ಮೈಸೂರು (ಜೂ.06): ಮೈಸೂರಿನಲ್ಲಿ ತಾರಕಕ್ಕೆ ಏರಿದ್ದ ಐಎಎಸ್ ಅಧಿಕಾರಿಗಳಿಬ್ಬರ ಸಮರ ವರ್ಗಾವಣೆ ನಂತರ ಶಮನವಾದಂತಾಗಿದೆ. ಇದೇ ವೇಳೆ ಗಂಭೀರ ಅರೋಪ ಹೊರಿಸಿದ್ದ ಈಜುಕೊಳ ವಿಚಾರಕ್ಕೆ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿ ಉತ್ತರಿಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ವಸತಿ ಗೃಹದಲ್ಲಿ ನಿರ್ಮಿಸಿದ ಈಜುಕೊಳ ನಿರ್ಮಾಣ ವಿಚಾರವಾಗಿ ಸರ್ಕಾರಕ್ಕೆ ರೊಹಿಣಿ ಸಿಂಧೂರಿ ಪತ್ರದ ಮೂಲಕ ಉತ್ತರ ನೀಡಿದ್ದಾರೆ.
ಸಿಂಧೂರಿ v/s ಶಿಲ್ಪಾನಾಗ್: ಏನಿದು ಇನ್‌ಸೈಡ್ ಪಾಲಿಟಿಕ್ಸ್..? ..
ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ ಪ್ರಕಾಶ್ ಅವರಿಗೆ ಎರಡು ಪುಟಗಳ ಉತ್ತರ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ವಸತಿ ಕಚೇರಿ ಆವರಣದಲ್ಲಿ ಈಜುಕೊಳ ನಿರ್ಮಿಸಬೇಕೆಂಬುದು ಐದು ವರ್ಷಗಳ ಹಿಂದಿನ ಯೋಜನೆ ಎಂದು ತಿಳಿಸಿದ್ದಾರೆ.
ಅಲ್ಲದೇ ಎಲ್ಲಾ ಜಿಲ್ಲಾಧಿಕಾರಿ ವಸತಿ ಕಚೇರಿಯಲ್ಲೂ ಹೊಸ ತಂತ್ರಜ್ಞಾನ ಬಳಸಿ ನಿರ್ಮಾಣ ಕಾರ್ಯ ನಡೆಸಲು ನಿರ್ಮಿತಿ ಕೇಂದ್ರ ನಿರ್ಧರಿಸಿತ್ತು. ಅದರ ಪ್ರಾಯೋಗಿಕ ಯೋಜನೆಯಾಗಿ ಈಜುಕೊಳ ನಿರ್ಮಾಣವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಿರ್ಮಿತಿ ಕೇಂದ್ರದ 28.72 ಲಕ್ಷ ರು. ವೆಚ್ಚದಲ್ಲಿ ಮೈಸೂರು ಜಿಲ್ಲಾಧಿಕಾರಿ ವಸತಿ ಗೃಹದಲ್ಲಿ ಈಜುಕೊಳ ನಿರ್ಮಾಣವಾಗಿದೆ. ಪಾರಂಪರಿಕ ಕಟ್ಟಡಕ್ಕೆ ಈ ನಿರ್ಮಾನ ಕಾರ್ಯದಿಂದ ಯಾವುದೇ ಧಕ್ಕೆಯಾಗಿಲ್ಲ ಎಂದು ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದರು.