ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಸ್ತುತದ ಪರಿಸ್ಥಿತಿಗೆ ಶೀಘ್ರವಾಗಿ ಸ್ಪಂದಿಸುವ ಸಲುವಾಗಿ ಮೆಸೂರಿನ ಜೆಕೆ ಟೈರ್ ಮತ್ತು ಇಂಡಸ್ಟ್ರೀಸ್ ಸಂಸ್ಥೆಯ ಎಂಜಿನಿಯರ್‌ಗಳ ತಂಡವು ಮಿತವ್ಯಯಕಾರಿ, ಕೈಗೆಟುಕುವ ಹಾಗೂ ಸಾಗಿಸಲು ಸುಲಭವಾದ ವೆಂಟಿಲೇಟರನ್ನು ದಾಖಲೆಯ ಅವಧಿಯಲ್ಲಿ ತಯಾರಿಸಿದ್ದಾರೆ.
ಮೈಸೂರು(ಏ.19): ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಸ್ತುತದ ಪರಿಸ್ಥಿತಿಗೆ ಶೀಘ್ರವಾಗಿ ಸ್ಪಂದಿಸುವ ಸಲುವಾಗಿ ಮೆಸೂರಿನ ಜೆಕೆ ಟೈರ್ ಮತ್ತು ಇಂಡಸ್ಟ್ರೀಸ್ ಸಂಸ್ಥೆಯ ಎಂಜಿನಿಯರ್‌ಗಳ ತಂಡವು ಮಿತವ್ಯಯಕಾರಿ, ಕೈಗೆಟುಕುವ ಹಾಗೂ ಸಾಗಿಸಲು ಸುಲಭವಾದ ವೆಂಟಿಲೇಟರನ್ನು ದಾಖಲೆಯ ಅವಧಿಯಲ್ಲಿ ತಯಾರಿಸಿದ್ದಾರೆ.
ಕಾರ್ಖಾನೆ ಮುಖ್ಯಸ್ಥ ವಿ. ಈಶ್ವರ ರಾವ್ ಮಾರ್ಗದರ್ಶನದಲ್ಲಿ ಎಂಜಿನಿಯರಿಂಗ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಸ್.ಕೆ. ಶೆಟ್ಟಿನೇತೃತ್ವದ ಎಲ್ಲಾ ಎಂಜಿನಿಯರುಗಳ ತಂಡವು ಸಣ್ಣಗಾತ್ರ, ಸರಳ, ಸಾಗಿಸಲು ಸುಲಭವಾದ, ಮಿತ ವ್ಯಯಕಾರಿ, ಪರಿಣಾಮಕಾರಿ ಆಗಿರುವ ಹಾಗೂ ಪ್ರಪ್ರಥಮ ಗುಣಮಟ್ಟದ ಪ್ರೊಟೊಟೈಪ್ ವೆಂಟಿಲೇಟರನ್ನು ಕೇವಲ 72 ಗಂಟೆಗಳ ದಾಖಲೆಯ ಅವಧಿಯಲ್ಲಿ ವಿನ್ಯಾಸಗೊಳಿಸಿ ತಯಾರಿಸಿದ್ದಾರೆ.
undefined
ರಂಗಸ್ಥಳದಲ್ಲಿ ರಾಮ, ಲವ-ಕುಶರು, ಮನೆಯಲ್ಲೀಗ ಹಾಡುಗಾರರು! ಹಂಡೆ, ತಪ್ಪಲೆಯೇ ರಿದಂ ಪ್ಯಾಡ್
ಈ ಉಪಕರಣವು ಬಳಕೆದಾರ ಸ್ನೇಹಿಯಾಗಿದೆ. ಬಳಕೆದಾರರು ಪ್ರತಿ ನಿಮಿಷದ ಶ್ವಾಸೋಚ್ವಾಸವನ್ನು ಮತ್ತು ಆಮ್ಲಜನಕದ ಪರಿಮಾಣವನ್ನು ತಮಗೆ ಅನುಕೂಲವಾಗುವ ಹಾಗೇ ಸೆಟ್ ಮಾಡಿಕೊಳ್ಳಬಹುದು. ಈ ವೆಂಟಿಲೇಟರಿನ ಕೇವಲ 9 ಕೆ.ಜಿ ಇರುವುದರಿಂದ, ಇದನ್ನು ಸುಲಭವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ಯಬಹುದಾಗಿದೆ.
ಆಘಾತಕಾರಿ ಸುದ್ದಿ; ಕರ್ನಾಟಕದ ಬಳಿ ಇರೋದು ಇಷ್ಟೇ ವೆಂಟಿಲೇಟರ್ಸ್!
ಮೈಸೂರಿನ ಅಪೊಲೊ ಬಿಜಿಎಸ್ ಆಸ್ಪತ್ರೆ ನೆರವಿನೊಂದಿಗೆ ಈ ವೆಂಟಿಲೇಟರಿನ ಯಶಸ್ವಿ ವೆದ್ಯಕೀಯ ಪ್ರಯೋಗ ಕೈಗೊಳ್ಳುವ ಪ್ರಕ್ರಿಯೆಯಲ್ಲಿದೆ. ತದನಂತರ ಸಂಬಂಧಪಟ್ಟಸರ್ಕಾರದಿಂದ ಸೂಕ್ತ ಹಾಗೂ ಅಗತ್ಯ ಅನುಮೋದನೆಯೊಂದಿಗೆ, ಮೈಸೂರಿನ ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ಒದಗಿಸಲು ಆಡಳಿತ ವರ್ಗ ಉದ್ದೇಶಿಸಿದೆ.