ಪ್ರಧಾನಿ ನರೇಂದ್ರ ಮೋದಿಯವರಿಂದ ಭಾರತ ವಿಶ್ವಗುರು : ಹಾಲಪ್ಪ ಆಚಾರ

Published : Nov 09, 2022, 11:11 AM ISTUpdated : Nov 09, 2022, 11:12 AM IST
ಪ್ರಧಾನಿ ನರೇಂದ್ರ ಮೋದಿಯವರಿಂದ ಭಾರತ ವಿಶ್ವಗುರು : ಹಾಲಪ್ಪ ಆಚಾರ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರಿಂದ ಭಾರತ ವಿಶ್ವಗುರು ಕುಕನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗೆ ಸಚಿವ ಆಚಾರ ಚಾಲನೆ

ಕುಕನೂರು (ನ.9) : ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾರತ ವಿಶ್ವಗುರು ಆಗಿದೆ ಎಂದು ಸಚಿವ ಹಾಲಪ್ಪ ಆಚಾರ ಹೇಳಿದರು. ತಾಲೂಕಿನ ನಾನಾ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಕೊರೋನಾ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು 100 ರಾಷ್ಟ್ರಗಳಿಗೆ ಲಸಿಕೆ ನೀಡಿದರು. ಕಾಂಗ್ರೆಸ್‌ನ ಪ್ರಧಾನಿಗಳನ್ನು ಕಂಡರೆ ಹಾವಾಡಿಗರ ದೇಶದ ಪ್ರಧಾನಿ ಎಂದು ಬಿಂಬಿಸುತ್ತಿದ್ದ ವಿದೇಶಿಗರು ಮೋದಿ ಅವರನ್ನು ಹಿರಿಯಣ್ಣನ್ನಾಗಿ ಸ್ವೀಕರಿಸಿವೆ. ವಿದೇಶಗಳ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಮೋದಿ ಅವರ ಕಾರ್ಯವೈಖರಿಯಿಂದ ಭಾರತ ಆರ್ಥಿಕವಾಗಿ ಸದೃಢವಾಗಿದೆ ಎಂದರು.

ಅಂಗನವಾಡಿ, ಶಾಲೆಗೆ ಸಚಿವ Halappa Achar ದಿಢೀರ್‌ ಭೇಟಿ

ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಳ ಮಾಡಿ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಕಕ ಅಭಿವೃದ್ಧಿಗೆ ವಾರ್ಷಿಕ .3 ಸಾವಿರ ಕೋಟಿ ನೀಡಿದ್ದಾರೆ. ಜಿಲ್ಲೆಗೆ ವಿಶ್ವವಿದ್ಯಾಲಯ, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ಅಂಜನಾದ್ರಿ ಪರ್ವತಕ್ಕೆ .100 ಕೋಟಿ ನೀಡಿದ್ದಾರೆ ಎಂದರು.

ಮಾಜಿ ಸಚಿವ ಬಸವರಾಜ ರಾಯರಡ್ಡಿ ನೀರಾವರಿ ಬಗ್ಗೆ ಏನೂ ಅರಿಯದೆ ತಾನೇ ನೀರಾವರಿ ಬ್ರಹ್ಮ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ. ಅವರಿಗೆ ರೈತಪರ ಕಾಳಜಿ ಇಲ್ಲ ಎಂದರು.

ತಹಸೀಲ್ದಾರ್‌ ಚಿದಾನಂದ ಗುರುಸ್ವಾಮಿ, ಇಒ ರಾಮಣ್ಣ ದೊಡ್ಮನಿ, ಸಿಡಿಪಿಒ ಸಿಂಧು ಯಲಿಗಾರ, ತಾಪಂ ಮಾಜಿ ಉಪಾಧ್ಯಕ್ಷರಾದ ಕಳಕಪ್ಪ ಕಂಬಳಿ, ಶಿವಕುಮಾರ ನಾಗಲಾಪೂರಮಠ, ವಿಶ್ವನಾಥ ಮರಿಬಸಪ್ಪನವರ, ರಥನ ದೇಸಾಯಿ, ರೇವಣಸಿದ್ದನಗೌಡ, ನಾಗರಾಜ ವೆಂಕಟಾಪೂರ, ಶಂಭು ಜೋಳದ, ಬಸನಗೌಡ ತೊಂಡಿಹಾಳ ಇತರರಿದ್ದರು.

ವಿವಿಧ ಕಾಮಗಾರಿಗೆ ಚಾಲನೆ

.4.95 ಕೋಟಿಯಲ್ಲಿ ರಾರ‍ಯವಣಕಿಯಲ್ಲಿ ಹಿರೇಬಿಡಿನಾಳ ಯೋಜನೆಯಲ್ಲಿ ಹಿರೇಬೀಡಿನಾಳ, ಮುತ್ತಾಳ ರಾರ‍ಯವಣಕಿ ರಸ್ತೆ ಅಭಿವೃದ್ಧಿ, .75 ಲಕ್ಷದಲ್ಲಿ ರಾರ‍ಯವಣಕಿಯಲ್ಲಿ ಕೆರೆ ನಿರ್ಮಾಣ, .48 ಲಕ್ಷದಲ್ಲಿ ಕದ್ರಳ್ಳಿಯಲ್ಲಿ 4 ಶಾಲಾ ಕೊಠಡಿ ನಿರ್ಮಾಣ, .60 ಲಕ್ಷದಲ್ಲಿ ಹಿರೇಬೀಡಿನಾಳದಿಂದ ಚಿಕ್ಕಬೀಡಿನಾಳದವರೆಗೆ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ, .55 ಲಕ್ಷದಲ್ಲಿ ಕಿನ್ನಾಳ ಮಂಗಳೂರು ರಸ್ತೆ ಮರುಡಾಂಬರೀಕರಣ, .42 ಲಕ್ಷದಲ್ಲಿ ಚಿಕ್ಕಬೀಡಿನಾಳದಲ್ಲಿ ಸಿಸಿ ರಸ್ತೆ, .20.8 ಲಕ್ಷದಲ್ಲಿ ಹೊನ್ನೂಣುಸಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ, ಹೈಮಾಸ್ಟ್‌ ದೀಪ ಅಳವಡಿಕೆ, .70 ಲಕ್ಷದಲ್ಲಿ ಹೊನ್ನೂಣುಸಿ ಮಂಗಳೂರು ರಸ್ತೆ ಮರುಡಾಂಬರೀಕರಣ, .1.20 ಕೋಟಿಯಲ್ಲಿ ಕುದರಿಮೋತಿಯಿಂದ ಮೊರಾರ್ಜಿ ದೇಸಾಯಿ ಶಾಲೆಯವರೆಗೆ ರಸ್ತೆ ಸುಧಾರಣೆ, .1.50 ಕೋಟಿಯಲ್ಲಿ ಕುದರಿಮೋತಿಯಿಂದ ಹೊನ್ನೂಣುಸಿಯವರೆಗೆ ಸಿಸಿ ರಸ್ತೆ, .31 ಲಕ್ಷದಲ್ಲಿ ನೆಲಜೇರಿಯಲ್ಲಿ ಸಿಸಿ ರಸ್ತೆ, .15 ಲಕ್ಷದಲ್ಲಿ ನೆಲಜೇರಿಯಲ್ಲಿ 1 ಶಾಲಾ ಕೊಠಡಿ, .10 ಲಕ್ಷದಲ್ಲಿ ಮ್ಯಾದನೇರಿಯಲ್ಲಿ ಸಿಸಿ ರಸ್ತೆ, .1.30 ಕೋಟಿಯಲ್ಲಿ ಕುದರಿಮೋತಿ ಮ್ಯಾದನೇರಿ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಸಚಿವ ಹಾಲಪ್ಪ ಆಚಾರ ಅವರು ಚಾಲನೆ ನೀಡಿದರು. ರಾಜ್ಯದಲ್ಲೇ ಮೊದಲು: ಗ್ರಾಮೀಣ ಪ್ರದೇಶದ ಕಸ ವಿಲೇವಾರಿ ವಾಹನಕ್ಕೆ ಜಿಪಿಎಸ್‌..!

PREV
Read more Articles on
click me!

Recommended Stories

ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!
ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ: ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!