ರಾಜಕಾರಣವನ್ನು ಅಧಿಕಾರ ದಾಹಕ್ಕೆ ಅಂಟಿಕೊಂಡು ಮಾಡದೇ, ಮತದಾರರ ಋುಣ ತೀರಿಸುವಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಅಂದಾಗ ರಾಜಕೀಯ ಬದುಕು ಸಾರ್ಥಕವಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದರು.
ರೋಣ (ನ.9) : ರಾಜಕಾರಣವನ್ನು ಅಧಿಕಾರ ದಾಹಕ್ಕೆ ಅಂಟಿಕೊಂಡು ಮಾಡದೇ, ಮತದಾರರ ಋುಣ ತೀರಿಸುವಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಅಂದಾಗ ರಾಜಕೀಯ ಬದುಕು ಸಾರ್ಥಕವಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಸೂಟ್ ಬೂಟ್ ಸರ್ಕಾರದಿಂದ ಕೆ.ಆರ್.ಕ್ಷೇತ್ರಕ್ಕೆ 6 ಸಾವಿರ ಮನೆ: ಸಚಿವ ಸಿ.ಸಿ.ಪಾಟೀಲ್
ಅವರು ಸೋಮವಾರ ಸಂಜೆ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಸಿ.ಸಿ. ರಸ್ತೆ, ಸಮುದಾಯ ಭವನ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ಬಳಿಕ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಭಿವೃದ್ಧಿ ದೃಷ್ಟಿಕೋನವಿಟ್ಟುಕೊಂಡು ರಾಜಕಾರಣ ಮಾಡಬೇಕೇ ಹೊರತು, ಕೇವಲ ಕಾಲೆಳೆಯುವ ರೀತಿಯಲ್ಲಿ, ಅನಗತ್ಯ ಗೊಂದಲ… ಸೃಷ್ಠಿಸುವ ರೀತಿಯಲ್ಲಿ ರಾಜಕಾರಣ ಮಾಡಬಾರದು. ರಾಜಕಾರಣದಲ್ಲಿ ಎರಡು ವರ್ಗದ ಜನ ಇರುತ್ತಾರೆ.
ಇಂದು ವರ್ಗದ ಜನ ಎಲ್ಲೋ ಒಂದು ಕಡೆ ಕುಳಿತುಕೊಂಡು ಅಭಿವೃದ್ಧಿ ಮಾಡುವವರನ್ನು ಹೀಯಾಳಿಸಿ ಮಾತಾಡುತ್ತಾ ರಾಜಕಾರಣ ಮಾಡುತ್ತಾರೆ. ಇನ್ನೊಂದು ವರ್ಗದ ಜನ ತಾವು ಮಾತಾಡದೇ, ತಮ್ಮ ಅಭಿವೃದ್ಧಿ ಕೆಲಸಗಳ ಮೂಲಕ ಮಾತಾಡುತ್ತವೆ. ಎರಡನೇ ವರ್ಗದ ರಾಜಕಾರಣಿಗಳ ಸಾಲಲ್ಲಿ ನಾನು ಜನತೆಯ ಬೇಕು, ಬೇಡಿಕೆಗಳನ್ನು ಈಡೇರಿಸುವಲ್ಲಿ, ಯೋಜನೆ ತಲುಪಿಸುವಲ್ಲಿ ಶ್ರಮಿಸುತ್ತಿದ್ದೇನೆ. ಈಗಾಗಲೇ ನಾನು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ನನಗೆ ತೃಪ್ತಿ ತಂದಿವೆ. ಕಳೆದ 4.5 ವರ್ಷದಲ್ಲಿ ಕ್ಷೇತ್ರದಲ್ಲಿ .700 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿ, ಈ ಮೂಲಕ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಮಳೆಗೂ, ಬಿಜೆಪಿ ಸರ್ಕಾರಕ್ಕೂ ಅವಿನಾಭಾವ ನಂಟಿದೆ. ಯಾವಾಗ ಯಾವಾಗ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆಯೋ, ಅವಾಗಲೆಲ್ಲಾ ಅತಿವೃಷ್ಟಿ, ಪ್ರವಾಹ ಉಂಟಾಗಿ ಜನ ಜೀವನ ಅಸ್ತವ್ಯಸ್ಥವಾಗಿದೆ. ಜೊತೆಗೆ ಕೊರೋನಾ ಮಹಾಮಾರಿಯೂ ಸಾಕಷ್ಟುಪ್ರಮಾಣದಲ್ಲಿ ಹಾನಿ ಮಾಡಿದ್ದಲ್ಲಿದೇ ಸಾವು, ನೋವು ಉಂಟು ಮಾಡಿ, ಆರ್ಥಿಕ ಕುಸಿತಕ್ಕೆ ಕಾರವಾಯಿತು. ಇದೆಲ್ಲವನ್ನು ಲೆಕ್ಕಿಸದೇ ಸರ್ಕಾರ ಜನರ ಸೇವೆಗೆ ನಿಂತು ಯಶಸ್ವಿಯಾಗಿದೆ. ನಾನು ಲೋಕೋಪಯೋಗಿ ಇಲಾಖೆ ಸಚಿವನಾದ ಬಳಿಕ ರಾಜ್ಯದಲ್ಲಿ .10 ಸಾವಿರ ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದರು.
ಮಲ್ಲಾಪೂರ ಗ್ರಾಮದ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಇಲಾಖೆಯಿಂದ .5ಲಕ್ಷ, ಹೆಚ್ಚುವರಿಯಾಗಿ .5 ಲಕ್ಷ ಬಿಡುಗಡೆ ಮಾಡುವುದರ ಜೆತೆಗೆ, ನನ್ನ ಕುಟುಂಬದಿಂದ .5 ಲಕ್ಷ ಹಣ ಕೊಡುತ್ತೇನೆ. ಬಾಬು ಜಗಜೀವನರಾಮ ಸಮುದಾಯ ಭವನಕ್ಕೆ .5 ಲಕ್ಷ, .38 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ, .40 ಲಕ್ಷ ವೆಚ್ಚದಲ್ಲಿ ಮಲ್ಲಾಪೂರ- ಲಿಂಗದಾಳ ರಸ್ತೆ ಅಭಿವೃದ್ಧಿ, .60 ಲಕ್ಷ ವೆಚ್ಚದಲ್ಲಿ ಮಲ್ಲಾಪೂರ - ಕದಡಿ ರಸ್ತೆ ಸುಧಾರಣೆ, . 40 ಲಕ್ಷ ವೆಚ್ಚದಲ್ಲಿ ಅಸೂಟಿ ಸಂಪರ್ಕ ರಸ್ತೆ ಸುಧಾರಣೆ ಕೈಕೊಳ್ಳಲಾಗುವುದು ಎಂದರು.
ಅಪ್ಪ, ಮಗ ಗೆದ್ದಿದ್ದರೂ ಹಿಂದುಳಿದ ಕರ್ನಾಟಕ ಪಟ್ಟ ಏಕೆ?: ಸಿ.ಸಿ.ಪಾಟೀಲ್
ಪತ್ರಿವನ ಮಠದ ಗುರುಸಿದ್ದ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಬಸಮ್ಮ ಟಕ್ಕೇದ, ತಹಸೀಲ್ದಾರ್ ವಾಣಿ.ಯಿ, ತಾಪಂ ಇಒ ಸಂತೋಷ ಪಾಟೀಲ, ಬಿಜೆಪಿ ಹೊಳೆಆಲೂರ ಮಂಡಳದ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ಶಶಿಧರಗೌಡ ಪಾಟೀಲ, ಗಿರೀಶಗೌಡ ಚನ್ನಪ್ಪಗೌಡ್ರ, ಸುಶೀಲವ್ವ ಅಡಿವೆಪ್ಪ ಕಲ್ಮಠ, ಅರ್ಜುನ ಕಳ್ಳಗಣ್ಣವರ, ಲಿಂಗರಾಜ ಪಾಟೀಲ, ಜಿಪಂ ಮಾಜಿ ಸದಸ್ಯ ಶಿವಾನಂದ ನೀಲಗುಂದ, ಗುರುಮಲ್ಲಯ್ಯ ಹಿರೇಮಠ, ಬಸಯ್ಯಶಾಸ್ತ್ರಿ ಹಿರೇಮಠ, ಕಸ್ತೂರವ್ವ ಜಂಪಣ್ಣವರ, ಕರಿಯಮ್ಮ ಚಲವಾದಿ, ಪ್ರಕಾಶ ತಿರಕನಗೌಡ್ರ, ಕುಬೇರಗೌಡ, ಹಿರೇಗೌಡ್ರ, ಹನಮಂತಗೌಡ ಹುಲ್ಲೂರ, ಯಲ್ಲಪ್ಪ ಮಳಗಿ, ಸುರೇಶ ವತ್ತಟ್ಟಿ, ಗ್ರಾಪಂ ಪಿಡಿಓ ಲೋಹಿತ ಎಂ, ಶಿವಣ್ಣ ಅರಹುಣಸಿ, ಶಾಂತಮ್ಮ ಘಾಜಿ ಮುಂತಾದವರು ಉಪಸ್ಥಿತರಿದ್ದರು. ಲಿಂಗರಾಜ ಪಾಟೀಲ ನಿರೂಪಿಸಿ, ವಂದಿಸಿದರು.