಿಸಿ, ಸುಭದ್ರೆಯನ್ನು ವರಿಸಿದ ಅರ್ಜನ

Latest Videos

undefined

ಹರಿದು ಹಂಚಿ ಹೋಗಿರುವ ಎಲ್ಲ ಕ್ಷತ್ರಿಯ ಬಂಧುಗಳು ಕ್ಷತ್ರಿಯ ಸಮಾಜ ಹಾಗೂ ನಮ್ಮ ಮುಂದಿನ ಪೀಳಿಗೆಯ ಅಭಿವೃದ್ಧಿಗಾಗಿ ಒಂದಾಗಿ ಇರಬೇಕು ಎಂದು ಪ್ರಮಾಣವಚನ ಮಾಡಿಸಿದರು. ನಿಮ್ಮೆಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಸಮಾಜದ ಶೋಷಿತ ಜನರ ಕಲ್ಯಾಣಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹಾಕಲು ಒಂದಾಗಿ ಎಂದು ಸೂಚಿಸಿದರು.

ಈಗಲಾದರಲೂ ಕ್ಷತ್ರಿಯ ಸಮುದಾಯವರು ಒಂದೆಡೆ ಸೇರುವ ದಿಸೆಯಲ್ಲಿ ಪ್ರಯತ್ನ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಶಕ್ತಿ ಪ್ರದರ್ಶನ ಮಾಡಬೇಕಾಗಿದೆ ಎಂದರು.

ಕಾರ್ಯಾಧ್ಯಕ್ಷ ರಾಜು ಬಾಕಳೆ ವಕೀಲರು ಮಾತನಾಡಿ, ರಾಜ್ಯದಲ್ಲಿ ಕ್ಷತ್ರಿಯ ಸಮುದಾಯಗಳು 42 ಪಂಗಡಗಳು ಇದೆ. ಕ್ಷತ್ರಿಯ ಸಮಾಜದ ಒಳಪಂಗಡಗಳು ಸೇರಿ ಒಂದು ಕೋಟಿ 20 ಲಕ್ಷ ಜನಸಂಖ್ಯೆ ಇದೆ. ನಾವು ಮನಸ್ಸು ಮಾಡಿದರೆ ರಾಜ್ಯದ ಚುಕ್ಕಾಣಿಯನ್ನು ಹಿಡಿಯುವ ಶಕ್ತಿ ನಮ್ಮಲ್ಲಿದೆ. ಇದನ್ನು ಅರಿತು ಒಂದಾಗಬೇಕು ಎಂದು ಕರೆ ನೀಡಿದರು.

ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರೀಯ ಕ್ಷತ್ರಿಯ ಒಕ್ಕೂಟದ ಸಮಾವೇಶದಲ್ಲಿ ಸುಮಾರು 15 ಲಕ್ಷ ಜನರನ್ನು ಸೇರಿಸಲು ಯೋಜನೆ ರೂಪಿಸಲಾಗಿದೆ. ಈ ಸಮಾವೇಶದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಲು ವಿನಂತಿಸಿಕೊಂಡರು.

ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸರೋಜಾ ಬಾಕಳೆ ಹಾಗೂ ಅನ್ನಪೂರ್ಣಾ ರಜಪೂತ್‌ ಮಾತನಾಡಿ, ರಾಜ್ಯ ಸಮ್ಮೇಳನಕ್ಕೆ ಪುರುಷರಿಗಿಂತಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಕ್ಷತ್ರಿಯ ಒಳಪಂಗಡಗಳ ಜಿಲ್ಲಾ ಅಧ್ಯಕ್ಷರು, ತಾಲೂಕು ಅಧ್ಯಕ್ಷರು ಹಾಗೂ ಹಿರಿಯ ಮುಖಂಡರು, ಕ್ಷತ್ರಿಯರೆಲ್ಲರೂ ನಮ್ಮ ಪೀಳಿಗೆಯವರು ಭವಿಷ್ಯಕ್ಕೋಸ್ಕರ ಸಮಾಜ ಹಾಗೂ ದೇಶದ ರಕ್ಷಣೆಗೋಸ್ಕರ ಭೇದ ಮರೆತು, ಕ್ಷತ್ರಿಯರಾಗಿ ಒಗ್ಗಟ್ಟಾಗೋಣ ಹಾಗೂ ನಾವೆಲ್ಲ ಒಂದು ಕ್ಷತ್ರಿಯ ಬಂಧು ಎಂಬ ಸಂದೇಶವನ್ನು ಕೊಡುವ ಮೂಲಕ ಜಾಗೃತಿ ಗಂಟೆ ಬಾರಿಸಿದರು.

ಗೌರವಾಧ್ಯಕ್ಷ ಹನುಮಂತಪ್ಪ ಬಿಡನಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜಿಲ್ಲಾಧ್ಯಕ್ಷ ರಾಘವೇಂದ್ರ ಹುಯಿಲಗೋಳ, ಕ್ಷತ್ರಿಯ ಮುಖಂಡರಾದ ಭರತ ನಾಯಕ, ರವಿ ಕುರುಗೋಡ, ಯಂಕನಗೌಡ ಹೊರತಟ್ನಾಳ, ಗಾಳೆಪ್ಪ ಗೊಂದೊಳಿ, ನಾಗೇಶ್‌ ಬಡಿಗೇರ, ಕಳಕಪ್ಪ ಜಾಧವ, ಲಕ್ಷ್ಮಣ ನಾಯಕ, ಪಂಪಾಪತಿ ನಾಯಕ, ವಿಶ್ವನಾಥ್‌ ಚಿತ್ರಗಾರ, ಅಮರ್‌ಸಿಂಗ್‌ ರಜಪೂತ, ನಾರಾಯಣಸಾ ಗೋಪಾಲ್‌ ಕಲಾಲ, ಜಗನ್ನಾಥ್‌ ಯಾದವ, ವೆಂಕಣ್ಣ ಯಾದವ, ವಿಠ್ಠಲ ಗೊಂದಕರ, ಎ.ಎಂ. ಮದರಿ, ಶರಭೋಜಿ ಗಾಯಕವಾಡ, ಗಿರೀಶ ಗಾಯಕವಾಡ, ಪ್ರಾಣೇಶ ಮಹೇಂದ್ರಕರ, ಶೋಭಾ ನಗರಿ, ಲಕ್ಷ್ಮೇಬಾಯಿ ಮೇಘರಾಜ್‌, ಸುನೀತಾ ಮೇಘರಾಜ, ಇಂದಿರಾ ಬಂಜಾರ, ಸುನಂದಾ ಮೇಘರಾಜ್‌, ಸುರೇಖಾ ಖಾಟವ, ಪದ್ಮಾವತಿ ಮೇಘರಾಜ್‌, ರಾಧಾ ಖಟಾರೆ, ಕಸ್ತೂರಿಬಾಯಿ ಮೇಘರಾಜ್‌, ಅಶ್ವಿನಿ, ಹನುಮಸಾಗರದ ಸವಿತಾ ಗೋಂದಳಿ ಜಾನುಭಾಯಿ ಪ್ರಧಾನ ಕಾರ್ಯದರ್ಶಿ ಉಮೇಶ್‌ ಬಾಬು ಸುರ್ವೆ ಮೊದಲಾದವರು ಇದ್ದರು.

ಸುಮನ್‌ ದಲಬಂಜನ ಹಾಗೂ ರೂಪಾ ಪವಾರ್‌ ಪ್ರಾರ್ಥಿಸಿದರು. ಉಮೇಶಬಾಬು ಸುರ್ವೆ ಕಾರ್ಯಕ್ರಮ ನಿರ್ವಹಿಸಿದರು. ಕಾನೂನು ಸಲಹೆಗಾರರಾದ ಉದಯ್‌ ಸಿಂಗ್‌ ಠಾಕೂರ ಕಾರ್ಯಕ್ರಮ ನಿರ್ವಹಿಸಿದರು.

ಪರಶುರಾಮನೇಕೆ ಎಲ್ಲ ಕ್ಷತ್ರಿಯ ರಾಜರನ್ನು ಕೊಂದ?

ಕೊಪ್ಪಳ ಜಿಲ್ಲೆಯಲ್ಲಿ ವಾಸವಿರುವ ಕ್ಷತ್ರಿಯ ಒಳಪಂಗಡಗಳು

ಉಪ್ಪಾರ, ಕ್ಷತ್ರಿಯ, ಯಾದವ/ಗೊಲ್ಲ, ಸಹಸ್ರಾರ್ಜುನ ಕ್ಷತ್ರಿಯ ಎಸ್‌ಎಸ್‌ಕೆ, ಆರ್ಯ ಈಡಿಗ, ಬಂಜಾರ, ಮರಾಠ, ಚಿತ್ರಗಾರ, ಸೂರ್ಯವಂಶ ಕ್ಷತ್ರಿಯ, (ಕಲಾಲ…), ರಜಪೂತ, ಗೊಂದಳಿ, ಭಾವಸಾರ ಕ್ಷತ್ರಿಯ, ನಾಮದೇವಸಿಂಪಿ, ರಾಜೂ ಕ್ಷತ್ರಿಯ, ಗೌಳಿ, ಲಾಡ ಕ್ಷತ್ರಿಯ, ಜೋಗಿ, ಹಕ್ಕಿಪಿಕ್ಕಿ ಮತ್ತು ಇತರ ಕ್ಷತ್ರಿಯ

click me!