PSI SCAM : ಹಗರಣದ ವಾಸನೆ ನನಗೆ ಮೊದಲೇ ಸಿಕ್ಕಿತ್ತು- ಮಾಜಿ  ಕಮಿಷನರ್ ಭಾಸ್ಕರ್ ರಾವ್

By Ravi NayakFirst Published Jul 26, 2022, 4:30 PM IST
Highlights

ಪಿ.ಎಸ್.ಐ ಹಗರಣ ವಾಸನೆ ನನಗೆ ಮೊದಲೇ ಇತ್ತು ಇಂದು ಮಾಜಿ ಪೊಲೀಸ್ ಅಧಿಕಾರಿ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಹೇಳಿದ್ದಾರೆ. ಏಷಿಯಾನೆಟ್ ಸುವರ್ಣ ನ್ಯೂಸ್‌ಗೆ ನೀಡಿದ ಹೇಳಿಕೆ ಇಲ್ಲಿದೆ ಮುಂದೆ ಓದಿ

ಉಡುಪಿ (ಜು.26) : ಪಿ.ಎಸ್.ಐ ಹಗರಣ ವಾಸನೆ ನನಗೆ ಮೊದಲೇ ಇತ್ತು ಇಂದು ಮಾಜಿ ಪೊಲೀಸ್ ಅಧಿಕಾರಿ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ತಿಳಿಸಿದರು. ಉಡುಪಿಯಲ್ಲಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎಡಿಜಿಪಿ ದರ್ಜೆಯ ಅಧಿಕಾರಿಯನ್ನು ಬಂಧಿಸಲು ಕಾರಣವಾಗಿದ್ದ ಪಿ ಎಸ್ ಐ ಹಗರಣದ ಕುರಿತು ನನಗೆ ಮೊದಲೇ ವಾಸನೆ ಇತ್ತು ಎಂದಿದ್ದಾರೆ.

ನಾನು ಬೆಂಗಳೂರು ಸಿಟಿ ಪೋಲಿಸ್ ಕಮಿಷನರ್(Bangaluru city police commissioner) ಆಗಿರುವಾಗ ಅಮೃತ್ ಪೌಲ್(Amrith paul) ಕಮಿಷನರ್ ಆಗುತ್ತಾರೆ ಎಂಬ ಸುದ್ದಿ ಪ್ರಚಲಿತದಲ್ಲಿತ್ತು. ಅಮೃತ್ ಪೌಲ್ ಆಗಾಗಾ ಮುಖ್ಯಮಂತ್ರಿಯವರ ಮನೆಗೆ ಬರುವುದನ್ನು ನಾನು ಗಮನಿಸಿದ್ದೆ. ಆಗಲೇ ಇದು ಹಗರಣ ಎಂಬುವುದಾಗಿ ನನಗೆ ಗೊತ್ತಾಗಿತ್ತು. ರಾಜ್ಯಪಾಲರ ಬಳಿ ಈ ವಿಷಯ ಕೊಂಡೊಯ್ದ ಮೊದಲ ರಾಜಕೀಯ ಪಕ್ಷ ಆಮ್ ಆದ್ಮಿ(AAP) ಎಂದು ಹೇಳಿದರು.

ಪಿಎಸ್‌ಐ ಹಗರಣದ ಹಣ ಮ್ಯೂಚುವಲ್‌ ಫಂಡ್‌ಗೆ: ತನ್ನ ಖಾತೆ ಬದಲು ಬೇರೆಡೆ ಹಾಕಿಸ್ತಿದ್ದ ಕಿಂಗ್‌ಪಿನ್‌..

ತನಿಖೆ ಆಗುವವರೆಗೂ ಪರೀಕ್ಷೆ ಮಾಡುವುದಿಲ್ಲ ಎಂಬುವುದು ತಪ್ಪು ನೀತಿ, ನೀವು ಯುವಜನರಿಗೆ ಮೋಸ ಮಾಡುತಿದ್ದೀರಿ. ಇಡೀ ಪರೀಕ್ಷೆಯನ್ನೇ ರದ್ದುಗೊಳಿಸಿ ಹೊಸದಾಗಿ ಪರೀಕ್ಷೆಯನ್ನು ನಡೆಸಿ ಎಂದರು .ಸಿಐಡಿ(CID) ಒಳಗೆ ಹೋದ ಮೇಲೆ ಹೋಂ ಮಿನಿಸ್ಟರ್(Home Minister) ಮತ್ತು ಸಿಎಂ ತನಿಖಾಧಿಕಾರಿ ಆಗುತ್ತಾರೆ. ಇದು ನ್ಯಾಯಾಂಗದಲ್ಲಿ ತನಿಖೆ ಆಗಬೇಕು ಎಂದು ನಾನು ಮೊದಲೇ ಆಗ್ರಹ ಮಾಡಿದ್ದೆನು.  ನ್ಯಾಯಾಂಗ ತನಿಖೆ ಆರಂಭ ಆದ 24 ಗಂಟೆಗಳಲ್ಲಿ ಅಮೃತ್ ಪೌಲ್ ಬಂಧನವಾಗಿದೆ ಎಂದರು.

ಕರ್ನಾಟಕದಲ್ಲಿ ಲೋಕಾಯುಕ್ತ ಮತ್ತು ಎಸಿಬಿ ಎರಡು ಸಂಸ್ಥೆಗಳು ಇದ್ದರೂ ಕೂಡಾ ಭ್ರಷ್ಟಾಚಾರ ನಡೆಯುತ್ತಲೇ ಇದೆ. ಬಿಜೆಪಿ ಪ್ರಣಾಳಿಕೆಯಲ್ಲಿ  ಭ್ರಷ್ಟಾಚಾರ ನಿಯಂತ್ರಿಸುವ ಮಾತಾಡಿತ್ತು ಆದರೆ ಎಸಿಬಿಯನ್ನು ಮುಖ್ಯಮಂತ್ರಿಯೇ ತೆಗೆದುಕೊಂಡ ನಂತರ ಭ್ರಷ್ಟಾಚಾರ ಏನು ಕಡಿಮೆ ಆಗಿದೆಯಾ? ಮುಖ್ಯಮಂತ್ರಿಗಳು ಕಾಂಗ್ರೆಸ್ ಸರಕಾರಕ್ಕೆ 10% ಸರಕಾರಕ್ಕೆ ಅನ್ನುತಿದ್ದರು ಆದರೆ ಬಿಜೆಪಿಯದ್ದು 40% ಸರಕಾರ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ ಎಂದರು

ಪಿಎಸ್‌ಐ ಹಗರಣ ಕಲಬುರಗಿಗೆ ಸೀಮಿತವಲ್ಲ: ಪ್ರಿಯಾಂಕ್‌ ಖರ್ಗೆ

ಗುತ್ತಿಗೆದಾರ ಸಂತೋಷ್ ಪಾಟೀಲ್(Santosh patil) ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪ(K.S.Eshwarappa)ರಿಗೆ ಕ್ಲೀನ್ ಚಿಟ್ (Clean Chit)ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ ಹಾಗಾದರೆ ಪಾಟೀಲ್  ಸಾವು ಕೂಡಾ ಆಗಿಲ್ಲವಾ? ಬೆಂಗಳೂರಲ್ಲಿ ರೈಲ್ವೆ ಹಳಿ ಮೇಲೆ ಸಾಲ ಕೊಟ್ಟವರರು ಕಿರುಕುಳ ಕೊಡುತ್ತಿದ್ದಾರೆ ಎಂದು ಬರೆದಿಟ್ಟು ಆತ್ಮಹತ್ಯೆ(Suicide) ಮಾಡಿದಾಗ 6 ಗಂಟೆ ಒಳಗೆ ಆರೆಸ್ಟ್ ಮಾಡಿದ್ದಾರೆ. 306 ಕೇಸ್ ನಲ್ಲಿ ಈಶ್ವರಪ್ಪನವರಿಗೆ ಯಾಕೆ ಅರೆಸ್ಟ್ ಮಾಡಿಲ್ಲ ಎಂದು ಪ್ರಶ್ನಿಸಿದರು.

ಗುತ್ತಿಗೆದಾರನ ಹೆಂಡತಿ ನ್ಯಾಯ ಕೇಳಲು ಗೃಹ ಮಂತ್ರಿಗಳ(Home Minister) ಬಳಿ ಹೋದಾಗ ಬೈದು ಬಿಟ್ಟು ಕಳಿಸಿಲ್ಲವಾ? ನಿಮಗೆ ತುಂಬಾ ದುರಂಹಕಾರ, ಅಧಿಕಾರದ ಮದ ನಿಮಗೇರಿದೆ. ರಾಮನ ಭಕ್ತರು ಎನ್ನುತ್ತೀರಲ್ಲಾ,ರಾಮ ಕೂಡಾ ನಿಮ್ಮನ್ನು ಕ್ಷಮಿಸಲ್ಲ. ಈಶ್ವರಪ್ಪ ನವರಿಗೆ ಮತ್ತೆ ಮಂತ್ರಿ ಪದವಿ ನೀಡಿದರೆ ರಾಜ್ಯಾದಾದ್ಯಂತ ಆಪ್ ತೀವ್ರ ಪ್ರತಿಭಟನೆ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು‌

ಪಿಎಸ್‌ಐ ಹಗರಣ: ಪ್ರತಿಭಟನೆಯ ಪ್ರಮುಖ ಆಯೋಜಕನೇ ಆರೋಪಿ ನಂ.1 ,ಬಯಲಾಯ್ತು ಬ್ಲೂಟೂತ್ ಅಕ್ರಮ..!

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಆಪ್ ಪಕ್ಷದ ಅಭ್ಯರ್ಥಿಗಳು 2024 ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ 380 ಜನರಿಗೆ ಪಕ್ಷದ ವಿವಿಧ ಸ್ತರದ ಜವಾಬ್ದಾರಿಗಳನ್ನು ನೀಡಿ, ರಾಜ್ಯದಲ್ಲಿ ಪಕ್ಷ ಸಂಘಟನೆ ನಡೆಸಲು ಯೋಜನೆ ರೂಪಿಸಿದೆ. ಉಡುಪಿ ಮತ್ತು ಮಂಗಳೂರಿನಲ್ಲಿ ಹೆಚ್ಚು ಜನರು ಆಪ್ ಪಕ್ಷದ ಸದಸ್ಯರಾಗುತ್ತಿದ್ದಾರೆ 

ಕರಾವಳಿಯ ಎರಡು ಜಿಲ್ಲೆಗಳಾದ ಉಡುಪಿ ಹಾಗು ಮಂಗಳೂರು ಪ್ರವಾಸ ಕೈಗೊಂಡು ಈ ಭಾಗದಲ್ಲಿ ಪಕ್ಷ ಬಲವರ್ಧನೆಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆಪ್ ಪಕ್ಷದ ಪ್ರಣಾಳಿಕೆ ಹೇಗಿರಬೇಕು ಮತ್ತು ಇತರೆ ಪಕ್ಷಗಳಿಂತ  ಭಿನ್ನವಾಗಿರಬೇಕು ಎಂಬುದು ನಮ್ಮ ಆಲೋಚನೆಯಾಗಿದೆ‌ .ರಾಜ್ಯ ಇತರೆ ಜಿಲ್ಲೆಯಲ್ಲಿ ಆಪ್ ಪಕ್ಷ ನಡೆಸಿದ ಚರ್ಚೆಯನ್ನು ಇಲ್ಲಿನ ಕಾರ್ಯಕರ್ತರ ಮುಂದಿಟ್ಟು, ಇಲ್ಲಿನ ಕಾರ್ಯಕರ್ತರ ಹೊಸ ಚಿಂತನೆಗಳು ಮತ್ತು ಅಭಿಪ್ರಾಯಗಳನ್ನು ಪಡೆಯುತ್ತೇವೆ. ಅತ್ಯಂತ ಪ್ರಮಾಣಿಕ ಪಕ್ಷವಾಗಿ ಆಪ್ ಅನ್ನು ದೇಶದ ಎರಡು ರಾಜ್ಯಗಳಲ್ಲಿ ಜನ ಸ್ವೀಕರಿಸಿದ್ದಾರೆ. ಕರ್ನಾಟಕದಲ್ಲೂ ಸ್ವೀಕರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

click me!