ವಾಹನ ಸಿಗದೆ ಪರದಾಟ: ತುಂಬು ಗರ್ಭಿಣಿಯರಿಬ್ಬ​ರ​ನ್ನು ಆಸ್ಪತ್ರೆಗೆ ಕರೆ ತಂದ ತಹಸೀಲ್ದಾರ್‌!

By Kannadaprabha NewsFirst Published Apr 19, 2020, 2:48 PM IST
Highlights

ಆಸ್ಪತ್ರೆಗೆ ಬರಲು ವಾಹನ ಇಲ್ಲದೇ ಪರದಾಡುತ್ತಿದ್ದ ಇಬ್ಬರು ಗರ್ಭಿಣಿಯರು| ತಮ್ಮ ವಾಹನದಲ್ಲೇ ಕರೆ ತಂದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮರೆದ ತಹಸೀಲ್ದಾರ್‌ ಕೆ. ವಿಜಯಕುಮಾರ|
 

ಹೂವಿನಹಡಗಲಿ(ಏ.19): ತುಂಬು ಗರ್ಭಿಣಿಯರಿಬ್ಬರು ಆರೋಗ್ಯ ತಪಾಸಣೆಗೆಂದು ಹೂವಿನಹಡಗಲಿ ಸಾರ್ವಜನಿಕ ಆಸ್ಪತ್ರೆಗೆ ಬರಲು ವಾಹನ ಇಲ್ಲದೇ ಪರದಾಡುತ್ತಿರುವಾಗ ತಹಸೀಲ್ದಾರ್‌ ಕೆ. ವಿಜಯಕುಮಾರ ತಮ್ಮ ವಾಹನದಲ್ಲೇ ಕರೆ ತಂದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮರೆದಿದ್ದಾರೆ.

ಹೌದು, ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿದ್ದು, ವಾಹನಗಳ ವ್ಯವಸ್ಥೆ ಇಲ್ಲದೇ, ತಾಲೂಕಿನ ಕೊಯಿಲಾರಗಟ್ಟಿ ಗ್ರಾಮದ ಇಬ್ಬರು ತುಂಬು ಗರ್ಭಿಣಿಯರು ಹೆರಿಗೆ ತಪಾಸಣೆಗೆಂದು, ಪಟ್ಟಣದ ಆಸ್ಪತ್ರೆಗೆ ಬರಲು ವಾಹನ ಇಲ್ಲದೇ ಪರದಾಡುತ್ತಿರುವಾಗ, ಸೋವೇನಹಳ್ಳಿಯಿಂದ ಹೂವಿನಹಡಗಲಿ ಕಡೆಗೆ ಬರುತ್ತಿದ್ದ ತಹಸೀಲ್ದಾರ್‌ ವಿಚಾರಣೆ ಮಾಡಿ ಅವರನ್ನು ಆಶಾ ಕಾರ್ಯಕರ್ತೆಯರೊಂದಿಗೆ ತಮ್ಮ ವಾಹನದಲ್ಲಿ ಕರೆ ತಂದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಸಂಕಷ್ಟದಲ್ಲೂ ರಾಜಕೀಯ ಮಾಡುತ್ತಿರುವ ಪುಡಿ ರಾಜಕಾರಣಿಗಳು..!

ವಾಹನದಲ್ಲಿ ಬರುವಾಗ ಅವರಿಗೆ ಕೊರೋನಾ ಜಾಗೃತಿ ಬಗ್ಗೆ ಮಾಹಿತಿ ನೀಡುವ ಜತೆಗೆ ಜಾಗ್ರ​ತೆಯಾಗಿ ಇರುವಂತೆ ಸೂಚನೆ ನೀಡಿದ್ದಾರೆ.
 

click me!